-ಒಂದೇ ದಿನ 4,169 ಹೊಸ ಪ್ರಕರಣ, 104 ಸಾವು
50 ಸಾವಿರ ಗಡಿ ದಾಟಿದ ಕರೋನಾ ಸೋಂಕಿತ ಸಂಖ್ಯೆ
ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಕರೋನಾ ಸೋಂಕಿನ ಆರ್ಭಟ ರಾಜ್ಯದಲ್ಲಿ ಜೋರಾಗಿದ್ದು, ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕರೋನಾದಿಂದ ಅಪಾದ ಸುಳಿಯಲ್ಲಿ ಕರ್ನಾಟಕ ಸಿಲುಕಿರುವ ಲಕ್ಷಣಗಳು ಕಂಡು ಬಂದಿದೆ. ಮಾಡು ಇಲ್ಲವೇ ಮಡಿ ಎನ್ನುವ ಪರಿಸ್ಥಿತಿ ರಾಜ್ಯಕ್ಕೆ ಒದಗಿದೆ.
ಇಲ್ಲಿಯವರೆಗಿನ ಎಲ್ಲ ದಾಖಲೆಗಳನ್ನು ಕರೋನಾ ಇಂದು ಬ್ರೇಕ್ ಮಾಡಿದ್ದು, ರಾಜ್ಯದಲ್ಲಿ ಒಂದೇ ದಿನ 4,169 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 51,422ಕ್ಕೇರಿಕೆ ಆಗಿದೆ. ಇವತ್ತು 104 ಜನರನ್ನು ಮಹಾಮಾರಿ ಕರೋನಾ ಬಲಿ ಪಡೆದಿದೆ.
ಬೆಂಗಳೂರಿನಲ್ಲಿ ಸಹ ಕರೋನಾ ಸ್ಫೋಟವಾಗಿದ್ದು, ಒಂದೇ ದಿನ 2,344 ಪ್ರಕರಣಗಳು ವರದಿ ಆಗಿವೆ. ಒಟ್ಟಾರೆ ಬೆಂಗಳೂರಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ 1032 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕರೋನಾ ಮರಣ ನರ್ತನಕ್ಕೆ ಇವತ್ತು 70 ಮಂದಿ ಬಲಿಯಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 507ಕ್ಕೆ ಏರಿಕೆ ಆಗಿದೆ.
ಇಡೀ ಬೆಂಗಳೂರನ್ನು ಕರೋನಾ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು 198 ವಾರ್ಡ್ ನಲ್ಲಿ 196 ವಾರ್ಡ್ ಗಳಲ್ಲಿ 50ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳಿವೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನದಲ್ಲಿ ಗರಿಷ್ಠ 23,451 ಕರೋನಾ ಪರೀಕ್ಷೆಗಳನ್ನು ನಡೆಸಲಾಗಿದ್ದು, ಸಹಜವಾಗಿ ಹೆಚ್ಚಿನ ಸಂಖ್ಯೆಯ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಇಲ್ಲಿಯವರೆಗೆ ರಾಜ್ಯದಲ್ಲಿ ನಡೆಸಲಾದ ಕರೋನಾ ಪರೀಕ್ಷೆಗಳ ಸಂಖ್ಯೆ 9,25,477ಕ್ಕೆ ಏರಿಕೆಯಾಗಿದೆ.
ಗುರುವಾರ ಒಟ್ಟು 1,263 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 497 ಜನರು ಡಿಸ್ಚಾರ್ಜ್ ಆಗಿದ್ದಾರೆ. ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 2,344, ದಕ್ಷಿಣ ಕನ್ನಡ 238, ಧಾರವಾಡ 176, ವಿಜಯಪುರ 144, ಮೈಸೂರು 130, ಕಲಬುರಗಿ 123, ಉಡುಪಿ 113, ರಾಯಚೂಉರ 101, ಬೆಳಗಾವಿ 92, ಉತ್ತರ ಕನ್ನಡ 79, ಚಿಕ್ಕಬಳ್ಳಾಪುರ 77, ಬೀದರ್ 53, ಶಿವಮೊಗ್ಗ 46, ಬಳ್ಳಾರಿ 44, ಗದಗ 44, ಬಾಗಲಕೋಟೆ 39, ಯಾದಗಿರಿ 34, ಕೊಪ್ಪಳ 32, ಹಾಸನ 31, ಬೆಂಗಳೂರು ಗ್ರಾಮಾಂತರ 31, ಚಿಕ್ಕಮಗಳೂರು 30, ದಾವಣಗೆರೆ 25, ಚಿತ್ರದುರ್ಗ 21, ಹಾವೇರಿ 18, ಕೊಡಗು 18, ಚಾಮರಾಜನಗರ 16, ತುಮಕೂರು 12, ಮಂಡ್ಯ 11 ಮತ್ತು ರಾಮನಗರದಲ್ಲಿ 4 ಪ್ರಕರಣಗಳು ಗುರುವಾರ ಪತ್ತೆಯಾಗಿವೆ
……….
ಒಂದೇ ದಿನ 6 ಜಿಲ್ಲೆಗಳಲ್ಲಿ ಶತಕ ಬಾರಿಸಿದ ಕರೋನಾ
ಕರ್ನಾಟಕದಲ್ಲಿ ಗುರುವಾರ ಡೆಡ್ಲಿ ವೈರಸ್ ಹಲವು ದಾಖಲೆಗಳನ್ನು ಮಾಡಿದೆ. ಬೆಂಗಳೂರಿನಲ್ಲಿ ಎರಡು ಸಾವಿರದ ಗಡಿ ದಾಟಿದೆ. ದಕ್ಷಿಣ ಕನ್ನಡದಲ್ಲಿ ಡಬಲ್ ಸೆಂಚೂರಿ ದಾಖಲಿಸಿದೆ. ಉಳಿದಂತೆ ಒಟ್ಟು ಆರು ಜಿಲ್ಲೆಗಳಲ್ಲಿ ನೂರಕ್ಕೂ ಅಧಿಕ ಕರೋನಾ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆಯಾಗಿದ್ದು, ಕರೋನಾದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
………..
ಜಿಲ್ಲೆ ಸೋಂಕಿತರು ಮರಣ
ಬೆಂಗಳೂರು 25288 507
ದಕ್ಷಿಣ ಕನ್ನಡ 2758 52
ಧಾರವಾಡ 1574 44
ವಿಜಯಪುರ 1120 19
ಮೈಸೂರು 1320 50
ಕಲಬುರಗಿ 2503 38
ಉಡುಪಿ 1900 03
ರಾಯಚೂರು 915 12
ಬೆಳಗಾವಿ 694 17
ಉತ್ತರಕನ್ನಡ 825 08
ಚಿಕ್ಕಬಳ್ಳಾಪುರ 567 15
ಬೀದರ್ 1191 53
ಶಿವಮೊಗ್ಗ 605 11
ಬಳ್ಳಾರಿ 2067 51
ಗದಗ 414 09
ಕೋಲಾರ 375 08
ಬಾಗಲಕೋಟೆ 587 25
ಯಾದಗಿರಿ 1535 01
ಕೊಪ್ಪಳ 389 05
ಹಾಸನ 770 24
ಬೆಂ.ಗ್ರಾಮಾಂತರ 440 07
ಚಿಕ್ಕಮಗಳೂರು 200 07
ದಾವಣಗೆರೆ 658 22
ಚಿತ್ರದುರ್ಗ 154 01
ಹಾವೇರಿ 331 07
ಕೊಡಗು 236 03
ಚಾಮರಾಜನಗರ 212 03
ತುಮಕೂರು 564 16
ಮಂಡ್ಯ 798 02
ರಾಮನಗರ 396 09
ಇತರೆ 36 03
ಒಟ್ಟು 51422 1032
|
|
|