Saturday, 21st December 2024

Actor Chetan Ahimsa: ‘ಹಿಂದೂ’ ಪದವನ್ನು ಸಂದರ್ಭೋಚಿತವಾಗಿ ಅರ್ಥ ಮಾಡಿಕೊಳ್ಳಬೇಕು: ನಟ ಚೇತನ್

ಬೆಂಗಳೂರು: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ನಟ ಚೇತನ್‌ ಅಹಿಂಸಾ (Actor Chetan Ahimsa) ಅವರು ಇದೀಗ, ಹಿಂದೂ ಪದವನ್ನು ಹೇಗೆ ಸಂದರ್ಭೋಚಿತವಾಗಿ ಅರ್ಥ ಮಾಡಿಕೊಳ್ಳಬೇಕು ಎಂಬುವುದರ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಹಿಂದೂಸ್ತಾನ್‌, ಹಿಂದೂ ರಾಷ್ಟ್ರ ಹಾಗೂ ಹಿಂದೂ-ಇಸಂ ಎಂಬ ಪದಗಳು ಹೇಗೆ ಬಳಕೆಗೆ ಬಂದವು ಎಂಬ ಬಗ್ಗೆ ನಟ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಹಿಂದೂ’ ಪದವನ್ನು ಸಂದರ್ಭೋಚಿತವಾಗಿ ಅರ್ಥೈಸಿಕೊಳ್ಳಬೇಕು:

  1. ‘ಹಿಂದೂ-ಸ್ತಾನ್’ ಎಂಬುದು ಭೌಗೋಳಿಕ ಪದವಾಗಿದ್ದು, ಇದು ಸಂಸ್ಕೃತದ ‘ಸಿಂಧು’ (ಇಂಡಸ್) ನ ಪರ್ಷಿಯನ್ ಕಾಗ್ನೇಟ್‌ನಿಂದ ಬಂದಿದೆ.
  2. ‘ಹಿಂದೂ ರಾಷ್ಟ್ರ’ ಹಿಂದುತ್ವದ ಏಕಶಿಲೆಯ, ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಗುರಿಯಾಗಿದೆ.
  3. ಹಿಂದೂ-ಇಸಂ ಎಂಬುದು ವೈದಿಕ ಧರ್ಮಕ್ಕಾಗಿ 1816ರಲ್ಲಿ ರಾಜಾರಾಮ್‌ ಮೋಹನ್‌ ರಾಯ್‌ ಅವರು ಮೊದಲು ಬಳಸಿರುವ ಪದವಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Kaun Banega Crorepati: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 12.5 ಲಕ್ಷ ಗೆದ್ದ ಕಾರ್ಕಳ ಮೂಲದ ಯುವಕ!