Friday, 22nd November 2024

ಪಾವಗಡ ಕಮ್ಮ ಚಾರಿಟೇಬಲ್‌ ಟ್ರಸ್ಟ್ ವತಿಯಿಂದ ಉಚಿತ ವಸತಿ ನಿಲಯಕ್ಕೆ ದಾಖಲಾತಿ ಪ್ರಾರಂಭ

ಪಾವಗಡ: ಪಟ್ಟಣದಲ್ಲಿರುವ ಶ್ರೀಮತಿ ನಾರಾಯಣಮ್ಮ, ಡಿ.ಟಿ.ಹನುಮಂತ ರಾಯಪ್ಪ ಸ್ಮಾರಕ ಕಮ್ಮ ಬಾಲಕರ ಉಚಿತ ವಸತಿ ನಿಲಯ ಮತ್ತು ಶ್ರೀಮತಿ ಸಾಕಮ್ಮ ಶ್ರೀ ಗಂಗೀನೇನಿ ರಾಮಯ್ಯ ಸ್ಮಾರಕ ಕಮ್ಮ ಬಾಲಕಿಯರ ಉಚಿತ ವಸತಿ ನಿಲಯಗಳಿಗೆ 2022-23 ನೇ ಸಾಲಿಗೆ ಪಾವಗಡ ಪಟ್ಟಣದಲ್ಲಿ ಎಸ್.ಎಸ್. ಎಲ್.ಸಿ, ಪಿ.ಯು.ಸಿ, ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ತಾಲ್ಲೂಕಿನ ಕಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಮೆರಿಟ್‌ ಆಧಾರಿತ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಶೇಕಡಾ 90% ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ಇತರೆ ಹಿಂದುಳಿದ ವರ್ಗಗಳ ಬಾಲಕ, ಬಾಲಕಿಯರಿಗೂ ಕಮ್ಮ ಉಚಿತ ವಸತಿ ನಿಲಯಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕಮ್ಮ ಚಾರೀಟಬಲ್‌ ಟ್ರಸ್ಟ್‌ನ ಗೌರವಾನ್ವಿತ ಅಧ್ಯಕ್ಷ ಹೆಚ್.ರಾಮಾಂಜ ನೇಯ ಅಧ್ಯಕ್ಷ ವೈ.ಸತ್ಯನಾರಾಯಣಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಡಾ.ಜಿ. ವೆಂಕಟರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.

ಅರ್ಜಿ ಸಲ್ಲಿಸಲು 11.06.2022 ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ನಿಲಯ ಪಾಲಕರಾದ ಚಂದ್ರಶೇಖರ್.ಎನ್ ಮೊಬೈಲ್ ನಂ 9449738630, 8310579919, 8277568019 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.

ಅರ್ಜಿಗಳು ನೀಡುವ ಸ್ಥಳ:- ಸ್ವಾಮಿ ವಿವೇಕಾನಂದ ಪ್ರಥಮ ದರ್ಜೆ ಕಾಲೇಜು, ಶ್ರೀನಿವಾಸ ನಗರ ಪಾವಗಡ-561202.