ಸಿಂಧನೂರು: ತಾಲೂಕಿನಲ್ಲಿ ವಿವಿಧ ಯೋಜನೆ ಅಡಿಯಲ್ಲಿ ನೆನೆಗುದಿಗೆ ಬಿದ್ದ ಹಲವು ವಸತಿ ಯೋಜನೆಯ ಮನೆಗಳನ್ನು ಶೀಘ್ರವೇ ಮುಗಿಸುವಂತೆ ಅಧಿಕಾರಿಗಳಿಗೆ ವಸತಿ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಅವರು ಈ ಕುರಿತು ಮಂಗಳವಾರ ದೂರವಾಣಿ ಮೂಲಕ ಮಾತನಾಡಿ ಅರ್ಧಕ್ಕೆ ನಿಂತ ಕಾಮಗಾರಿ ಗಳಿಗೆ ಇಲ್ಲಿವರೆಗೂ ಹಣ ಮಂಜೂರು ಮಾಡಿಲ್ಲ ಹಾಗೂ ಹಲವು ಮನೆಗಳು ಬ್ಲಾಕ್ ಲಿಸ್ಟಿಗೆ ಹಾಕಿದ್ದಾರೆ ಇನ್ನು ಈಚೆಗೆ ನನ್ನ ಅವಧಿಯಲ್ಲಿ 310 ಮನೆಗಳ ನಿರ್ಮಾಣಕ್ಕೆ ಆದೇಶಿಸಲಾಗಿತ್ತು.
ಅವುಗಳನ್ನು ಶೀಘ್ರದಲ್ಲೇ ಮುಗಿಸುವಂತೆ ಸೂಚಿಸಿದ್ದಾರೆ ಹಾಗೂ ಇನ್ನಿತರ ಅನೇಕ ಯೋಜನೆಗಳ ಬಗ್ಗೆ ಸಚಿವರಿಗೆ ಚರ್ಚಿಸ ಲಾಗಿದೆ. ವಸತಿ ಯೋಜನೆ ಅಡಿಯಲ್ಲಿ ಬಡವರಿಗೆ ನ್ಯಾಯ ದೊರಕಿಸಿ ಕೊಡಲಾಗು ತ್ತದೆ ಯಾರು ಸಾರ್ವಜನಿಕರು ತೊಂದರೆಗೆ ಒಳ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.