Thursday, 12th December 2024

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

ಕೊಲ್ಹಾರ: ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತೋತ್ಸವದ ಅಂಗವಾಗಿ ಪಟ್ಟಣದ ಬಿಜೆಪಿ ಕಾರ್ಯಾಲಯ ದಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶಾಂತಾ ಬಿಳಗಿ, ಅಲ್ಪಸಂಖ್ಯಾತ ಮೋರ್ಚ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ನದಾಫ್, ಈರಯ್ಯ ಮಠಪತಿ, ಸಂಗಪ್ಪ ಹುಚ್ಚಪ್ಪಗೋಳ, ಮುದಿಯಪ್ಪ ಚೌದ್ರಿ, ಇಸ್ಮಾಯಿಲ್ ತಹಶೀಲ್ದಾರ್, ಹಮಜಾಹುಸೇನ್ ಕಂಕರಪೀರ್, ಶ್ರೀಶೈಲ್ ಗಿಡ್ಡಪ್ಪಗೋಳ, ಮುದುಕಪ್ಪ ಕಾಖಂಡಕಿ, ಸುಭಾಷ್ ಭಜಂತ್ರಿ ಪಟ್ಟಣ ಪಂಚಾಯತ್ ಸದಸ್ಯರಾದ ಬಾಬು ಭಜಂತ್ರಿ, ಅಪ್ಪಾಸಿ ಮಟ್ಟಿಹಾಳ, ವಿಸ್ತಾರಕರಾದ ರವಿ ದೇಶನ್ನವರ, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.