Saturday, 23rd November 2024

ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳಿಗಾಗಿ ಮತ್ತೆ ಪ್ರತಿಭಟನೆ: ಸಿದ್ದಗಂಗಮ್ಮ

ಪಾವಗಡ: ಹಲವು ಬಾರಿ ನಮ್ಮ ಬೇಡಿಕೆಗಳನ್ನು ಒತ್ತಾಯಿಸಿ ಪ್ರತಿಭಟನೆ ಗಳು ಮಾಡಿದರೂ ಸರ್ಕಾರ ಗಮನ ಸೆಳೆಯಲು ಮುಂದಾಗುತ್ತಿಲ್ಲ ಎಂದು ಪಾವಗಡ ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಆರೋಪಿಸಿದ್ದಾರೆ.

ತಾಲ್ಲೂಕಿನ ವಿವಿಧ ಅಂಗನವಾಡಿ ಕೇಂದ್ರ ಗಳಿಂದ ಗುರುವಾರ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವ ಮೂಲಕ ನಮ್ಮ ಸಮಸ್ಯೆ ಗಳನ್ನು ಮತ್ತೆ ಇನೋಂದು ಬಾರಿ ಸರ್ಕಾರಕ್ಕೆ ಮನವರಿಕೆ ಮಾಡುವ ಉದ್ದೇಶದಿಂದ ತಾಲ್ಲೂಕಿನ ಸುಮಾರು ನೂರು ಜನ ಅಂಗನ ವಾಡಿ ಕಾರ್ಯಕರ್ತರು ಹೊರಟಿದ್ದ ನಮ್ಮ ಮಹಿಳಾ ಮತ್ತು ಮಕ್ಕಳ ಸಚಿವರಾದ ಶಶಿಕಲಾ ಜೊಲ್ಲೆ ಅವರಿಗೆ ಸದನದಲ್ಲಿ ನಮ್ಮ ಪರ ಮತ್ತೊಂದು ಬಾರಿ ಸದನದಲ್ಲಿ ಪ್ರಸ್ತಾಪ ಮಾಡಬೇಕೆಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.