ಪಾವಗಡ : ಸರ್ಕಾರದಿಂದ 2018-19 ನೇ ಸಾಲಿನಲ್ಲಿ ಅಲೆಮಾರಿ ಜನಾಂಗಕ್ಕೆ 80 ಮನೆ ಗಳು ಮೂಂಜುರು ಆಗಿದ್ದು ಸರ್ಕಾರ ದಿಂದ 1 ಲಕ್ಷ 20 ಸಾವಿರ ಹಣ ಮನೆಗಾಗಿ ನೀಡ ಲಾಗುತ್ತಿದೆ. ಅದರೆ ಆ ಹಣ ಕೇವಲ ನೋಂದಣಿ, ಮನೆ ಮಂಜೂರು ಮಾಡುವ ಹಾಗೂ ಇತರೆ ಕಚೇರಿಯ ಕೆಲಸಕ್ಕೆ ಸರಿ ಹೊಂದುವಂತೆ ಸರ್ಕಾರ ಹಣ ಬಿಡುಗಡೆ ಮಾಡಲಾಗಿದೆ.
ಸರ್ಕಾರದ ಈ ಯೋಜನೆ ಎಂದಿಗೂ ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ಆದರಿಂದ ಮುಖ್ಯಮಂತ್ರಿ ಹಾಗು ವಸತಿ ಸಚಿವರಿಗೆ ನನ್ನ ಮನವಿ. ಸದನದಲ್ಲಿ ಇದರ ವಿಚಾರ ಚರ್ಚೆ ಮಾಡಿ, ಅಲೆಮಾರಿ ಜನಾಂಗಕ್ಕೆ ನೀಡಿರುವ ಮನೆಯ ಕಟ್ಟಲು ಹಣ ಬಿಡುಗಡೆಯಲ್ಲಿ ಸುಮಾರು ಐದು ಲಕ್ಷ ಹೆಚ್ಚುವರಿ ಹಣವನ್ನು ಫಲಾನುಭವಿಗಳಿಗೆ ನೀಡಿದರೆ ಯೋಜನೆ ಕಾರ್ಯ ರೂಪಗೊಳ್ಳು ತ್ತದೆ ಎಂದು ತಾಲ್ಲೂಕಿನ ಸಮಾಜ ಸೇವಕ, ಗಂಗಾ ಮತಸ್ಥರ ಸಂಘ(ಬೆಸ್ತ) ಅಧ್ಯಕ್ಷ ಡಿ.ವಿ.ಗೋಪಾಲ್ ವಿಶ್ಚವಾಣಿಗೆ ಹೇಳಿಕೆ ನೀಡಿ ದ್ದಾರೆ.