Sunday, 15th December 2024

ಕಲೆಯಲ್ಲಿ ಪರಾಂಗತ ಅಂಬರೀಶ: ರಮೇಶ ಗೋಳಸಾರ ಅಭಿಮತ

ಇಂಡಿ: ಕಲಾವಿದ ಅಂಬರೀಶ ಕಲೆಯಲ್ಲಿ ಸಾಕಷ್ಟು ಪರಾಂಗತನಾಗಿ ಇಡೀ ಜೀವನವೆ ಬಣ್ಣದ ಬದುಕಿನಲ್ಲಿ ಸಾಗಿ ಒಳ್ಳೇಯ ಛಾಯಾಗ್ರಾಹಕ ಎಂಬ ಪ್ರೀತಿಗೆ ಪಾತ್ರನಾಗಿದ್ದಾನೆ ಗೆಳೆಯನ ಅಗಲೀಕೆ ನೋವಾಗಿದೆ ಎಂದು ಪೋಟೋಗ್ರಾಪರ ಸಂಘದ ಕಾರ್ಯದರ್ಶಿ ರಮೇಶ ಗೋಳಸಾರ ಹೇಳಿದರು.

ಪಟ್ಟಣದಲ್ಲಿ ಇಂದು ಇಂಡಿ ತಾಲೂಕಾ ಪೋಟೋ ವಿಡಿಯೋಗ್ರಾಪರ ಸಂಘಟನೆಯಿAದ ಶೃದ್ದಾಂಜಲಿ ವೃತ್ತದಲ್ಲಿ ಖ್ಯಾತ ಛಾಯಾಗ್ರಾಹಕ ಹಾಗೂ ಕಲಾವಿದ ಅಂಬರೀಶ ನಿಧನದ ಪ್ರಯುಕ್ತ ಶೃದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಇಂಡಿ ಪಟ್ಟಣದಲ್ಲಿ ಕಲೆಗೆ ಎಷ್ಟು ಬೆಲೆ ಎಂದು ತೋರಿಸಿದ ಸ್ನೇಹಿತ ಅಂಬರೀಶ ಇತನ ಸಹಹೃದಯತೆ ಎಷ್ಟೋ ಕೊಂಡಾಡಿದರೂ ಸಾಲದು. ಕಳೆದ ಬಾರಿ ಸಾಹಸ ಸಿಂಹ ವಿಷ್ಣು ವರ್ಧನ ವೃತ್ತ ನಿರ್ಮಾಣ ಕ್ಕಾಗಿ ನೂತನಗೆಳೆಯ ಬಳಗ ಕಟ್ಟಿಕೊಂಡು ಒಂದು ಸಾಹಸ ಸಿಂಹ ವಿಷ್ಣುವರ್ಧನ ಅಭಿಮಾನಿ ಸಂಘ ಕಟ್ಟಿ ವಿಜಯಪೂರಕ್ಕೆ ಹೋಗುವ ರಸ್ತೆಯ ಮಧ್ಯ ವಿಷ್ಣು ವರ್ಧನ ವೃತ್ತ ಸ್ಥಾಪಿಸಲು ಶಾಸಕರ ಸಂಪರ್ಕದೊAದಿಗೆ ವೃತ್ತ ನಿರ್ಮಿಸಿ ಕನ್ನಡ ನಾಡಿಗೆ ಮತ್ತು ಸಿನೀಮಾ ರಂಗಕ್ಕೆ ,ಕಲಾವಿದರಿಗೆ ಗೌರವ ನೀಡಿದ ಕೀರ್ತಿ ಅಂಬರೀಶವರಿಗೆ ಸಲ್ಲುತ್ತದೆ. ಇಂತಹ ಸಂಘಟನಾ ಚತುರನ ಅಗಲೀಕೆಯಿಂದ ಇಡೀ ಫೊಟೋಗ್ರಾಪರ್ ಬಳಗಕ್ಕೆ ತುಂಬಲಾಗದ ನಷ್ಠಾಗಿದೆ. ಭಗವಂತ ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಮಲ್ಲಿಕಾರ್ಜನ ಕುದುರೆ, ಪ್ರವೀಣ ಮಠ, ಅಶೋಕ ಜಾಧವ, ಪ್ರಕಾಶ ಕುಸಗಲ್, ಮಹೇಶ ನಾವಿ, ಸಂಜು , ಗೋಪಾಲ ಸಣ್ಣತಂಗಿ, ಸುರೇಶ ಮಾಡ್ಯಾಳ, ಶಿವಾನಂದ ಮಠ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಸಂತಾಪ ಸೂಚನೆ : ಶಾಸಕ ಯಶವಂತರಾಯಗೌಡ ಪಾಟೀಲ, ಜಾವೀಧ ಮೋಮಿನ, ಭೀಮಣ್ಣಾ ಕೌಲಗಿ,ಅನೀಲ ಜಮಾದಾರ, ಧರ್ಮರಾಜ ವಾಲೀಕಾರ, ಪ್ರಶಾಂತ ಕಾಳೆ, ರವಿ ವಗ್ಗೆ, ಸಂತೋಷ ಪರಶೇನರವರ್, ಹುಚ್ಚಪ್ಪ ತಳವಾರ ಆದರ್ಶ ಚಿತ್ರಕಲಾ ಮಹಾವಿಧ್ಯಾಲಯದ ಅಧ್ಯಕ್ಷ ಸ್ಟೀಫನ್ ಶಿರೋಮಣಿ, ನಿವೃತ್ತ ಪ್ರಾಚಾರ್ಯ ಈರಣ್ಣಾ ಪೂಜಾರ, ಬಿ.ಎನ್ ಮಾರ್ಕಪ್ಪನ್ನಹಳ್ಳಿ, ವಿಜಯಕುಮಾರ ಗೌಳಿ ಅನೇಕರು ಕಂಬನಿ ಮಿಡಿದಿದ್ದಾರೆ.