Sunday, 15th December 2024

ಆವಾಸ್ ಯೋಜನೆ ಅಡಿಯಲ್ಲಿ ಮನೆ ಒದಗಿಸಲಾಗಿದೆ

ಇಂಡಿ: ಕೇಂದ್ರ ಸರ್ಕಾರದಿಂದ ೮೦ ಕೋಟಿ ಜನರಿಗೆ ಆಹಾರಧಾನ್ಯ ಒದಗಿಸುವ ಕಾರ್ಯ ಬಿಜೆಪಿ ಸರ್ಕಾರ ಮಾಡಿದೆ. ದೇಶದ ೩.೫೦ ಕೋಟಿ ಬಡಜನರಿಗೆ ಜನರಿಗೆ ಆವಾಸ್ ಯೋಜನೆ ಅಡಿಯಲ್ಲಿ ಮನೆಗಳನ್ನು ಒದಗಿಸಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಬಾಗವತ್ ಕರಾಡೆ ಹೇಳಿದರು.

ಅವರು ಬುಧವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೋವಿಡ್ ಸಂದರ್ಬದಲ್ಲಿ ದೇಶದ ೨೨೩ ಕೋಟಿ ಜನರಿಗೆ ವ್ಯಾಕ್ಸಿನ್ ಒದಗಿಸಿದಲ್ಲದೆ,೪೦ ದೇಶಗಳಿಗೆ ವ್ಯಾಕ್ಸಿನ್ ರಫ್ತು ಮಾಡಲಾಗಿದೆ.ಉಜ್ವಲ ಯೋಜನೆ ಅಡಿಯಲ್ಲಿ ೯ ಕೊಟಿಗಿಂತ ಹೆಚ್ಚು ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ. ೫ ಲಕ್ಷದಂತೆ ೫೦ ಕೋಟಿ ಜನರಿಗೆ ಅಯುಷ್ಯ ಮಾನ ಆರೋಗ್ಯ ವಿಮೆ ಕಲ್ಪಿಸಲಾಗಿದೆ.ಭದ್ರಾ ಯೋಜನೆಗೆ ೫೩೦೦ ಕೋಟಿ ಕೇಂದ್ರ ಸರ್ಕಾರ ಬಿಡುಗೆ ಮಾಡಿದೆ.

ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ೭೯ ಸಾವಿರ ಕೋಟಿ ಹಣ ಖರ್ಚು ವ್ಯಯಿಸ ಲಾಗಿದೆ. ದೇಶದಲ್ಲಿ ೭ ವೈದ್ಯಕೀಯ ಕಾಲೇಜು ಗಳಿದ್ದು, ಬಿಜೆಪಿ ಸರ್ಕಾರ ಬಂದ ಮೇಲೆ ೨೨ ವೈದ್ಯಕೀಯ ಕಾಲೇಜುಗಳು ಇಂದು ಕಾರ್ಯ ನಿರ್ವಹಿಸುತ್ತಿವೆ. ಶೇ. ೯೦ ರಷ್ಟು ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ ತರಲಾಗಿದೆ.

ವೈದ್ಯಕೀಯ ಸ್ನಾತಕೋತ್ತರ ಪದವಿ ಸೀಟ್‌ಗಳನ್ನು ಹೆಚ್ಚಿಸಲಾಗಿದೆ.ಇಂಡಿ ಭಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಿದ್ದು ಬಿಜೆಪಿ ಸರ್ಕಾರ.ಧರ್ಮದ ಆಧಾರದಲ್ಲಿ ಮೀಸಲಾತಿ ತರಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯದಲ್ಲಿ ಬಹುಮತದ ಸರ್ಕಾರ ತರುವುದು ಅವಶ್ಯಕತೆ ಇದ್ದು, ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು. ಇಂಡಿ ಅಭ್ಯರ್ಥಿ ಕಾಸುಗೌಡ ಬಿರಾದಾರ ಅವರಿಗೆ ಹೆಚ್ಚಿನ ಮತಗಳನ್ನು ನೀಡುವುದರ ಮೂಲಕ ಬಿಜೆಪಿ ಪಕ್ಷದ ಬಲಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ,ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು,ಬಿಜೆಪಿ ಸರ್ಕಾರ ಬಡವರ ಪರವಾಗಿದೆ. ಸರ್ಕಾರಗಳು ನೌಕರಿ ನೀಡುವುದಕ್ಕಿಂತ ನೌಕರಿ ಒದಗಿಸುವ ವ್ಯಕ್ತಿಯನ್ನು ನಿರ್ಮಾಣ ಮಾಡುವ ಗುರಿ ಹೊಂದಿದೆ ಎಂದು ಹೇಳಿದವರು,ಇದಕ್ಕಾಗಿ ಪ್ರಧಾನಮಂತ್ರಿ ಸ್ವನೀದಿ ಯೋಜನೆ ಜಾರಿಗೆ ತಂದಿದ್ದು,ಯುವಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡರಾದ ದಯಾಸಾಗರ ಪಾಟೀಲ,ರಾಜಶೇಖರ ಯರಗಲ್ಲ,ಭೀಮಸಿಂಗ ರಾಠೋಡ ಮೊದಲಾದವರು ಈ ಸಂದರ್ಭಲ್ಲಿ ಇದ್ದರು.