Thursday, 21st November 2024

Bagheera Collection: ಎರಡನೇ ದಿನ ಕಚ್ಚಿಕೊಂಡ ಬಘೀರ ಕಲೆಕ್ಷನ್‌, ಹೀಗಿದೆ ವಿವರ ನೋಡಿ

bagheera

ಬೆಂಗಳೂರು: ಶ್ರೀಮುರಳಿ (Sri Murali) ನಟನೆಯ ‘ಬಘೀರ’ ಚಿತ್ರವು (Bagheera Kannada movie) ದೀಪಾವಳಿ (Deepavali 2024) ಪ್ರಯುಕ್ತ ಎರಡನೇ ದಿನ ಥಿಯೇಟರ್‌ಗಳಲ್ಲಿ ತುಂಬಿದ ಶೋಗಳನ್ನು ಕಂಡಿತು. ಅಕ್ಟೋಬರ್ 31ರಂದು ಬಘೀರ ಅಬ್ಬರದ ರಿಲೀಸ್ ಕಂಡಿತ್ತು. ಉತ್ತಮ ಕಲೆಕ್ಷನ್‌ (Bagheera Collection) ಮಾಡಿರುವ ಬಘೀರದ ಜಯಭೇರಿ ಬಾರಿಸುವಲ್ಲಿ ದೀಪಾವಳಿ ಹಬ್ಬದ ರಜೆಗಳು ಸಹಕಾರಿ ಆಗುತ್ತಿವೆ.

ಬಘೀರ ಸಿನಿಮಾ ನೋಡುಗರಿಂದಲೂ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿದೆ. ಎಲ್ಲರೂ ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಮೊದಲ ದಿನಕ್ಕಿಂತ ಎರಡನೇ ದಿನ ಚಿತ್ರ ಉತ್ತಮ ಗಳಿಕೆ ಮಾಡಿದೆ. ‘ಬಘೀರ’ ಸಿನಿಮಾ ಮೊದಲ ದಿನ 3.25 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದರಲ್ಲಿ ಕನ್ನಡದ್ದು 2.55 ಕೋಟಿ ರೂಪಾಯಿ ಆದರೆ, ಉಳಿದ ಮೊತ್ತ ತೆಲುಗು ವರ್ಷನ್​ನಿಂದ ಹರಿದು ಬಂದಿತ್ತು. ಎರಡನೇ ದಿನ ಚಿತ್ರ 3.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ಹೇಳಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 6.30 ಕೋಟಿ ರೂಪಾಯಿ ಆಗಿದೆ.

ಸದ್ಯ ಎರಡನೇ ದಿನ ಕಲೆಕ್ಷನ್ ದೊರೆತಿರೋದು ಕನ್ನಡದ ವರ್ಷನ್​ನಿಂದ ಮಾತ್ರ ಎಂದು ಹೇಳಲಾಗುತ್ತಿದೆ. ತೆಲುಗು ಕಲೆಕ್ಷನ್ ಸೇರಿದರೆ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಲಿದೆ. ಈ ಚಿತ್ರದಿಂದ ನಟ ಶ್ರೀಮುರಳಿ ಅವರಿಗೆ ದೊಡ್ಡ ಗೆಲುವು ಸಿಕ್ಕಂತೆ ಆಗಿದೆ.

ಶ್ರೀಮುರಳಿ ಹೀರೋ ಆಗಿ ಬಘೀರದ ನಟನೆಗೆ ಶ್ಲಾಘನೆ ಪಡೆಯುತ್ತಿದ್ದಾರೆ. ಡಾ. ಸೂರಿ ಅವರ ನಿರ್ದೇಶನದ ಮ್ಯಾಜಿಕ್ ಪ್ರತಿ ಫ್ರೇಮ್‌ನಲ್ಲೂ‌ ಕಾಣುತ್ತಿದೆ. ‘ಕೆಜಿಎಫ್’, ‘ಕೆಜಿಎಫ್ 2’, ‘ಕಾಂತಾರ’ ರೀತಿಯ ಸಿನಿಮಾಗಳನ್ನು ನಿರ್ಮಿಸಿದ ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರವನ್ನು ನಿರ್ಮಾಣ ಮಾಡಿದೆ ಎಂಬ ಕಾರಣಕ್ಕೂ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿತ್ತು. ಈ ನಿರೀಕ್ಷೆಯನ್ನು ಸಿನಿಮಾ ತಲುಪಿದೆ.

2019ರಲ್ಲಿ ರಿಲೀಸ್ ಆದ ‘ಭರಾಟೆ’ ವಿಫಲತೆ ಕಂಡಿತು. 2021ರಲ್ಲಿ ‘ಮದಗಜ’ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಈ ಎಲ್ಲಾ ಕಾರಣಕ್ಕೆ ಶ್ರೀಮುರಳಿ ಅವರಿಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇತ್ತು. ಅದು ಪೂರ್ಣಗೊಂಡಿದೆ. ‘ಬಘೀರ’ ಚಿತ್ರದಿಂದ ಅವರು ಗೆಲುವಿನ ನಗೆ ಬೀರಿದ್ದಾರೆ.

ಇಂದು (ನವೆಂಬರ್ 2) ಹಾಗೂ ನಾಳೆ (ಡಿಸೆಂಬರ್ 3) ಚಿತ್ರ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹಬ್ಬ ಹಾಗೂ ವೀಕೆಂಡ್ ಕಾರಣದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಣೆ ಮಾಡುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಕಥೆ ಬರೆದಿದ್ದು ಪ್ರಶಾಂತ್ ನೀಲ್ ಅವರು. ಪ್ರಶಾಂತ್ ನೀಲ್​ಗೆ ತೆಲುಗಿನಲ್ಲಿ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ, ಅಲ್ಲಿನವರು ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Bagheera Movie: ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರದ ‘ಪರಿಚಯವಾದೆ’ ಸಾಂಗ್‌ ರಿಲೀಸ್‌