Tuesday, 26th November 2024

ಬಕ್ರೀದ್ ಆಚರಣೆ ವೇಳೆ ಶಾಂತಿ, ಸೌಹಾರ್ದ ಕಾಪಾಡಿ: ಪಿ.ಎಸ್.ಐ ಹೊನ್ನಪ್ಪಾ ಯರಝರ್ವಿ

ಬಸವನಬಾಗೇವಾಡಿ: ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ಬಕ್ರೀದ್ ಹಬ್ಬದ ಆಚರಣೆ ವೇಳೆಯಲ್ಲಿ ಪ್ರತಿ ಯೊಬ್ಬರು ಶಾಂತಿ, ಸೌಹಾರ್ದ ಕಾಪಾಡಬೇಕು’ ಎಂದು ಪಿ.ಎಸ್.ಐ ಹೊನ್ನಪ್ಪಾ ಯರಝರ್ವಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇಲಾಖೆಯಿಂದ ಬಕ್ರೀದ್ ಹಬ್ಬದ ನಿಮಿತ್ಯ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಅಕ್ರಮ ಜಾನುವಾರುಗಳ ಸಾಗಣಿಕೆ ತಡೆಗೆ ಹೊಸ ಕಾನೂನು ಬಂದಿದ್ದು, ಇದನ್ನೂ ಯಾರು ಉಲ್ಲಂಘಿಸ ಬಾರದು. ಕಾನೂನು ಬಾಹಿರವಾಗಿ ಪ್ರಾಣಿ ಬಲಿ ಮಾಡು ವುದು ಕಂಡು ಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸ ಲಾಗುವದು ಯಾರು ಕಾನೂನು ಕೈಗೈತ್ತಿಕೊಳ್ಳಬಾರದು. ಎಲ್ಲಾ ಸಮುದಾಯದವರು ಸೇರಿ ಬಕ್ರೀದ್ ಹಬ್ಬವನ್ನು ಶಾಂತಿಯುತ ವಾಗಿ ಆಚರಿಸಬೇಕೆಂದು ಹೇಳಿದರು.

ಮುಖಂಡ ಸಂಗಮೇಶ ಓಲೇಕಾರ ಮಾತನಾಡಿ ಜಗತ್ತಿಗೆ ಸಮಾನತೆ ಸಾರಿದ ವಿಶ್ವಗುರು ಬಸವೇಶ್ವರರು ಜನಿಸಿದ ನಾಡಿನಲ್ಲಿ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲಾ ಹಿಂದು ಮುಸ್ಲಿಂ ಎಂಬ ಜಾತಿ ಭೇದ ಮಾಡದೆ ಎಲ್ಲರು ಒಂದೇ ಎಂಬ ಭಾವನೆಯಿಂದ ಎಲ್ಲ ಹಬ್ಬಗಳನ್ನು ಆಚರಿಸುತ್ತ ಬಂದಿದ್ದು ಮುಂಭರುವ ದಿನಗಳಲ್ಲಿಯೂ ಅದೆ ತರನಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುವದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ, ಬಸವ ಸೈನ್ಯ ಅಧ್ಯಕ್ಷ ಶಂಕರಗೌಡ ಬಿರಾದಾರ, ಮುಖಂಡರಾದ ಪರಶುರಾಮ ಅಡಗಿಮನಿ, ಬಸಣ್ಣ ದೇಸಾಯಿ, ಖಾಜಂಬರ ನದಾಫ್, ರವಿ ರಾಠೋಡ, ಕಲ್ಲು ಸೊನ್ನದ, ಮಹಾಂತೇಶ ಸಾಸಾಬಾಳ, ಕಮಲಸಾ ಕೊರಬು ಸೇರಿದಂತೆ ಮುಂತಾದವರು ಇದ್ದರು.