ಬೆಂಗಳೂರು: ರಾಜಧಾನಿ ಹೊರವಲಯದ ನೆಲಮಂಗಲದಲ್ಲಿ ಯಮಸ್ವರೂಪಿಯಾಗಿ ಬಂದ ಕಂಟೈನರ್ ಲಾರಿ ಉರುಳಿ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಬಲಿಯಾಗಿದ್ದ ದುರ್ಘಟನೆ ಶನಿವಾರ ಮಧ್ಯಾಹ್ನ ನಡೆದಿತ್ತು. ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರಿನ ಮೇಲೆ ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿ ಡಿವೈಡರ್ಗೆ ಗುದ್ದಿ ಕಾರಿನ ಮೇಲೆ ಬಿದ್ದಿತ್ತು. ಪರಿಣಾಮ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿ, ಕಾರಿನಲ್ಲಿದ್ದ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಚಲಿಸುತ್ತಿದ್ದ ಲಾರಿ ಏಕಾಏಕಿ ಕಾರಿನ ಮೇಲೆ ಬೀಳುತ್ತಿರುವ ಭೀಕರ ಸಿಸಿಟಿವಿ ದೃಶ್ಯ ಇದೀಗ ಲಭ್ಯವಾಗಿದೆ.
ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಳೇಕೆರೆ ಬಳಿ ಈ ಭೀಕರ ದುರಂತ ಸಂಭವಿಸಿತ್ತು. ಬೆಂಗಳೂರಿನ ಐಎಸ್ಡಿ ಸಾಫ್ಟವೇರ್ ಸಲ್ಯೂಷನ್ ಕಂಪನಿ ಮಾಲೀಕ ಚಂದ್ರಮ್ಯಾಗಪ್ಪ ಗೋಳ(48) ಮತ್ತು ಕುಟುಂಬದವರಾದ ಗೌರಾಬಾಯಿ(42), ಮಕ್ಕಳಾದ ದೀಕ್ಷಾ(12), ಜಾನ್(16), ಆರ್ಯ(6), ವಿಜಯಲಕ್ಷ್ಮಿ(36) ಮೃತಪಟ್ಟಿದ್ದರು.
CCTV footage captured the harrowing moment when a container truck lost control and toppled onto a #Volvo XC90 car and a two-wheeler on the Bengaluru National Highway, leading to the tragic loss of six lives. The incident occurred near #Nelamangala, highlighting the dangers of… pic.twitter.com/jLOCydktZi
— Madhuri Adnal (@madhuriadnal) December 21, 2024
ಅತೀ ವೇಗವಾಗಿ ಬಂದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಬಂದು ಸರಣಿ ಅಪಘಾತ ಮಾಡಿ, ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದರು. ಸರಣಿ ಅಪಘಾತದಲ್ಲಿ ಒಂದು ಕಾರು, ಬೈಕುಗಳು, ಬಸ್ಸು ಜಖಂಗೊಂಡಿದ್ದವು.
6 people travelling in a car died when a container lorry fell on the car at National Highway near Nelamanagala in Bengaluru Rural District.. pic.twitter.com/0HTzbKxojD
— Yasir Mushtaq (@path2shah) December 21, 2024
ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ತಕ್ಷಣ ಮೂರು ಕ್ರೇನ್ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಕಾರಿನ ಮೇಲಿದ್ದ ಕಂಟೈನರ್ ಅನ್ನು ತೆರವುಗೊಳಿಸಿದ್ದರು. ಬಳಿಕ ಸ್ಥಳೀಯರ ನೆರವಿನಿಂದ ಕಾರಿನೊಳಗೆ ಸಿಕ್ಕಿಕೊಂಡಿದ್ದ ಆರು ಮಂದಿಯ ಮೃತದೇಹಗಳನ್ನು ಹೊರಗೆ ತೆಗೆದು, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು.
No car or Road in India is safe, if you are lucky you will return home safe. This is the condition of one of the most safest car in the world.
— Mast Moula (@RespectedSar) December 21, 2024
Six dead after container falls on car in Bengaluru https://t.co/yCzF47ShBZ pic.twitter.com/M186cjhaRk
ಐಎಎಸ್ಟಿ ಸಾಫ್ಟ್ವೇರ್ ಸಲ್ಯೂಷನ್ಸ್ ಕಂಪನಿ ಸ್ಥಾಪಿಸಿ ಸುಮಾರು 300 ಜನರಿಗೆ ಉದ್ಯೋಗ ಕೊಟ್ಟಿರುವ ಚಂದ್ರಯಾಗಪ್ಪ ಅವರು ಎರಡು ತಿಂಗಳ ಹಿಂದಷ್ಟೆ ಐಷಾರಾಮಿ ವೋಲ್ವೋ ಕಾರು ಖರೀದಿಸಿದ್ದರು. ಕುಟುಂಬದೊಂದಿಗೆ ವಾರಾಂತ್ಯದ ಪ್ರವಾಸಕ್ಕೆ ಹೊರಟಿದ್ದ ವೇಳೆ ಈ ದುರಂತ ಸಂಭವಿಸಿದೆ.