Saturday, 14th December 2024

BBMP Property Tax: ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಬಾಕಿದಾರರಿಗೆ ‘OTS’ ಯೋಜನೆ ಮತ್ತೆ ವಿಸ್ತರಣೆ

bbmp property tax

ಬೆಂಗಳೂರು: ನಗರದ ಆಸ್ತಿ ತೆರಿಗೆ ಪಾವತಿದಾರರಿಗೆ ಸರ್ಕಾರ ಮತ್ತೆ ಗುಡ್ ನ್ಯೂಸ್ (Good news) ನೀಡಿದೆ. ತೆರಿಗೆ ಪಾವತಿ (BBMP Property Tax) ಬಾಕಿದಾರರಿಗೆ ಒಂದು ಬಾರಿ ಪರಿಹಾರ (OTS) ಯೋಜನೆಯನ್ನು ಬಿಬಿಎಂಪಿಯಲ್ಲಿ ನವೆಂಬರ್‌ 30ರವರೆಗೆ ವಿಸ್ತರಿಸಲಾಗಿದೆ.

ಈ ಕುರಿತಂತೆ ಬಿಬಿಎಂಪಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಒಂದು ಬಾರಿ ಪರಿಹಾರ ಯೋಜನೆಯನ್ನು ವಿಸ್ತರಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವರಾದ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರಕ್ಕೆ ಬಿಬಿಎಂಪಿ ಕೃತಜ್ಞತೆ ಸಲ್ಲಿಸುತ್ತದೆ. ನಾಗರಿಕರ ಮನವಿಗಳ ಮೇರೆಗೆ ಒಂದು ಬಾರಿ ಪರಿಹಾರ ಯೋಜನೆಯನ್ನು ದಿನಾಂಕ: 30-11-2024ರವರೆಗೆ ವಿಸ್ತರಿಸಲಾಗಿದೆ ಎಂದಿದೆ.

ಈ ಹಿಂದೆ ಅಂತಿಮ ದಿನಾಂಕವನ್ನು ಸೆ.15 ಹಾಗೂ ನಂತರ ಸೆ.30ಕ್ಕೆ ನಿಗದಿಪಡಿಸಲಾಗಿತ್ತು. ಈಗ ಮತ್ತೆ ವಿಸ್ತರಿಸಲಾಗಿದೆ.

ಒಂದು ಬಾರಿ ಪರಿಹಾರ ಯೋಜನೆ ಯಾಕೆ?

ಈ ಯೋಜನೆಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ವರ್ಷಗಳಿಂದ ಬಾಕಿ ಉಳಿಸಿಕೊಂಡವರಿಗೆ, ಒಂದೇ ಬಾರಿಗೆ ಪಾವತಿಯ ಮೂಲಕ ಸೆಟಲ್‌ ಮಾಡುವ ಅವಕಾಶ ಒದಗಿಸಿದೆ.

  • ಇದರಲ್ಲಿ ಆಸ್ತಿ ತೆರಿಗೆ ಮೇಲಿನ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗಿದೆ.
  • ಬಾಕಿಯ ಮೇಲಿನ ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ.
  • ವಸತಿ ಮತ್ತು ಮಿಶ್ರ ಬಳಕೆಯ ಆಸ್ತಿಗಳ ಆಸ್ತಿ ತೆರಿಗೆ ಬಾಕಿ ವಸೂಲಾತಿ ಪರಿಷ್ಕರಣೆ ಮತ್ತು ಮೌಲ್ಯಮಾಪನ ಮಾಡದ ಆಸ್ತಿಗಳಿಗೆ 5-ವರ್ಷಗಳಿಗೆ ಸೀಮಿತವಾಗಿರುತ್ತದೆ.

ಎಲ್ಲಾ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸುವ ಮೂಲಕ ಮುಖ್ಯಧಾರೆಗೆ ಸೇರಲು ಈ ಐತಿಹಾಸಿಕ ಯೋಜನೆಯ ಕೊನೆಯ ಅವಕಾಶದ ಪ್ರಯೋಜನವನ್ನು ಪಡೆದುಕೊಳ್ಳಲು ಎಲ್ಲರಿಗೂ ವಿನಂತಿಸಲಾಗಿದೆ ಎಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಸಾರ್ವಜನಿಕ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

ಇದನ್ನೂ ಓದಿ: BBMP property Tax: ಬೆಂಗಳೂರಿಗರಿಗೆ ಗುಡ್ ನ್ಯೂಸ್, ಆಸ್ತಿ ತೆರಿಗೆ ಪಾವತಿ ಸಮಯ ವಿಸ್ತರಣೆ