ಇಂಡಿ: ಸ್ಟೇಶನ ರಸ್ತೆಯ ಜೆಡಿಎಸ್ ಕಾರ್ಯಾಲಯದಿಂದ ಜೆಡಿಎಸ್ ಅಧಿಕೃತ ಅಭ್ಯರ್ಥಿ ಬಿ.ಡಿ ಪಾಟೀಲ ಅಪಾರ ಕಾರ್ಯಕರ್ತ ರೊಂದಿಗೆ ಮತ್ತು ಮುಖಂಡರೊ0ದಿಗೆ ವಿಶೇಷ ಪೂಜೆ ಸಲ್ಲಿಸಿ ಬಹಿರಂಗ ನಾಮಪತ್ರ ಸಲ್ಲಿಸಿದರು.
ಜೆಡಿಎಸ್ ಕಾರ್ಯಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕರ್ತರು ಮತ್ತು ಮುಖಂಡ ರೊ0ದಿಗೆ ಸಾರ್ವಜನಿಕ ಉದ್ದೇಶಿಸಿ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾತನಾಡಿ ಅವರು ಈ ಭಾಗದ ನೀರಾವರಿ ಕ್ರಾಂತಿಗೆ ಅಂದಿನ ಪ್ರಧಾನ ಮಂತ್ರಿ ದೆವೇಗೌಡರ ಕೊಡುಗೆ ಸಾಕಷ್ಟು ದೀನ ದುರ್ಬಲರ ಬಡವರ ಚಿಂತನೆ ಮಾಡುವ ಏಕೈಕ ಪಕ್ಷ ಜೆಡಿಎಸ್ ಇಂತಹ ಮಾತೃ ಹೃದಯದ ಪಕ್ಷ ಮುಂಬರುವ ದಿನಗಳಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಇಂದಿನ ಜನಸಾಗರ ನೋಡಿದರೆ ನಾನು ಯಾವ ಜನ್ಮದ ಪುಣ್ಯ ಮಾಡಿದ್ದೇನೆ ಗೊತ್ತಿಲ್ಲ ಸ್ವಯಂ ಪ್ರೇರಣೆಯಿಂದ ಸಾಗರೋಪಾದಿಯಲ್ಲಿ ಮತಕ್ಷೇತ್ರದ ಜನರು ಬಂದಿದ್ದಾರೆ ನನ್ನ ಗೆಲುವಿಗೆ ಈ ದೇವರ ಆರ್ಶೀವಾದ ಸದಾ ಇರಲಿ ನಿಮ್ಮ ಮನೆಯ ಮಗನಾಗಿ ದುಡಿಯುತ್ತೇನೆ ಎಂದರು.
ಈ ಸಂಧರ್ಬದಲ್ಲಿ ಜೆಡಿಎಸ್ ಮುಖಂಡರಾದ ಮಾಜಿ ಶಾಸಕ ರವಿಕಾಂತ ಪಾಟೀಲ,ಬಿ.ಜಿ ಪಾಟೀಲ, ನಾನಾಗೌಡ ಬಿರಾದಾರ, ಸಿದ್ದು ಡಂಗಾ, ಮ ಹಿಬ ಬೇನೂರ, ನಾಗೇಶ ತಳಕೇರಿ, ಮುತ್ತಪ್ಪ ಪೋತೆ,ವಿಜಯಕುಮಾರ ಬೋಸಲೆ ಮರೇಪ್ಪ ಗಿರಣಿವಡ್ಡರ್, ನಾನಾಗೌಡ ಪಾಟೀಲ, ಸೇರಿದಂತೆ ಅಪಾರ ಜನಸ್ತೋಮ ಕಾರ್ಯಕರ್ತರಿಗೆ ಕೈ ಬಿಸುತ್ತಾ ರಸ್ತೆಯ ಯುದ್ದಕ್ಕೂ ವಿನೂತನ ವಾದ್ಯಗಳ ವೈಭೋಗಗಳ ಮಧ್ಯ ಪಟ್ಟಣದ ಮಿನಿವಿಧಾನಸೌಧಾವರೆಗೆ ತೆರಳಿ ಉಪಕಂದಾಯವಿಭಾಗಾಧಿಕಾರಿ ರಾಮಚಂದ್ರ ಗಡದೆ ಇವರಿಗೆ ಜೆಡಿಎಸ್ ಅಭ್ಯರ್ಥಿ ಬಿ.ಡಿ ಪಾಟೀಲ ಬಹಿರಂಗ ನಾಮಪತ್ರ ಸಲ್ಲಿಸಿದರು.
*
ನಾನು ಬಿಜೆಪಿ ಟಿಕೇಟ ಆಕಾಂಕ್ಷಿಯಾಗಿದ್ದೆ ನನಗೆ ವಿಶ್ವಾಸ ಟಿಕೇಟ ನೀಡುವ ವಿಶ್ವಾಸ ಇತ್ತು ಆದರೆ ಕೊನೆಗಳಿಗೆಯಲ್ಲಿ ಕೈ ತಪ್ಪಿತ್ತು ಆದ್ದರಿಂದ್ದ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇನೆ. ಬಿ.ಡಿ ಪಾಟೀಲ ಒಳ್ಳೇಯ ಬಡ ವ್ಯಕ್ತಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತೇನೆ .
ಮಾಜಿ ಶಾಸಕ ರವಿಕಾಂತ ಪಾಟೀಲ