Sunday, 15th December 2024

Bengaluru News: ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರಿಗೆ ‘ಆಶ್ವಾಸನ ಪ್ರಶಸ್ತಿ’

Bengaluru News

ಬೆಂಗಳೂರು: ಬೆಂಗಳೂರಿನ ಆಶ್ವಾಸನ ಫೌಂಡೇಶನ್ ವತಿಯಿಂದ ನೀಡುವ 2024ನೇ ಸಾಲಿನ “ಆಶ್ವಾಸನ ಪ್ರಶಸ್ತಿ” ಗೆ ವಿವಿಧ ಕ್ಷೇತ್ರಗಳ ನಾಲ್ವರು ಹಿರಿಯ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ, ಬೆಂಗಳೂರಿನ (Bengaluru News) ಸಪ್ತಕ ಸಂಸ್ಥೆಯ ಜಿ.ಎಸ್ ಹೆಗಡೆ ತಿಳಿಸಿದ್ದಾರೆ. ಲಲಿತಾ ಶಿವರಾಮ ಉಭಯಕರ್ ಅವರಿಂದ 30 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಆಶ್ವಾಸನ ಫೌಂಡೇಶನ್ ಇಂದಿಗೂ ಹಿರಿಯರೇ ನಿರ್ವಹಿಸುತ್ತಿರುವ ಸೇವಾಸಂಸ್ಥೆಯಾಗಿದೆ.

ಈ ಸುದ್ದಿಯನ್ನೂ ಓದಿ | Dasara Jamboo Savari: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಸಿಎಂ ಚಾಲನೆ; LIVE ವಿಡಿಯೊ ಇಲ್ಲಿದೆ

ಆಶ್ವಾಸನಾ ಪ್ರಶಸ್ತಿಗೆ ಸಂಗೀತ ಸಂಘಟಕ ರಂಗನಗೌಡ ಕೆ. ನಾಡಿಗೇರ, (ಕುಂದಗೋಳ), ಯಕ್ಷಗಾನ ಕಲಾವಿದ ಶ್ರೀಧರ ಷಡಕ್ಷರಿ (ಕುಮಟಾದ ಕತಗಾಲ್), ತಬಲಾ ವಾದಕ ಎಂ.ನಾಗೇಶ್‌ (ಬೆಂಗಳೂರು) ಹಾಗೂ ಮೂರ್ತಿಗಳಿಗೆ ಹೊಯ್ಸಳ ಶೈಲಿಯಲ್ಲಿ ಹಿತ್ತಾಳೆಯ ಎರಕ ಹೊಯ್ದು ಹೊನ್ನ ಹೊಳಪು ನೀಡುವ ಕಾಯಕದಲ್ಲಿ ಕಳೆದ ಐದು ದಶಕಗಳಿಂದ ತೊಡಗಿರುವ ಪಿ. ಕೃಷ್ಣಮೂರ್ತಿ (ಬ್ಯಾಡರಹಳ್ಳಿ) ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | Tamate Movie: ತಮಟೆ ಚಿತ್ರದ ಶೋ ರೀಲ್ ಉದ್ಘಾಟಿಸಿ, ಶುಭ ಕೋರಿದ ಡಿ.ಕೆ. ಶಿವಕುಮಾರ್

ಅ.19 ರಂದು ಶನಿವಾರ ಬೆಳಗ್ಗೆ 9.45 ಕ್ಕೆ ಬೆಂಗಳೂರಿನ ಲೆವೆಲ್ಲೇ ರಸ್ತೆಯಲ್ಲಿರುವ ರೋಟರಿ ಹೌಸ್ ಆಫ್ ಫ್ರೆಂಡ್‌ಶಿಪ್‌ನಲ್ಲಿ ಪ್ರಶಸ್ತಿ ಪ್ರದಾನ ಹಮ್ಮಿಕೊಳ್ಳಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದವರಿಗೆ 15 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಆಶ್ವಾಸನ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಮಾಲವಿಕಾ ಉಭಯಕರ ಬಿಜೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.