Tuesday, 7th January 2025

Bengaluru News: ಶಿಕ್ಷಣದೊಂದಿಗೆ ಕಲಾ ಚಟುವಟಿಕೆಗಳಲ್ಲೂ ಮಕ್ಕಳು ಭಾಗಿಯಾಗುವಂತೆ ಪಾಲಕರು ಗಮನಹರಿಸಲಿ: ಎಚ್.ಎಸ್.ಸುಧೀಂದ್ರ

Bengaluru News

ಬೆಂಗಳೂರು: ಭಾರತೀಯ ಕಲೆಗಳನ್ನು ನಿತ್ಯದ ತಪಸ್ಸಿನಂತೆ ಅಭ್ಯಾಸ ಮಾಡಬೇಕು. ಹಾಗಿದ್ದರೆ ಮಾತ್ರ ಅವು ಜೀವನಪೂರ್ಣ ಆನಂದ ನೀಡುತ್ತವೆ ಎಂದು ಖ್ಯಾತ ಮೃದಂಗ ವಿದ್ವಾನ್ ಎಚ್.ಎಸ್. ಸುಧೀಂದ್ರ ಹೇಳಿದರು. ನಗರದ (Bengaluru News) ಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್ ಹಾಗೂ ಭೋಪಾಲ್‌ನ ಸ್ವರಾಲಯ ಸಂಗೀತ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 6ನೇ ವರ್ಷದ ಸಂಗೀತ ಮಹೋತ್ಸವದಲ್ಲಿ ‘ನಾದಲಯ ಸಿದ್ದಾಂತʼ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಶಾಲಾ ಶಿಕ್ಷಣದೊಂದಿಗೆ ಕಲಾ ಚಟುವಟಿಕೆಗಳಲ್ಲೂ ಮಕ್ಕಳು ಭಾಗಿಯಾಗುವಂತೆ ಪಾಲಕರು ಗಮನಹರಿಸಬೇಕು ಎಂದು ತಿಳಿಸಿದ ಅವರು, ಸಂಗೀತ ಕೊಡುವ ಆನಂದಕ್ಕೆ ಮಿತಿಗಳೇ ಇಲ್ಲ ಎಂದರು.

ಈ ಸುದ್ದಿಯನ್ನೂ ಓದಿ | Job Guide: ರಕ್ಷಣಾ ಸಚಿವಾಲಯದಲ್ಲಿದೆ 113 ಹುದ್ದೆ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ಸುಭದ್ರಮ್ಮ ಅವರು ತಮ್ಮ ಮೊಮ್ಮಗಳು ರಂಜಿನಿಯನ್ನು ನನ್ನ ಬಳಿ ಪಾಠಕ್ಕೆ ಕರೆದುಕೊಂಡು ಬರುತ್ತಿದ್ದ ಕಾಲದಿಂದಲೂ ನಾನು ಅವರನ್ನು ಬಲ್ಲೆ. ಮೊಮ್ಮಗಳು ಗಾಯನ, ಮೃದಂಗ ಕಲಿಯಬೇಕು ಎಂಬ ಉತ್ಕಟ ಬಯಕೆ ಅವರಲ್ಲಿತ್ತು. ಅವರು ಮಾಡಿದ ತ್ಯಾಗದ ಫಲವಾಗಿ ಇಂದು ನಮ್ಮೆದುರು ಒಬ್ಬ ವಿದುಷಿ ಕ್ರಿಯಾಶೀಲರಾಗಿದ್ದಾರೆ. ಅವರ ಸಂಸ್ಥೆಯಿಂದಲೇ ಪ್ರಶಸ್ತಿ ಸ್ವೀಕಾರ ಮಾಡಿರುವುದು ನನಗೆ ಹೆಮ್ಮೆ ಮೂಡಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ವಿದ್ವಾನ್ ಸುಧೀಂದ್ರ ಅವರಿಗೆ (ಸರೋಜಾ- ಭೀಮ ಭಟ್ ಸಿದ್ಧಾಂತಿ ಸ್ಮರಣಾರ್ಥ) ‘ನಾದಲಯ ಸಿದ್ದಾಂತʼ ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ವಿದ್ವಾನ್ ಎಸ್. ಶಂಕರ್ ಮಾತನಾಡಿ, ಕಲಾ ಲೋಕದಲ್ಲಿ ಇವರ ಬದ್ಧತೆ ಮಾದರಿಯಾಗಿದೆ. ವಿಖ್ಯಾತ ಕಲಾವಿದ ಶ್ರೀಮುಷ್ಣಂ ರಾಜಾರಾಯರ ಬಳಿ ಗುರುಕುಲವಾಸ ಮಾಡಿ ಮೃದಂಗ ವಾದನದಲ್ಲಿ ಪರಿಪಕ್ವಗೊಂಡ ಸುಧೀಂದ್ರ ಅವರು, ಗೌರವಾದರಕ್ಕೆ ಅರ್ಹರಾಗಿದ್ದಾರೆ. ರಂಜಿನಿ ಸಿದ್ಧಾಂತಿ ಅವರು ಅಜ್ಜ- ಅಜ್ಜಿ ಹೆಸರಿನಲ್ಲಿ ಉತ್ತಮ ಕಾರ್ಯವನ್ನು ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ | Scholarships for Students: ವಿದ್ಯಾರ್ಥಿಗಳೇ ಗಮನಿಸಿ; ನೀವು ಅಪ್ಲೈ ಮಾಡಬಹುದಾದ ಸ್ಕಾಲರ್‌ಶಿಪ್‌ಗಳ ಪಟ್ಟಿ ಇಲ್ಲಿದೆ

ಕಾರ್ಯಕ್ರಮದಲ್ಲಿ ಖ್ಯಾತ ಕೊಳಲು ವಿದ್ವಾಂಸ ಎಸ್.ಎ. ಶಶಿಧರ ಹಾಗೂ ವಿದ್ವಾನ್ ಡಾ. ಎನ್.ಜಿ. ರವಿ, ವಿದುಷಿ ರಂಜಿನಿ ಸಿದ್ಧಾಂತಿ ಇದ್ದರು. ನಂತರ ವಿದುಷಿ ಕಲಾವತಿ ಅವಧೂತರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಇದಕ್ಕೂ ಮುನ್ನ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ- ಮೃದಂಗ ವಾದನ ಗಮನ ಸೆಳೆಯಿತು.

Leave a Reply

Your email address will not be published. Required fields are marked *