Sunday, 22nd December 2024

Bengaluru Power Cut: ಡಿ.22ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

bengaluru power cut

ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ 220/66/11 ಕೆವಿ ಎಸ್.ಆರ್.ಎಸ್ ಪೀಣ್ಯ ಉಪಕೇಂದ್ರದಲ್ಲಿನ ಹಲವೆಡೆ ಡಿ.22 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3.30 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಪೀಣ್ಯ 10ನೇ ಮುಖ್ಯ ರಸ್ತೆ, 11ನೇ ಮುಖ್ಯ ರಸ್ತೆ, ಉಡುಪಿ ಹೋಟೆಲ್ ಸುತ್ತಮುತ್ತ, ಐಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮಿ ದೇವಿ ನಗರ, ಲಗ್ಗೆರೆ ಹಳೆ ಗ್ರಾಮ, ಲವಕುಶನಗರ, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6ನೇ, 7ನೇ, 8ನೇ, 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿಸಿಎಸ್ ಕ್ರಾಸ್ ರಸ್ತೆ ಬಳಿ, ಇಸ್ರೋ 1ನೇ, 2ನೇ ಕ್ರಾಸ್, 1ನೇ ಹಂತದ ಪಿಐಎ ಏರಿಯಾ ಮತ್ತು ಯಶ್ವಂತಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | Christmas Dress 2024: ಕ್ರಿಸ್‌ಮಸ್ ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಂಡಿಯಾದ ಲೇಡಿಸ್ ಫ್ಯಾಷನ್ ವೇರ್‌ಗಳಿವು!

ನೆಲೆಗೆದರನಹಳ್ಳಿ ಉಪಕೇಂದ್ರದ ಹಲವೆಡೆ ಡಿ.22 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಸುದ್ದಿಯನ್ನೂ ಓದಿ | Winter Neck Scarf Fashion: ವಿಂಟರ್‌ನಲ್ಲಿ ಕಾರ್ಪೋರೇಟ್ ಯುವತಿಯರ ನೆಕ್ ಸ್ಕಾರ್ಫ್ ಲವ್!

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನೆಲೆಗೆದರನಹಳ್ಳಿ, ಎಚ್‌ಎಂಟಿ ಲೇಔಟ್, ಶಿವಪುರ ಟಿ ಲೇಔಟ್, ಗೃಹಲಕ್ಷ್ಮಿ ಲೇಔಟ್, ಶಿವಪುರ ಬೆಳ್ಮಾರ್ ಲೇಔಟ್, ವಿನಾಯಕನಗರ, 8ನೇ ಮೈಲ್ ರಸ್ತೆ, ಜಾಲಹಳ್ಳಿ ಕ್ರಾಸ್, ಶೋಭಾ ಅಪಾರ್ಟ್‌ಮೇಂಟ್, ಅಮರಾವತಿ ಲೇಔಟ್, ಕರ್ನಾಟಕ ಆಂಟಿಬಯೋಟಿಕ್ಸ್ ಪ್ರೈವೇಟ್ ಲಿಮಿಟೆಡ್, ಕೆಮ್ಮಪ್ಪಯ್ಯ ಗಾರ್ಡನ್ ನಗರ,ಕೆಮ್ಮಪ್ಪಯ್ಯ ಟೈಪ್ ತಿಗಳರಪಾಳ್ಯ ಮುಖ್ಯ ರಸ್ತೆ, ಪರ್ಲ್ ರಸ್ತೆ, ಮಾರುತಿ ಕೈಗಾರಿಕಾ ಎಸ್ಟೇಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.