Sunday, 22nd December 2024

Bengaluru Power Cut: ಡಿ.23ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

Bengaluru power cut

ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ 66/11ಕೆವಿ ಇಸ್ರೊ ಉಪಕೇಂದ್ರದಲ್ಲಿನ ಹಲವೆಡೆ ಡಿ.23 ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.

ಈ ಸುದ್ದಿಯನ್ನೂ ಓದಿ | Drone Training: ಡ್ರೋನ್ ತರಬೇತಿಗೆ ಅರ್ಜಿ ಆಹ್ವಾನ; ಡಿ.23 ಕೊನೆ ದಿನ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಇಸ್ರೊ ಲೇಔಟ್ ಇಂಡಸ್ಟ್ರಿಯಲ್ ಏರಿಯಾ, ಕುಮಾರಸ್ವಾಮಿ ಲೇಔಟ್, ಯಲಚೇನಹಳ್ಳಿ, ಇಲಿಯಾಸ್ ನಗರ, ಗಂಗಾಧರ ನಗರ, ವಿವೇಕಾನಂದ ಕಾಲೋನಿ, ಪ್ರಗತಿಪುರ, ಸರಬಂಡೆಪಾಳ್ಯ, ಪ್ರತಿಭಾ ಇಂಡಸ್ಟ್ರಿಯಲ್ ಏರಿಯಾ, ಸುಪ್ರೀಂ ಲೇದರ್ ಗಾರ್ಮೆಂಟ್ಸ್, ಚಂದ್ರ ನಗರ, ಕಾಶಿ ನಗರ, ವಿಕ್ರಮ್ ನಗರ, ನಂಜಪ್ಪ ಲೇಔಟ್, ಬಿಕಾಸಿಪುರ, ಟೀಚರ್ಸ್ ಕಾಲೋನಿ, ಜೆ.ಎಚ್.ಬಿ.ಸಿ.ಎಸ್. ಲೇಔಟ್, ಬೇಂದ್ರೆ ನಗರ, ಈಶ್ವರನಗರ, ಮಿನಾಜ್ ನಗರ, ಕನಕ ಲೇಔಟ್, ಕನಕ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.