Tuesday, 12th November 2024

Bigg Boss Kannada 11: ಬಿಗ್ ಬಾಸ್ ರಿಯಾಲಿಟಿ ಶೋಗೆ ಪೊಲೀಸರ ನೋಟಿಸ್!

Swarga and Naraka

ರಾಮನಗರ: ಕಲರ್ಸ್‌ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ ಶೋ ಆಯೋಜನಕರಿಗೆ ಕುಂಬಳಗೋಡು ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ರಿಯಾಲಿಟಿ ಷೋನಲ್ಲಿ ಸ್ವರ್ಗ ಮತ್ತು ನರಕ ಟಾಸ್ಕ್‌ನಲ್ಲಿ ಮಹಿಳೆಯರನ್ನು ಅಕ್ರಮವಾಗಿ ಬಂಧನದಲ್ಲಿಟ್ಟ ಬಗ್ಗೆ ಷೋ ಆಯೋಜಕರಿಗೆ ನೋಟೀಸ್‌ ನೀಡಲಾಗಿದೆ.

ಸ್ವರ್ಗ ಮತ್ತು ನರಕ ಟಾಸ್ಕ್‌ನಲ್ಲಿ ಮಹಿಳೆಯರನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟಿರುವುದನ್ನು ಆಕ್ಷೇಪಿಸಿ ಮಹಿಳಾ ಆಯೋಗವು ಪೊಲೀಸರಿಗೆ ದೂರು ನೀಡಿತ್ತು. ‘ದೂರಿಗೆ ಸಂಬಂಧಿಸಿದಂತೆ ಹೇಳಿಕೆ ಪಡೆಯಲು ಷೋ ನಡೆಯುತ್ತಿರುವ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಆಯೋಜಕರು ಸಿಕ್ಕಿರಲಿಲ್ಲ. ಹಾಗಾಗಿ, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಭಾನುವಾರ ಆಯೋಜಕರು ಬಂದು ಹೇಳಿಕೆ ನೀಡಿ ಹೋಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಮುಂದಿನ ಆವೃತ್ತಿಗೆ ಕಿಚ್ಚ ಸುದೀಪ್‌ ಇಲ್ಲ

ಇವೆಲ್ಲದರ ನಡುವೆ ನಿರೂಪಕ ಕಿಚ್ಚ ಸುದೀಪ್‌ ಅವರು ಕಾರ್ಯಕ್ರಮಕ್ಕೆ ಗುಡ್‌ಬೈ ಹೇಳಿದ್ದಾರೆ. ಅಂದ ಹಾಗೆ ಅವರು ಈ ಬಾರಿಯ ಶೋ ಪೂರ್ತಿಗೊಳಿಸುತ್ತಾರೆ. ಆದರೆ ಮುಂದಿನ ಆವೃತ್ತಿಯಿಂದ ಇರುವುದಿಲ್ಲ ಎಂಬುದಾಗಿ ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಬಿಗ್​ ಬಾಸ್​ ಕನ್ನಡ ಸೀಸನ್‌ 11 ನನ್ನ ಕೊನೆಯ ನಿರೂಪಣೆ ಎಂದು ಪ್ರಕಟಿಸಿದ್ದಾರೆ. ಈ ಮೂಲಕ 11ನೇ ಆವೃತ್ತಿಯ ಆರಂಭದಲ್ಲಿಯೇ ಅವರು ಈ ಕಾರ್ಯಕ್ರಮವನ್ನು ತ್ಯಜಿಸುತ್ತಾರೆ ಎಂಬ ಸುದ್ದಿಗೆ ಖಾತರಿ ಸಿಕ್ಕಿದೆ.

ಬಿಗ್‌ಬಾಸ್‌ 11ನೇ ಆವೃತ್ತಿಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ನನಗೆ ಮತ್ತು ಕಾರ್ಯಕ್ರಮಕ್ಕೆ ತೋರಿದ ಪ್ರೀತಿ ರೇಟಿಂಗ್ಸ್‌ನಲ್ಲಿ ಪ್ರಸ್ತುತಿಯಾಗಿದೆ. ಈ 10 ಮತ್ತು ಮತ್ತೊಂದು ನಿಮ್ಮೊಂದಿಗೆ ಪಯಣ ಮಾಡಿದ್ದು ಉತ್ತಮವಾಗಿತ್ತು. ನಾನು ಈಗ ಏನು ಬೇರೆ ಕಡೆಗೆ ನನ್ನ ದೃಷ್ಟಿ ಹರಿಸಲು ಸೂಕ್ತ ಸಮಯವಾಗಿದೆ. ಇದು ನಿರೂಪಕನಾಗಿ ನನ್ನ ಕೊನೆಯ ಸೀಸನ್‌. ನನ್ನ ನಿರ್ಧಾರ ಮತ್ತು ಕಲರ್ಸ್‌ ಅನ್ನು ಇಷ್ಟು ವರ್ಷಗಳಿಂದ ಬಿಗ್‌ಬಾಸ್ ​​ಅನ್ನು ನೋಡಿದ ಎಲ್ಲರೂ ಗೌರವಿಸುತ್ತಾರೆ ಎಂಬದೇ ನನ್ನ ನಂಬಿಕೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ. ನಾನು ಕೂಡ ಇನ್ನಷ್ಟು ರಂಜಿಸುತ್ತೇನೆ. ಪ್ರೀತಿ ಮತ್ತು ಅಪ್ಪುಗೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಭರ್ಜರಿಗೆ ರೇಟಿಂಗ್‌

ಬಿಗ್‌ಬಾಸ್‌ 11 ಟಿಆರ್​ಪಿ (Target Rating Point) ಮತ್ತು ಟಿವಿಆರ್​ (Television Rating Point) ಗರಿಷ್ಠ ಪ್ರಮಾಣದಲ್ಲಿ ಗಳಿಸಿಕೊಂಡಿದೆ. ಈ ಮೂಲಕ ಉಳಿದೆಲ್ಲ ರಿಯಾಲಿಟಿ ಷೋ ಮತ್ತು ಸೀರಿಯಲ್​ಗಳನ್ನು ಹಿಂದಿಕ್ಕಿದೆ. ಇದೇ ಪೋಸ್ಟರ್ ಅನ್ನು ಹಾಕಿ ಸುದೀಪ್‌ ವಿದಾಯದ ಘೋಷಣೆ ಮಾಡಿದ್ದಾರೆ. ಇದೀಗ ಬಿಗ್​ಬಾಸ್​ 9.9. ಟಿವಿಆರ್​ ಗಿಟ್ಟಿಸಿದೆ. ಅದಕ್ಕಾಗಿ ಅವರು ವೀಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕೇಕ್​ ಕಟ್​ ಮಾಡುವ ಮೂಲಕ ಬಿಗ್​ಬಾಸ್​ ತಂಡವು ಇದನ್ನು ಸೆಲೆಬ್ರೇಟ್​ ಮಾಡಿದೆ.

ಕಿಚ್ಚನ ಪೋಸ್ಟ್ ಗೆ ಎಲ್ಲರೂ ಹೃದಯ ಛಿದ್ರವಾಗಿದೆ ಎಂದು ಬರೆದುಕೊಂಡಿದ್ದಾರೆ. ನೀವಿಲ್ಲದೆ ಬಿಗ್‌ಬಾಸ್ ಇಲ್ಲ ಅಣ್ಣ. ಕಿಚ್ಚನಿಲ್ಲದೆ ಬಿಗ್‌ಬಾಸ್‌ ಇಲ್ಲ ಎಂದು ಕೆಲವು ಮತ್ತೆ ಕೆಲವರು ಗೋಲ್ಡನ್ ಇರಾ ಎಂಡ್‌ ಆಯ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Bigg Boss Kannada 11: ಬಿಗ್‌ಬಾಸ್‌‌‌ನಲ್ಲಿ ಫ್ಯಾಷನ್‌ ಪ್ರಿಯರ ಮನಗೆದ್ದಿದೆ ಸುದೀಪ್‌ ಸೂಟ್‌! ಇದರ ದರ ಎಷ್ಟು?