ತುಮಕೂರು: ಟ್ರ್ಯಾಕ್ಟರ್‌ಗೆ ಬೈಕ್ ಗುದ್ದಿ ಮೂವರು ಸವಾರರು ಸ್ಥಳದಲ್ಲಿ ಮೃತಪಟ್ಟ ಘಟನೆ (Bike Accident) ಮಂಗಳವಾರ ಬೆಳ್ಳಂಬೆಳಗ್ಗೆ ಕೋರಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಮದ್ ಆಸೀಫ್ (12 ) ಮಮ್ತಾಜ್ (38) ಶಾಖೀರ್ ಹುಸೇನ್ (48) ಮೃತರು.
ತಾಲೂಕಿನ ಓಬಳಾಪುರ ಗೇಟ್ ಬಳಿ ಭೀಕರ ದುರಂತ ಸಂಭವಿಸಿದೆ. ಟ್ರ್ಯಾಕ್ಟರ್ ಟ್ರೈಲರ್‌ಗೆ ಬೈಕ್ ಗುದ್ದಿ
ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಮಧುಗಿರಿ ತಾಲ್ಲೂಕಿನ ಪುರವರದ ಗುಡ್ಡೇನಹಳ್ಳಿ ಗ್ರಾಮದ ನಿವಾಸಿಗಳು. ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್‌ಪಿ ಅಶೋಕ್, ಡಿವೈಎಸ್‌ಪಿ ಚಂದ್ರಶೇಖರ್ ಹಾಗೂ ಗ್ರಾಮಾಂತರ ಸಿಪಿಐ ಭೇಟಿ ನೀಡಿ ಪರಿಶೀಲಿಸಿದರು.
ಈ ಸುದ್ದಿಯನ್ನೂ ಓದಿ | Viral News: ಇದು ಓಯೋ ರೂಂ ಅಲ್ಲ… ʻರೋಮ್ಯಾನ್ಸ್ʼ ಮಾಡಿದರೆ ಹುಷಾರ್ ಎಂದ ಆಟೋ ಚಾಲಕ; ತಮಾಷೆ ಮಾಡಿದ ನೆಟ್ಟಿಗರು!
ಚಿರತೆಯ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ!
ತುಮಕೂರು: ಸಾಮಾನ್ಯವಾಗಿ ಹುಲಿ, ಚಿರತೆ ಕಂಡರೆ (leopard spotted) ಜನರು ಮೈಲಿ ದೂರ ಓಡುತ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ, ಚಿರತೆ ಬಾಲ ಹಿಡಿದು ಬೋನಿಗೆ ಹಾಕಿರುವುದು ಕಂಡುಂದಿದೆ. ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಆನಂದ್ ಎಂಬ ಯುವಕ ಚಿರತೆಯನ್ನು ಹಿಡಿದಿದ್ದು, ಆತನ ಚಾಕಚಕ್ಯತೆ ಮತ್ತು ಧೈರ್ಯ, ಸಾಹಸಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.ಅದನ್ನು ಸೆರೆ ಹಿಡಿಯಲು ಸತತ ಪ್ರಯತ್ನ ನಡೆದಿತ್ತು. ಈ ನಡುವೆ ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಆಗಮಿಸಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗದೇ ಕೈಚೆಲ್ಲಿ ಕುಳಿತರು. ಈ ವೇಳೆ ಅಲ್ಲಿಗೆ ಬಂದ ಆನಂದ ಚಿರತೆ ನೋಡಿ ಹಿಡಿಯಲು ಮುಂದಾಗಿ ಚಲಬಿಡದೆ ಕೊನೆಗೆ ಅದರ ಬಾಲ ಹಿಡಿದು ಬೋನಿಗೆ ಹಾಕಿದ್ದಾನೆ. ಯುವಕನ ನೋಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಕೊನೆಗೆ ಸುಮಾರು 5 ವರ್ಷದ ಚಿರತೆಯನ್ನು ಹಿಡಿದ ಆನಂದ್ ಅವರ ಸಾಹಸವನ್ನು ಕೊಂಡಾಡಿದ್ದಾರೆ.
ಗೋವಾಕ್ಕೆ ಹೋಗಿ ಬರುವಾಗ ಭೀಕರ ಅಪಘಾತ; ಇಬ್ಬರು ಯುವಕರ ದುರ್ಮರಣ
ಕೊರಟಗೆರೆ: ಬೆಳ್ಳಂಬೆಳಗ್ಗೆ ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕಂಬದಹಳ್ಳಿ ಹತ್ತಿರ ಸೋಮವಾರ ನಡೆದಿದೆ. ಗೋವಾಕ್ಕೆ ಹೋಗಿ ವಾಪಸ್ ಬರುವಾಗ ಭೀಕರ ಅಪಘಾತ (Road Accident) ನಡೆದಿದೆ.
ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದ ಬಸಣ್ಣನವರ ಮಗ ಪ್ರವೀಣ್ (23) ಹಾಗೂ ರಂಗನಾಥನವರ ಮಗ ಹರ್ಷೀತ್ (22) ಮೃತ ದುರ್ದೈವಿಗಳು. ಗೋವಾಕ್ಕೆ ಹೋಗಿ ಬರುವಾಗ ಕಂಬದಹಳ್ಳಿ ಗ್ರಾಮದ ಆನಂದ್ ಎಂಬುವರಿಗೆ ಸೇರಿದ ಲಾರಿಗೆ ಡಿಕ್ಕಿ ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದಾರೆ.
ಮೂವರು ಸ್ನೇಹಿತರು ಗೋವಾಕ್ಕೆ ಹೋಗಿದ್ದರು. ಈ ಮೂವರ ಪೈಕಿ ಹರ್ಷಾ ಎಂಬುವರು ತುಮಕೂರು ಜಿಲ್ಲೆಯ ಶಿರಾದಲ್ಲಿ ಇಳಿದಿದ್ದಾರೆ. ಈಗ ನಿದ್ದೆ ಬರುತ್ತಿದೆ, ನಾವು ನಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಬೆಳಗ್ಗೆ ಊರಿಗೆ ಹೋಗೋಣ ಎಂದು ಹೇಳಿದರೂ ಕೇಳದೆ ಇಬ್ಬರು ಅಲ್ಲಿಂದ ಬಂದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ.