ಗುಬ್ಬಿ: ತಲ್ವಾರ್ ಹಿಡಿದು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದ ಭೂಪನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆ ತಾಲ್ಲೂಕಿನಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಯುವಕರಿಬ್ಬರು ಮಾರ್ಕೆಟ್ ರಸ್ತೆಯಲ್ಲಿ ಸ್ನೇಹಿತರೊಂದಿಗೆ ತನ್ನ ಹುಟ್ಟು ಹಬ್ಬವನ್ನು ತಲ್ವಾರ್ ಮಾರಕಾಸ್ತ್ರ ಹಿಡಿದು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದು ಪಟ್ಟಣದ ಜನತೆಯಲ್ಲಿ ಭಯ ಹುಟ್ಟಿಸಿದೆ.
ತುಮಕೂರು ಜಿಲ್ಲೆಯಲ್ಲಿ ಸಮಾಜಘಾತುಕ ಕೃತ್ಯಗಳು ನಡೆಯುತ್ತಿವೆ ಎಂಬ ಸುದ್ದಿ ಕೆಲ ದಿನಗಳಿಂದ ಸದ್ದು ಮಾಡು ತ್ತಿರುವುದು ಒಂದೆಡೆಯಾದರೆ, ಗುಬ್ಬಿ ಪಟ್ಟಣದಲ್ಲಿ ಕಾನೂನಿನ ಭಯವಿಲ್ಲದೆ ಯುವಕನೊಬ್ಬ ರೌಡಿಯ ರೀತಿ ತಲ್ವಾರ್ ಹಿಡಿದು ಬಾಸ್ ಎಂಬ ಕೇಕ್ ಕತ್ತರಿಸುವ ದೃಶ್ಯವನ್ನು ವಿಡಿಯೋ ಮಾಡಿ, ಆತನ ಸ್ನೇಹಿತರು ತಮ್ಮ ಸ್ಟೇಟಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಭಯದ ವಾತಾವರಣ ಸೃಷ್ಟಿಸಿರುವುದು ಮತ್ತೊಂದೆ ಡೆಯಾಗಿದೆ.
ಗುಬ್ಬಿಯಲ್ಲಿ ಎಂದೂ ಈ ಮಟ್ಟದ ಹುಟ್ಟುಹಬ್ಬ ಆಚರಣೆ ಮಾಡಿದ್ದು ಕಂಡಿಲ್ಲ ಎಂದು ಅವರದ್ದೇ ಜನ ಈ ಆಚರಣೆ ಬಗ್ಗೆ ಖಂಡಿಸುತ್ತಿದ್ದಾರೆ. ಜನುಮ ದಿನದ ಆಚರಣೆ ಎಂದೂ ಮಾಡದ ಸಮುದಾಯದ ಯುವಕರು ಒಗ್ಗೂಡಿ ಬಾಸ್ ಎಂಬ ಅಕ್ಷರದ ಕೇಕ್ ಕತ್ತರಿಸಲು ತಲ್ವಾರ್ ಬಳಸಿದ ಬಗ್ಗೆ ಪೊಲೀಸರು ಜಾಣ ಮೌನ ತಾಳಿದ್ದಾರೆ.
ಹುಟ್ಟುಹಬ್ಬ ಆಯೋಜನೆ ಮಾಡಿದ ಯುವಕರು, ಕೇಕ್ ತಂದು ಸ್ನೇಹಿತರಾದ ಶಾರುಖ್ ಹಾಗೂ ಮುಗಲ್ ಪಾಷ ಎಂಬ ಇಬ್ಬರು ಯುವ ಮುಖಂಡರ ಜನುಮ ದಿನ ಆಚರಣೆ ಮಾಡಿದ್ದು ಈ ಪೈಕಿ ಓರ್ವ ತಲ್ವಾರ್ ಬಳಸಿ ಕೇಕ್ ಕತ್ತರಿಸಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು ಅವರದ್ದೇ ಸಮುದಾಯದ ಹಲವರು ಖಂಡಿಸಿ ಕೋಮು ಪ್ರಚೋದನಕಾರಿ ಕೆಲಸ ಇದು ಎನ್ನುತ್ತಿದ್ದಾರೆ.
ಇದನ್ನೂ ಓದಿ: Tumkur Dasara: ತುಮಕೂರು ದಸರಾ: ಸುದ್ದಿ ಮಾಧ್ಯಮಗಳಿಗೆ ಜಿಲ್ಲಾಧಿಕಾರಿಗಳಿಂದ ಅಭಿನಂದನೆ