Saturday, 7th September 2024

ಬಿಜೆಪಿಯಿಂದ ಬಂದ್ ಕರೆ: ಅಂಗಡಿ ಮುಂಗಟ್ಟು ಸಂಪೂರ್ಣ ಸ್ಥಬ್ಥ

ಹಗರಿಬೊಮ್ಮನಹಳ್ಳಿ: ಕ್ಷೇತ್ರದ ಕಾಂಗ್ರೇಸ್ ಶಾಸಕ ಎಸ.ಭೀಮಾನಾಯ್ಕ್ ಗೂಂಡಾ ವರ್ತನೆ ಹಾಗೂ ಬಿಜೆಪಿ ಪಕ್ಷದ ಕಾರ್ಯ ಕರ್ತರ ಮೇಲೆ ಹಲ್ಲೆಯನ್ನು ಖಂಡಿಸಿ ನೀಡಿದ್ದ ಬಂದ್‍ಗೆ ಪಟ್ಟಣದ ಸಂಪೂರ್ಣ ಬೆಂಬಲ ವ್ಯೆಕ್ತವಾಗಿದ್ದು ಅಂಗಡಿ ಮುಂಗಟ್ಟು ಗಳು ಸ್ಥಬ್ಥವಾಗಿದ್ದವು.

ಪಟ್ಟಣದಲ್ಲಿ ನ.11ರಂದು ನಡೆದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಭೀಮಾನಾಯ್ಕ್ ಮೂರ್ನಾಲ್ಕು ಕಾರುಗಳನ್ನು ತಂದು ಬ್ಯಾರಿಗೇಟ್‍ಗಳನ್ನು ಸರಿಸಿ ನೂರಾರು ಕರ್ಯಕರ್ತರ ಜೊತೆಗೂಡಿ ನಾಮಪತ್ರ ಸಲ್ಲಿಸಲು ಸದಸ್ಯರುಗಳ ಜೊತೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ, ಮಂಡಲ ಅಧ್ಯಕ್ಷ ವೀರೇಶ್ ಸ್ವಾಮಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದ್ದಲ್ಲದೆ ಎಸ್ಟಿ ಮೂರ್ಚಾದ ಅಧ್ಯಕ್ಷ ಗರಗ ಪ್ರಕಾಶರವರ ಮೇಲೆ ಹಲ್ಲೆ ಮಾಡಿದ್ದು ತೋಳ್‍ತಟ್ಟಿ ಬಿಜೆಪಿ ಕಾರ್ಯಕರ್ತರನ್ನು ಜಗಳಕ್ಕೆ ಆಹ್ವಾನ ನೀಡಿದ್ದಾರೆಂದು ವಿರೋಧಿಸಿ ಪಟ್ಟಣದ ಕಮಲ ಪಾಳಯ ನೀಡಿದ್ದ ಬಂದ್‍ಗೆ ಪಟ್ಟಣ ಭಾಗಶಃ ಸಾಥ್ ನೀಡಿದೆ.

ಬಿಜೆಪಿ ಜಿಲ್ಲಾಧ್ಯಾಕ್ಷ ಚನ್ನಬಸವನಗೌಡ ಮಾತನಾಡಿ ಶಾಸಕ ಸ್ಥಾನಕ್ಕೆ ಆಯ್ಕೆಯಾದ ವ್ಯಕ್ತಿಯ ಬಾಯಲ್ಲಿ ಇಂತಹ ಮಾತುಗಳು ಶೋಭೆ ತರುವುದಿಲ್ಲ, ಶಾಸಕ ಸ್ಥಾನದ ಮಹತ್ವ ತಿಳಿದುಕೊಂಡು ಮಾತನಾಡಬೇಕೆ ಹೊರತು ರೋಷಾವೇಷ ರಾಜಕೀಯದಲ್ಲಿ ಕೆಲಸಕ್ಕೆ ಬರುವುದಿಲ್ಲ, ಕ್ಷೇತ್ರದಲ್ಲಿ ಮಾಡುವಂತಹ ಅಬಿವೃಧ್ಧಿ ಕೆಲಸಗಳು ಬೇಕಾದಷ್ಟಿವೆ ಅದನ್ನು ಬಿಟ್ಟು ಕಾರ್ಯಕರ್ತರ ಮೇಲೆ ಪೌರುಷ ಸಮಂಜಸವಲ್ಲ, ಇಂದಿನ ಬಂದ್ ನೋಡಿದರೆ,ಮತದಾರನು ನೀಡಿರುವ ಎಚ್ಚರಿಕೆ ಗಂಟೆಯಾಗಿದೆ,ಶಾಸಕರು ತಪ್ಪನ್ನು ಸಮರ್ಥನೆ ಮಾಡುವುದಕ್ಕಿಂತ ಕ್ಷೇತ್ರದ ಅಭಿವೃಧ್ಧಿಯತ್ತ ಚಿತ್ತ ಹರಿಸುದು ಸೂಕ್ತ ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಮಾತನಾಡಿ ಅಮಾಯಕರ ಮೇಲೆ ಗುಂಡಾ ಕಾಯ್ದೆಯನ್ನು ಹಾಕಿಸಿ, ಕಳ್ಳ ಕಾಕರನ್ನು ಜೊತೆ ಗಿಟ್ಟುಕೊಂಡು ಅವರ ರಕ್ಷಣೆ ಮಾಡುತ್ತಿರುವುದು ಶಾಸಕತ್ವಕ್ಕೆ ನೀಡುತ್ತಿರುವ ಬೆಲೆಯಾಗಿದೆ, ಹಾಗೂ ಡಿಗ್ರಿ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ವಿತರಿಸುವ ಲ್ಯಾಪ್‍ಟಾಪ್‍ನಲ್ಲಿ ಕಮೀಷನ್ ಕೇಳಿದ್ದು, ರಾಜ್ಯ ಸರಕಾರದಿಂದ ಅಭಿವೃಧ್ಧಿ ಕಾರ್ಯಕ್ಕೆ ವ್ಯಾಯಿ ಸಿದ ಹಣದ ಲೆಕ್ಕಾಚಾರವೆಲ್ಲ ಕೆಲವೇ ತಿಂಗಳಲ್ಲಿ ಬಹಿರಂಗಗೊಳಿಸಿ ಬ್ರಷ್ಟಾಚಾರದ ಮುಖ ಕಳಚುವೆ ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅನಿಲ್ ನಾಯ್ಡು ಮಾತನಾಡಿ ಜಗಜಟ್ಟಿಗಳಂತೆ ತೋಳ್ ತೊಡೆ ತಟ್ಟುವುದಾದರೆ ಹಂಪಿ ಉತ್ಸವದಲ್ಲಿ ನಿರ್ಮಿಸುವ ಕುಸ್ತಿ ಅಖಾಡದಲ್ಲಿ ತಟ್ಟಲಿ ಅದು ಬಿಟ್ಟು ಕಾರ್ಯಕರ್ತರ ಮುಂದೆ ತಟ್ಟುವುದಲ್ಲ ಎಂದರು.
ಬಧ್ರವಾಡಿ ಚಂದ್ರು , ಪುರಸಭೆ ಮಾಜಿ ಅಧ್ಯಕ್ಷ ಜೋಗಿ ಹನುಮಂತ, ಗರಗ ಪ್ರಕಾಶ್ ಹಾಗೂ ಮುಖಂಡರು ಮಾತನಾಡಿದರು. ಪಕ್ಷದ ಪದಾಧಿಕಾರಿಗಳು, ಜನ ಪ್ರತಿನಿಧಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!