Thursday, 31st October 2024

ಸಿಂಧನೂರಿನಲ್ಲಿ ನ.20 ರಂದು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ: ಶೇಷಗಿರಿರಾವ್

ಸಿಂಧನೂರು: ಬಿಜೆಪಿ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆಯನ್ನು ನ.20 ರಂದು ನಗರದ ಸತ್ಯ ಗಾರ್ಡನ್ ನಲ್ಲಿ  ಹಮ್ಮಿಕೊಳ್ಳ ಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಕೊಲ್ಲಾ ಶೇಷಗಿರಿ ರಾವ್ ಹೇಳಿದರು.

ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಂಗಳವಾರ ಮಾತನಾಡಿದರು. ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನವೀನ್ ಕುಮಾರ್ ಕಟೀಲ್ ಸೇರಿದಂತೆ ಇತರ ನಾಯಕರು ಭಾಗವಹಿಸುತ್ತಾರೆ ಪಕ್ಷದ ಸಂಘಟನೆ ಹಾಗೂ ಇನ್ನಿತರ ಅನೇಕ ವಿಚಾರಗಳು ಚರ್ಚೆ ನಡೆಸಲಾಗುತ್ತದೆ ಎಂದರು.

ಶಾಸಕ ವೆಂಕಟರಾವ್ ನಾಡಗೌಡರ ಹಾಗೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ಕೊಡುಗೆ ಸಿಂಧನೂರಿನಲ್ಲಿ ಏನು ಇಲ್ಲ. ಇಲ್ಲಿವರೆಗೂ ಆಡಳಿತ ನಡೆಸುತ್ತ ಬಂದಿದ್ದಾರೆ ಆದರೆ ಅವರು ಯಾವ ಅಭಿವೃದ್ಧಿ ಪರ ಯೋಜನೆಗಳು ಜಾರಿಗೆ ತಂದಿಲ್ಲ ರೈತರಿಗೆ ಸುಳ್ಳು ಭರವಸೆ ನೀಡುತ್ತಾ ಬಂದಿದ್ದಾರೆ.

ಈಗ ರೈತರ ಬಗ್ಗೆ ಮಾತನಾಡುತ್ತಾರೆ ಅವರು ಯಾವ ನಾಯಕರು ಎಂದು ಟೀಕಿಸಿದರು ಬಿಜೆಪಿ ಪಕ್ಷ ರೈತರ ಪರವಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಅನೇಕ ಯೋಜನೆಗಳು ಜಾರಿಗೆ ತಂದು ರೈತರ ಪರ ಇರುವ ಪಕ್ಷ ಎಂದು ಹೆಸರಾಗಿದೆ ಎಂದರು ಬಿಜೆಪಿ ಪಕ್ಷದಿಂದ ನೂತನ ಕೃಷಿ ಮಸೂದೆ ಜಾರಿಗೆ ತಂದಿದ್ದು ರೈತರ ಹಿತಕ್ಕಾಗಿ ಇದರಿಂದ ಯಾವ ರೈತರಿಗೆ ಅನ್ಯಾಯ ಆಗೋದಿಲ್ಲ ಇದರ ಬಗ್ಗೆ ವಿರೋಧಪಕ್ಷದವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ.

ಅವರು ರೈತರ ಹಿತದೃಷ್ಟಿಯಿಂದ ಹೇಳಿಕೆ ನೀಡುತ್ತಿಲ್ಲ ಎಂದರು. ಮಸ್ಕಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಜಯಭೇರಿ ಬಾರಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಎನ್ ಶಿವನಗೌಡ ಗೊರೆಬಾಳ, ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತ ಸಾಲಗುಂದ, ನಗರ ಅಧ್ಯಕ್ಷ ಪ್ರೇಮ ಸಿದ್ಧಾಂತ ಮಠ, ಮಧ್ವರಾಜ್, ಮೌನೇಶ್ ಇದ್ದರು.