ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ದಿನಂಪ್ರತಿ ಮಾಸ್ಕ್ ಕೊಂಡು ಧರಿಸುವ ಬದಲಾಗಿ, ತಮ್ಮ ಬಳಿ ಯಲ್ಲಿಯೇ ಇದ್ದಂತ ಕರವಸ್ತ್ರ, ಬಟ್ಟೆಯ ಮಾಸ್ಕ್ ಗಳನ್ನು ಬಳಕೆ ಮಾಡಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಬಿಬಿಎಂಪಿ ಇದೀಗ ಬಟ್ಟೆ ಮಾಸ್ಕ್ ಹಾಗೂ ಕರವಸ್ತ್ರ ಕೂಡ ಮಾಸ್ಕ್ ಎಂದೇ ಪರಿಗಣಿಸಲು ಸೂಚಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರದಲ್ಲಿ ಸರ್ಜಿಕಲ್, ಎನ್95 ಮಾಸ್ಕ್ ಗಳಲ್ಲದೇ, ಕರ್ಚೀಫ್ ಎಂದೇ ಕರೆಯಲ್ಪಡುವ ಕರವಸ್ತ್ರವನ್ನು, ಇಲ್ಲವೇ ಬಟ್ಟೆಯನ್ನು ಮೂಗು, ಬಾಯಿಗೆ ಮುಚ್ಚುವಂತೆ ಕಟ್ಟಿ ದ್ದರೂ ಮಾಸ್ಕ್ ಎಂದೇ ಪರಿಗಣಿಸುವಂತೆ ಸೂಚಿಸಿದ್ದಾರೆ.
ಕಡ್ಡಾಯವಾಗಿ ಇಂತದ್ದೇ ಮಾಸ್ಕ್ ಧರಿಸಬೇಕು ಎಂಬ ಯಾವುದೇ ನಿಯಮವಿಲ್ಲ. ನಗರದಲ್ಲಿ ಎಲ್ಲಾ ವರ್ಗದ ಜನರಿದ್ದಾರೆ. ಬಡ ವರ್ಗದ ಜನರಿಗೆ 50 ರೂಪಾಯಿ ಕೊಟ್ಟು ಮಾಸ್ಕ್ ಖರೀದಿಸಿ, ಧರಿಸುವ ಸಾಮರ್ಥ್ಯ ಕೂಡ ಇಲ್ಲ. ಕೊರೋನಾ ಸೋಂಕಿನ ಭೀತಿಯ ಸಂದರ್ಭದಲ್ಲಿ ಮತ್ತೊಬ್ಬರಿಗೆ ಕೊರೋನಾ ಹರಡದಂತೆ ಬಾಯಿ, ಮೂಗು ಮುಚ್ಚುವಂತೆ ಕರವಸ್ತ್ರ ಇಲ್ಲವೇ ಬಟ್ಟೆ ಮಾಸ್ಕ್ ರೀತಿಯಲ್ಲಿ ಧರಿಸಿಬಹುದು ಎಂಬುದಾಗಿ ತಿಳಿಸಿ ದ್ದಾರೆ.