Sunday, 15th December 2024

Chaithra Kundapura: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಅಲ್ಲೋಲಕಲ್ಲೋಲ ಸೃಷ್ಟಿಸಿದ ಚೈತ್ರಾ ಕುಂದಾಪುರ!

Chaithra Kundapura

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿದ್ದು, ಒಟ್ಟು 17 ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ಬಾರಿ ವಿಶೇಷವಾಗಿ ಸ್ವರ್ಗ-ನರಕ ಕಾನ್ಸೆಪ್ಟ್‌ನಲ್ಲಿ ಬಿಗ್ ಬಾಸ್ ಮೂಡಿ ಬಂದಿದೆ. ಅದರಂತೆ 10 ಜನ ಸ್ವರ್ಗ ಹಾಗೂ 7 ಜನ ನರಕದಲ್ಲಿ ಇದ್ದಾರೆ. ಕುಂದಾಪುರ ಮೂಲದ ಹಿಂದುತ್ವ ನಾಯಕಿ ಚೈತ್ರಾ ಕುಂದಾಪುರ (Chaithra Kundapura) ಕೂಡ ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕಾಂಟ್ರವರ್ಸಿಯಿಂದ ಹೆಚ್ಚು ಸುದ್ದಿಯಾಗಿದ್ದ ಚೈತ್ರಾ ಅವರು ಇದೀಗ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಆರ್ಭಟಿಸಿದ್ದಾರೆ.

ಸಾಮಾನ್ಯವಾಗಿ ಬಿಗ್ ಬಾಸ್‌ನಲ್ಲಿ ಅಸಲಿ ಆಟ ಶುರುವಾಗಲು ಒಂದೆರಡು ವಾರಗಳು ಕಳೆಯುತ್ತವೆ. ಆದರೆ, ಈ ಬಾರಿಯ ಸೀಸನ್ನಲ್ಲಿ ಟಾಸ್ಕ್ ಕಿತ್ತಾಟ, ಮನೆ ಮಂದಿಯೊಂದಿಗಿನ ಕಿರಿಕ್ ಮೊದಲ ದಿನವೇ ಪ್ರಾರಂಭವಾದಂತೆ ಗೋಚರಿಸುತ್ತಿದೆ. ಹಿಂದೂ ಫೈಯರ್ ಬ್ರ್ಯಾಂಡ್ ಎಂದು ಗುರುತಿಸಿಕೊಂಡಿರುವ ಚೈತ್ರಾ ಹಾಗೂ ಉಗ್ರಂ ವಿಲನ್ ಮಂಜು ನಡುವೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿದೆ.

ಈ ಸುದ್ದಿಯನ್ನೂ ಓದಿ | Bigg Boss Kannada 11: ಬಿಗ್‌ಬಾಸ್‌‌‌ನಲ್ಲಿ ಫ್ಯಾಷನ್‌ ಪ್ರಿಯರ ಮನಗೆದ್ದಿದೆ ಸುದೀಪ್‌ ಸೂಟ್‌! ಇದರ ದರ ಎಷ್ಟು?

ಕಲರ್ಸ್ ಕನ್ನಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಮೊದಲ ಸಂಚಿಕೆಯ ಪ್ರೊಮೋ ಹಂಚಿಕೊಂಡಿದ್ದು, ಇದರಲ್ಲಿ ಚೈತ್ರಾ ಹಾಗೂ ಮಂಜು ನಡುವಣ ಮಾತುಕತೆ ತಾರಕಕ್ಕೇರಿದೆ. ಪ್ರೊಮೋ ನೋಡಿದಾಗ ನರಕದಲ್ಲಿರುವ ಸ್ಪರ್ಧಿಗಳಿಗೆ ಸ್ವರ್ಗದ ಕ್ಲೀನಿಂಗ್ ಕೆಲಸದ ನೀಡಿರುವಂತೆ ಕಾಣುತ್ತದೆ. ಅದರಂತೆ ಚೈತ್ರಾ ಸ್ವರ್ಗದ ಮನೆಯ ಕೆಲಸ ಮಾಡುವಾಗ ಮಂಜು ಅವರು ಹಣ್ಣನ್ನು ತೊಳೆದು ಕಟ್ ಮಾಡಿಕೊಡುವಂತೆ ಕೇಳಿದ್ದಾರೆ.

ಆದರೆ, ಚೈತ್ರಾ ಅವರು ಹಣ್ಣನ್ನು ಕಿತ್ತುಕೊಂಡು ಓಡಿ ಹೋಗಿ ತಿನ್ನಲು ಶುರು ಮಾಡಿದ್ದಾರೆ. ನೀವು ತಿನ್ನುವಂತಿಲ್ಲ ಎಂದು ಇತರೆ ಸ್ಪರ್ಧಿಗಳು ಹೇಳಿದಾಗ, ನೀವ್ಯಾಕೆ ಪ್ರೊವೋಕ್ ಮಾಡಿದ್ರಿ, ನನಗೆ ಫನಿಶ್ಮೆಂಟ್ ಎಂದು ಮಂಜು ಮತ್ತು ಸ್ವರ್ಗ ನಿವಾಸಿಗಳ ಜೊತೆ ಜಗಳ ತೆಗೆದಿದ್ದಾರೆ. ಚೈತ್ರಾ -ಮಂಜು ನಡುವೆ ವಾದ-ವಿವಾದ ನಡೆದಿದೆ.

ಚೈತ್ರ ಅವರ ಕೋಪ ಕಂಡು ಮನೆ ಮಂದಿ ಅವರನ್ನು ಸಮಾಧಾನ ಮಾಡುವ ಪ್ರಯತ್ನಿಸಿದರು. ಮಾತನಾಡ ಬೇಡಿ ಎಂದರು. ಇದಕ್ಕೂ ಜಗ್ಗದ ಚೈತ್ರ ಅವರು, ಮಾತನಾಡ ಬೇಡಿ ಎಂದು ರೂಲ್ ಬುಕ್ನಲ್ಲಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಮೊದಲ ದಿನವೇ ಬಿಗ್ ಬಾಸ್ ಮನೆ ರಣರಂಗವಾದಂತೆ ಕಾಣುತ್ತಿದೆ. ಕರ್ಲಸ್ ಕನ್ನಡ ಚಾನೆಲ್ನಲ್ಲಿ ಇಂದು ರಾತ್ರಿ 9.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದ್ದು, ಇವರಿಬ್ಬರ ಜಗಳದ ಸಂಪೂರ್ಣ ವಿಚಾರ ತಿಳಿಯಲಿದೆ.