Saturday, 23rd November 2024

Cheating Case: ಅಕ್ರಮ ಚೀಟಿ ದಂಧೆ; 250ಕ್ಕೂ ಅಧಿಕ ಜನರ ಹಣ ಎಗರಿಸಿ ಮಹಿಳೆ ಎಸ್ಕೇಪ್

Cheating Case

ದೊಡ್ಡಬಳ್ಳಾಪುರ: ಸುಮಾರು 250ಕ್ಕೂ ಅಧಿಕ ಜನರನ್ನು ವಂಚಿಸಿ ಚೀಟಿ ಹಣ ನೀಡದೆ ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ತಾಲೂಕಿನ ಮೂಕಾಂಬಿಕಾ ಬಡಾವಣೆಯಲ್ಲಿ ನಡೆದಿದೆ (Cheating Case).

ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪುಷ್ಪಕಲಾ ಎಂಬ ಮಹಿಳೆಯು ಯಾವುದೇ ಕಾನೂನು ಅನುಮತಿ ಇಲ್ಲದೆ ಅಕ್ರಮವಾಗಿ ಚೀಟಿ ದಂಧೆ ನೆಡೆಸುತ್ತಿದ್ದು, ಆಕೆಯ ಮೇಲೆ ನಂಬಿಕೆ ಇಟ್ಟು ಚೀಟಿ ಹಾಕಿದ್ದ 250ಕ್ಕೂ ಹೆಚ್ಚು ಚೀಟಿದಾರರಿಗೆ ಹಣ ನೀಡದೆ ವಂಚಿಸಿ ಪರಾರಿಯಾಗಿದ್ದಾಳೆ. ಹಣ ಕಳೆದುಕೊಂಡ ಬಡ ಮಹಿಳೆಯರು ಇದೀಗ ಆಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ದೊಡ್ಡಬಳ್ಳಾಪುರ ನಗರದ ಮೂಕಾಂಬಿಕಾ ಬಡಾವಣೆಯ ನಿವಾಸಿ ಈ ಪುಷ್ಪಕಲಾ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಈಕೆ ಕಳೆದ ನಾಲ್ದೈದು ವರ್ಷಗಳಿಂದ ಚೀಟಿ ವ್ಯವಹಾರವನ್ನು ನಡೆಸುತ್ತಿದ್ದಳು. ಕಳೆದ 4 ವರ್ಷದಿಂದ ಕಟ್ಟುನಿಟ್ಟಾಗಿ ಚೀಟಿ ವ್ಯವಹಾರ ನಡೆಸುವ ಮೂಲಕ ಸುತ್ತಮುತ್ತಲಿನ ಜನರ ನಂಬಿಕೆ ಗಳಿಸಿದ್ದ ಪುಷ್ಪಾಕಲಾ ಬಳಿ ಸುತ್ತಮುತ್ತಲಿನ ಸುಮಾರು 250ಕ್ಕೂ ಹೆಚ್ಚು ಜನರು ತಮ್ಮ ಮಗಳ ಮದುವೆಗಾಗಿ, ಮನೆ ಕಟ್ಟಲು, ಬ್ಯುಸಿನೆಸ್ ಮಾಡಲು ಹೀಗೆ ನಾನಾ ಕಾರಣಗಳಿಂದ ಚೀಟಿ ಹಾಕಿದ್ದರು.

ಆ. 27ರಂದು ಪತಿ ರುದ್ರ ಆರಾಧ್ಯ ಜಮೀನು ಕೆಲಸಕ್ಕೆಂದು ಊರಿಗೆ ಹೋಗಿದ್ದಾಗ, ಮಕ್ಕಳು ಕಾಲೇಜಿಗೆ ಹೋಗಿದ್ದ ವೇಳೆ ಪುಷ್ಪಕಲಾ ಮನೆಯಿಂದ ನಾಪತ್ತೆಯಾಗಿದ್ದಾಳೆ. ಮನೆಯಿಂದ ನಾಪತ್ತೆಯಾದ ಪುಷ್ಪಕಲಾ ಗಂಡನಿಗೆ ವಾಟ್ಸ್‌ ಆ್ಯpffನಲ್ಲಿ ಆಡಿಯೋ ಮೆಸೇಜ್ ಕಳಿಸಿದ್ದು, ತನge ಯಾರೋ ಮೋಸ ಮಾಡಿದ್ದು, ವಿಷ ಕುಡಿದು ಸಾಯುವುdAgi ಹೇಳಿದ್ದಾಳೆ. ಪತಿ ರುದ್ರ ಆರಾಧ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಂಡತಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ.

ಪುಷ್ಪಕಲಾ ನಾಪತ್ತೆ ಪ್ರಕರಣ ಚೀಟಿದಾರರ ಆತಂಕಕ್ಕೆ ಕಾರಣವಾಗಿದೆ. ನಗರದ ಮುತ್ಯಾಲಮ್ಮ ದೇವಸ್ಥಾನದ ಬಳಿ ಸೇರಿದ ಚೀಟಿದಾರರು ಪುಷ್ಪಕಲಾ ಮಾಡಿರುವ ವಂಚನೆಯನ್ನು ಬಯಲು ಮಾಡಿದ್ದಾರೆ. ಇದೇ ವೇಳೆ ಕನ್ನಡಪರ ಹೋರಾಟಗಾರ ರಾಮಕೃಷ್ಣ ಮಾಧ್ಯಮಗಳೊಂದಿಗೆ ಮಾತನಾಡಿ, ʼʼಬಡ ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಮಹಿಳೆಯರು, ಗಾರೆ ಕೆಲಸಗಾರರ ಹಣದೊಂದಿಗೆ ಪುಷ್ಪಕಲಾ ಪರಾರಿಯಾಗಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಕ್ರಮದ ಮೂಲಕ ಬಡವರಿಗೆ ಹಣ ಕೊಡಿಸುವ ಕೆಲಸ ಮಾಡುತ್ತೇವೆʼʼ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕರಾದ ಗಜೇಂದ್ರ ಮಾತನಾಡಿ, ʼʼಕಳೆದ 4 ವರ್ಷದಿಂದ ಪುಷ್ಪಕಲಾ ಶಿಸ್ತಿನಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು. ಇದೇ ನಂಬಿಕೆ ಮೇಲೆ ನಾನು ಸಹ ನಾಲ್ಕೈದು ಚೀಟಿಗಳ ಹಾಕಿದ್ದೆ. ಚೀಟಿ ಕಂತು ಕಟ್ಟಲು ಪ್ರತಿ ತಿಂಗಳು 1 ಲಕ್ಷ ರೂ.ಗಿಂತ ಹೆಚ್ಚು ಹಣವನ್ನು ಪೋನ್ ಪೇ, ಅಕೌಂಟ್ ಮೂಲಕ ಪಾವತಿ ಮಾಡಿದ್ದೇನೆ. ಆಕೆಯ ವಂಚನೆಯಿಂದ ಸುಮಾರು 35 ಲಕ್ಷ ರೂ. ಹಣವನ್ನ ಕಳೆದುಕೊಂಡಿದ್ದೇನೆ. ಇನ್ನೂ ದೊಡ್ಡಬಳ್ಳಾಪುರದಲ್ಲಿ ಅಕ್ರಮ ಚೀಟಿ ದಂಧೆ ನಡೆಯುತ್ತಿದ್ದು ಇವುಗಳಿಗೆ ಕಡಿವಾಣ ಹಾಕಿದ್ದಾಗ ಮಾತ್ರ ಇಂತಹ ವಂಚನೆಯ ಪ್ರಕರಣಗಳನ್ನು ತಡೆಯಲು ಸಾಧ್ಯʼʼ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: IT Raid: ಬೆಳ್ಳಂಬೆಳಗ್ಗೆ ಬೆಂಗಳೂರಿನ ಹಲವು ಕಂಪನಿಗಳ ಮೇಲೆ ಐಟಿ ದಾಳಿ