-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ರಿಸ್‌ಮಸ್ ಕಾರ್ನಿವಲ್‌ಗಳು (Christmas Carnival 2024) ಕೇವಲ ಚರ್ಚ್ ಸುತ್ತಮುತ್ತ ಮಾತ್ರವಲ್ಲ, ಮಾಲ್‌ಗಳಲ್ಲಿ, ಶಾಪಿಂಗ್ ಏರಿಯಾಗಳಲ್ಲಿ ಸೇರಿದಂತೆ ನಾನಾ ಕಡೆ ಸಡಗರ-ಸಂಭ್ರಮದಿಂದ ನಡೆಯುತ್ತಿದೆ. ನಾನಾ ಹೆಸರಲ್ಲಿ, ಈ ಕಾರ್ನಿವಲ್‌ಗಳು ಆಯೋಜನೆಗೊಂಡಿವೆ.
ಚರ್ಚ್‌ಗಳ ಸುತ್ತಮುತ್ತಲಿನ ದೃಶ್ಯ
ಇನ್ಫಂಟ್ ಜೀಸಸ್ ಚರ್ಚ್, ಶಿವಾಜಿನಗರದ ಸೇಂಟ್ ಮೇರೀಸ್ ಬೆಸಿಲಿಕಾ ಚರ್ಚ್ ಸೇರಿದಂತೆ ನಾನಾ ಕಡೆ ಕ್ರಿಸ್‌ಮಸ್ ಸೆಲೆಬ್ರೇಷನ್ ಸಂಭ್ರಮ ತುಸು ಹೆಚ್ಚಾಗಿಯೇ ಇದೆ. ಸುತ್ತಮುತ್ತಲ ಸ್ಟ್ರೀಟ್ ಶಾಪ್‌ಗಳು, ಟೆಂಪರರಿ ಶಾಪಿಂಗ್ ಬಜಾರ್‌ಗಳು ಜನರಿಂದ ತುಂಬಿ ತುಳುಕುತ್ತಿವೆ.
ಮಾಲ್‌ಗಳಲ್ಲಿ ಕ್ರಿಸ್‌ಮಸ್ ಕಾರ್ನಿವಲ್
ಸಫೀನಾ ಪ್ಲಾಜಾ, ಕೋರಮಂಗಲದ ಫೋರಂ ಮಾಲ್, ಗರುಡಾ ಮಾಲ್, ಮಾಲ್ ಆಫ್ ಏಷಿಯಾ, ಓರಿಯನ್ ಮಾಲ್, ಮಂತ್ರಿ ಮಾಲ್, ಲುಲು ಮಾಲ್, ಸೇರಿದಂತೆ ನಗರದ ನಾನಾ ಮಾಲ್‌ಗಳಲ್ಲಿ ಕ್ರಿಸ್‌ಮಸ್ ಕಾರ್ನಿವಲ್ ಜಾತ್ರೆಯಂತೆ ನಡೆಯುತ್ತಿದೆ.
ಮಾಲ್‌ನಲ್ಲೆಲ್ಲಾ ಬಣ್ಣ ಬಣ್ಣದ ಕ್ರಿಸ್‌ಮಸ್ ಬೆಲ್ಸ್, ಡ್ರಮ್ಸ್, ಕಾರ್ಟೂನ್ಸ್, ಸಾಂತಾನ ಚಿತ್ತಾರಗಳ ಡೆಕೋರೇಷನ್ ನೋಡುಗರ ಮನಸೆಳೆದಿವೆ. ಸಾಂತಾ ಕ್ಲಾಸ್ ಉಡುಪನ್ನು ಧರಿಸಿದವರು ಅಲ್ಲಲ್ಲಿ ಹಿರಿಯರಿಗೆ ಹಾಗೂ ಮಕ್ಕಳಿಗೆ ಗಿಫ್ಟ್ ನೀಡುತ್ತಾ, ಗೇಮ್‌ಗಳನ್ನು ಆಡಿಸುತ್ತಾ ಹಬ್ಬದ ರಂಗನ್ನು ತುಂಬತೊಡಗಿದ್ದಾರೆ ಎನ್ನುತ್ತಾರೆ ಮಾಲ್‌ವೊಂದರ ಮ್ಯಾನೇಜರ್.
ಆಕರ್ಷಿಸುತ್ತಿರುವ ಸ್ಟಾಲ್‌ಗಳು
ಜೀಸಸ್ ಡಾಲ್ಸ್ ಸೆಟ್, ಸಾಂತಾಸ್ ಹ್ಯಾಟ್, ಸಾಂತಾಸ್ ಸಾಕ್ಸ್, ಕ್ರಿಸ್‌ಮಸ್ ಸ್ಟಾರ್ಸ್, ಕ್ರಿಸ್‌ಮಸ್ ಮ್ಯಾಟ್ಸ್, ಕ್ರಿಸ್‌ಮಸ್ ಬೆಲ್ಸ್, ಡ್ರಮ್ಸ್, ಸಾಂತಾ ಕ್ಲಾಸ್ ಸೂಟ್, ಹತ್ತುವ ಏಣಿ, ಸಿಲ್ವರ್ ಕ್ರಿಸ್‌ಮಸ್ ಟ್ರೀಗಳು, ಚಿಕ್ಕ-ಪುಟ್ಟ ಕ್ರಿಸ್‌ಮಸ್ ಬೊಂಬೆಗಳು ಮಾಲ್‌ಗಳ ಶಾಪಿಂಗ್ ಸ್ಟಾಲ್‌ಗಳಲ್ಲಿ ರಾರಾಜಿಸುತ್ತಿವೆ.
ಮಾಲ್‌ಗಳಲ್ಲೂ ಕ್ರಿಸ್‌ಮಸ್ ಬಜಾರ್
ಮಾಲ್‌ಗಳಲ್ಲೂ ಕ್ರಿಸ್‌ಮಸ್‌ಗೆಂದೇ ವಿಶೇಷ ಬಜಾರ್‌ಗಳು ಬಂದಿವೆ. ಚಿಕ್ಕ ಪುಟ್ಟ ಕ್ರಿಸ್‌ಮಸ್ ಟ್ರೀ ಬೆಲ್‌ನಿಂದಿಡಿದು, ಮನೆಯ ಅಲಂಕಾರಕ್ಕೆ ಆದ್ಯತೆ ನೀಡುವ ಲೈಟಿಂಗ್ಸ್ ಕೂಡ ದೊರೆಯುತ್ತಿವೆ. ಸಾಂತಾ ಕ್ಲಾಸ್ ಉಡುಪು ಮಾತ್ರವಲ್ಲ, ಕ್ರಿಸ್‌ಮಸ್ ಟ್ರೆಂಡಿ ಡಿಸೈನರ್‌ವೇರ್‌ಗಳು ಇಲ್ಲಿ ಪ್ರದರ್ಶನದ ಜತೆಗೆ ಮಾರಾಟದ ಸೌಲಭ್ಯವನ್ನು ಮಾಡಿರುವುದು ಕ್ರಿಸ್‌ಮಸ್ ಸೆಲೆಬ್ರೆಷನ್ ಮಾಡುವವರಿಗೆ ಸಂತಸ ತಂದಿದೆ. ಎಲ್ಲವೂ ಒಂದೆಡೆಯೇ ದೊರಕುತ್ತಿರುವುದು ಖುಷಿಯಾಗಿದೆ ಎನ್ನುತ್ತಾರೆ ಕಾರ್ನಿವಲ್ ಬೆಸ್ಟ್ ಎನ್ನುವ ಜಾಯ್ ಹಾಗೂ ರೀಟಾ.
ಕ್ರಿಸ್‌ಮಸ್ ರೆಡಿಮೇಡ್ ಫುಡ್
ಇದೀಗ ಕ್ರಿಸ್‌ಮಸ್ ಫುಡ್ ಐಟಂಗಳು, ಕ್ರಿಸ್‌ಮಸ್ ಪಾರ್ಟಿಗೆ ಬೇಕಾಗುವಂತಹ ಫುಡ್ ಐಟಂಗಳು ಫೆಸ್ಟಿವ್ ಕಾರ್ನಿವಲ್ ಹಾಗೂ ಫ್ಲೀ ಮಾರ್ಕೆಟ್‌ಗಳಲ್ಲಿ ಸುಲಭವಾಗಿ ಸಿಗುತ್ತಿವೆ. ಇಲ್ಲಿ ನಡೆಯುತ್ತಿರುವ ಫುಡ್ ಸೆಂಟರ್‌ಗಳಲ್ಲಿ ಆರ್ಡರ್ ಮೇರೆಗೆ ಹೋಮ್ ಡಿಲಿವರಿ ಮಾಡುವ ವ್ಯವಸ್ಥೆಗಳು ಬಹುತೇಕರನ್ನು ಸೆಳೆದಿವೆ.
ಈ ಸುದ್ದಿಯನ್ನೂ ಓದಿ | Christmas Nailart 2024: ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಂಡಿಯಾದ ಕ್ರಿಸ್‌ಮಸ್ ನೇಲ್ ಆರ್ಟ್
ಕ್ರಿಸ್‌ಮಸ್ ಕ್ಯಾರೋಲ್ಸ್ /ಕಾನ್ಸೆರ್ಟ್
ಕ್ರಿಸ್‌ಮಸ್ ಮ್ಯೂಸಿಕ್ ಕಾನ್ಸೆರ್ಟ್‌ಗಳು ಬಹುತೇಕ ಎಲ್ಲಾ ಮಾಲ್‌ಗಳಲ್ಲೂ ಆಯೋಜನೆಗೊಂಡಿದ್ದು, ಜನರನ್ನು ಸೆಳೆಯುತ್ತಿವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)