-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಕ್ರಿಸ್ಮಸ್ ಸಮೀಪಿಸುತ್ತಿದ್ದಂತೆಯೇ ನಾನಾ ಬಗೆಯ ಬ್ಯೂಟಿ ಕಾನ್ಸೆಪ್ಟ್ಗಳು ಕಾಲಿಟ್ಟಿವೆ. ಈ ಸಾಲಿಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕ್ರಿಸ್ಮಸ್ ನೇಲ್ ಆರ್ಟ್ ಕೂಡ ಸೇರಿದೆ.
ಉಗುರಿನ ಮೇಲೆ ಕ್ರಿಸ್ಮಸ್ ಚಿತ್ರಗಳು
ಸಾಂತಾ ಕ್ಲಾಸ್, ಕ್ರಿಸ್ಮಸ್ ಟ್ರೀ, ಸ್ನೋ ಫಾಲ್, ಹೋಮ್ ಡೆಕೋರೇಷನ್ ಐಟಂಗಳು, ಗಿಫ್ಟ್ಗಳ ಟೈನಿ ಚಿತ್ರಗಳು ಹೀಗೆ ನಾನಾ ಬಗೆಯವು ಈ ಸೀಸನ್ನ ನೇಲ್ ಆರ್ಟ್ಗೆ ಸೇರಿವೆ. ಈ ಫೆಸ್ಟಿವ್ ಸೀಸನ್ನಲ್ಲಿ ಇಂತಹ ನೇಲ್ ಆರ್ಟ್ ಕಾಮನ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿಇದರ ಫೋಟೋಶೂಟ್ ಚಿತ್ರಗಳು ಈಗಾಗಲೇ ಹರಿದಾಡುತ್ತಿವೆ. ಬ್ಯೂಟಿ ಬ್ಲಾಗ್ಗಳಲ್ಲಿ ಸಾಕಷ್ಟು ಪ್ರಯೋಗಾತ್ಮಕ ಚಿತ್ತಾರಗಳು ಕೂಡ ಕಾಣಿಸಿಕೊಂಡಿವೆ. ಅಷ್ಟೇಕೆ! ಕೆಲವು ನೇಲ್ ಆರ್ಟ್ ಎಕ್ಸ್ಪರ್ಟ್ಗಳು ಈ ಆರ್ಟ್ ಮಾಡುವ ಬಗ್ಗೆ ಚಿಕ್ಕ ಚಿಕ್ಕ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ ಎನ್ನುತ್ತಾರೆ ಎಕ್ಸ್ಪರ್ಟ್ಸ್.
ಥೀಮ್ ನೇಲ್ ಆರ್ಟ್
ನೋಡಲು ಶೈನಿಂಗ್ ಬೇಸ್ ಶೇಡ್ ಹೊಂದಿರುವ ಕ್ರಿಸ್ಮಸ್ ನೇಲ್ ಆರ್ಟ್ನಲ್ಲಿ ನಾನಾ ವಿಷಯಗಳನ್ನು ಸೇರಿಸಲಾಗಿದೆ. ಉದಾಹರಣೆಗೆ., ಸಾಂತಾ ಕ್ಲಾಸ್, ಕ್ರಿಸ್ಮಸ್ ಸ್ಟೋರಿ ಸೇರಿದಂತೆ ನಾನಾ ಬಗೆಯವು ಸೇರಿವೆ ಎನ್ನುತ್ತಾರೆ ಎಕ್ಸ್ಪರ್ಟ್ಸ್.
ನೀವು ತಾತ್ಕಾಲಿಕವಾಗಿ ನೇಲ್ ಆರ್ಟ್ ಮಾಡಬಹುದು
ಮೊದಲಿಗೆ ಬೇಕಾಗಿರುವ ನೇಲ್ ಶೇಡ್ಗಳನ್ನು ಚೂಸ್ ಮಾಡಿ. ಆದಷ್ಟೂ ಕ್ರಿಸ್ಮಸ್ ಫೆಸ್ಟೀವ್ ಸೀಸನ್ಗೆ ಸೂಟ್ ಆಗುವ ಡಿಸೈನ್ ಆಯ್ಕೆ ಮಾಡಿಕೊಳ್ಳಿ. ಮೊದಲೇ ಪ್ಲಾನ್ ಮಾಡಿ, ನಂತರ ನೇಲ್ಆರ್ಟ್ ಮಾಡುವುದು ಉತ್ತಮ. ಗೆಸ್ಸಿಂಗ್ ಮಾಡಕೂಡದು. ಚಿತ್ತಾರ ಮೂಡಿಸುವವರಿಗೆ ಅನುಭವವಿರಬೇಕು ಎನ್ನುತ್ತಾರೆ ನೇಲ್ ಡಿಸೈನರ್ ರಂಜಿತಾ.
ಪಾಪುಲರ್ ಆಗಿರುವ ನೇಲ್ ಆರ್ಟ್ ಡಿಸೈನ್ಸ್
ಸಾಂತಾಕ್ಲಾಸ್, ರೆಡ್ ಟೋಪಿ, ಸ್ಮೋ ಫಾಲ್, ಕ್ರಿಸ್ಮಸ್ ಟ್ರೀ ಹಾಗೂ ಬೆಲ್ಸ್ ಡಿಸೈನ್ಗಳು ಸಖತ್ ಪಾಪುಲರ್ ಲಿಸ್ಟ್ಗೆ ಸೇರಿವೆ ಎನ್ನುತ್ತಾರೆ ನೇಲ್ ಡಿಸೈನರ್ಸ್.
ಈ ಸುದ್ದಿಯನ್ನೂ ಓದಿ | Global Saree Fashion: ಜಾಗತಿಕ ಮಟ್ಟದಲ್ಲಿ ವ್ಯಾಪಿಸಿದೆ ಸೀರೆಯ ಹವಾ
ಕ್ರಿಸ್ಮಸ್ ನೇಲ್ ಆರ್ಟ್ ಪ್ರಿಯರಿಗೆ ಟಿಪ್ಸ್
- ಮೊದಲಿಗೆ ಮೆನಿಕ್ಯೂರ್ ಮಾಡಿಸಿ, ನಂತರ ಡಿಸೈನ್ ಮಾಡಿಸಿ.
- ಟ್ರೆಂಡಿ ಡಿಸೈನ್ ಮಾಡಿಸುವ ಮುನ್ನ ಮುಂದಿನ ಸೀಸನ್ಗೂ ಇದೇ ಡಿಸೈನ್ ಮುಂದುವರಿಸುತ್ತೀರಾ! ಎಂಬುದನ್ನು ಯೋಚಿಸಿ.
- ಆದಷ್ಟೂ ಮುಂಬರುವ ನ್ಯೂ ಈಯರ್ಗೂ ಸೂಟ್ ಆಗುವಂತಹ ಡಿಸೈನ್ ಮಾಡಿಸಿ.
- ಕಾಮನ್ ಡಿಸೈನ್ಸ್ ಇತರೇ ಸಂದರ್ಭಗಳಿಗೂ ಮ್ಯಾಚ್ ಆಗುತ್ತವೆ.
- ರೆಡಿಮೇಡ್ ಪ್ರೆಸ್ ಆನ್ ನೇಲ್ಸ್ ಕೂಡ ಬಳಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)