ಬೆಂಗಳೂರು: ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ ಅವರ ʼMODERN MEDIA, ELECTIONS AND DEMOCRACYʼ ಕೃತಿಯ ಅಂತಾರಾಷ್ಟ್ರೀಯ ಆವೃತ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು, ಕಾವೇರಿ ನಿವಾಸದಲ್ಲಿ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕೃತಿ ವೈಜ್ಞಾನಿಕ ಅಂಕಿ ಅಂಶಗಳ ಆಧಾರದಲ್ಲಿ ವಿಶ್ಲೇಷಣೆಗೆ ಒಳಗಾಗಿರುವುದರಿಂದ ರಾಜಕೀಯ ವಿಜ್ಞಾನ ಮತ್ತು ಮಾಧ್ಯಮ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | AUS vs IND: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತದ ಸಾಧನೆ ಹೇಗಿದೆ?
ಸ್ವಾತಂತ್ರ್ಯ ಸಂದರ್ಭದಿಂದ ಈ ಕ್ಷಣದವರೆಗೆ ದೇಶದಲ್ಲಿ ನಡೆದ ಚುನಾವಣೆಗಳು, ಚುನಾವಣಾ ರಾಜಕಾರಣ ಕುರಿತಂತೆ ಮಾಧ್ಯಮಗಳು ಕಾಲ ಕಾಲಕ್ಕೆ ಬದಲಾಗಿರುವುದು, ಚುನಾವಣಾ ಸ್ವರೂಪದಲ್ಲಿ ಆದ ಮಾರ್ಪಾಡುಗಳು, ಇವೆಲ್ಲದರಿಂದ ದೇಶದ ಪ್ರಜಾಪ್ರಭುತ್ವದ ಮೇಲೆ ಆಗಿರುವ ಪರಿಣಾಮಗಳ ವಿಶ್ಲೇಷಣಾತ್ಮಕ ಕೃತಿ ಇದಾಗಿದೆ. ʼರಾಜಕೀಯ ಸಂವಹನʼ ಕ್ಷೇತ್ರದ ಆಳವಾದ ಅಧ್ಯಯನದಿಂದ ಬಂದಿರುವ ಅಪರೂಪದ ವಿಶ್ಲೇಷಣಾತ್ಮಕ ಕೃತಿ ಇದಾಗಿದೆ.