Friday, 20th September 2024

ನಫೆಡ್‌ನಲ್ಲಿ ಕೊಬ್ಬರಿಯ ಖರೀದಿಯಲ್ಲಿ ದುಡ್ಡು ಕೊಡಲೇಬೇಕು. ?

ನೊಂದಾಣಿಗೆ ಹಣ : ಚೀಲ ಇಳಿಸಲು ಹಣ : ರಶೀದಿ ಪಡೆಯಲು ಹಣ.

ವರದಿ : ಪ್ರಶಾಂತ್‌ಕರೀಕೆರೆ

ತಿಪಟೂರು: ರೈತ ಬೆಳೆದ ತೆಂಗಿನಕಾಯಿಯ ಕೊಬ್ಬರಿಯ ಬೆಲೆಯು ಈಗಾಗಲೇ ಪಾತಾಳವನ್ನು ಹಿಡಿದು ರೈತನ ಬದುಕಿನಲ್ಲಿ ಕೋಲಾಹಲ ಉಂಟಾ ಗಿದ್ದು ಜೀವನವೇ ಕಷ್ಟಕರವಾಗಿದೆ, ಇಂತಹ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವಂತೆ ಸರ್ಕಾರ ನೆಪಡ್ ಕೇಂದ್ರವನ್ನು ತೆರೆದು ಕ್ವಿಂಟಾಲ್‌ಗೆ ೧೧,೭೫೦ ರೂಪಾಯಿಗಳು ನಿಗದಿ ಪಡಿಸಿ ಕೇಂದ್ರ ತೆರೆದರೆ ಕೊಬ್ಬರಿ ಬೆಳೆಗಾರರಿಗೆ ಅಧಿಕಾರಿಗಳು ನೆರವಿಗೆ ಬಾರದೆ ಹಣವನ್ನು ಪೀಡಿಸುವ ಹಂತಕರಾಗಿದ್ದಾರೆ.

ರೈತನು ಕೊಬ್ಬರಿಯನ್ನು ನೊಂದಾಣಿ ಮಾಡಿಸಲು ಕೇಂದ್ರದ ಹತ್ತಿರ ಧಾವಿಸಿದರೆ ಖರೀದಿ ಕೇಂದ್ರದ ಅಧಿಕಾರಿಗೆ ೨೦೦ ರೂಪಾಯಿಗಳನ್ನು ನೀಡಬೇಕು, ವಾಹನದಿಂದ ಚೀಲಗಳನ್ನು ಇಳಿಸುವ ಅಮಾಲುದಾರಿಗೆ ಒಂದು ಚೀಲಕ್ಕೆ ೨೦ ರಿಂದ ೩೦ ರೂ ಹಾಗೂ ೨ ಉಂಡೆ ಕೊಬ್ಬರಿ, ಸಣ್ಣ ಹಾಗೂ ದಪ್ಪ ಎಂದು ವಿಂಗಡಿಸುವರಿಗೆ ರೊಕ್ಕ ಕೊಟ್ಟರೆ ಪಾಸ ಆಗುತ್ತದೆ. ಹಣ ನೀಡದಿದ್ದರೆ ಕೊಬ್ಬರಿ ನೆಫಡ್ ಕೇಂದ್ರದಲ್ಲಿ ಏನು ಆಗಲಾರದು ಎಂದು ರೈತರು ಗೋಳಾಡು ತ್ತಿದ್ದಾರೆ.

ನಫೆಡ್ ಕೇಂದ್ರದ ಕೊಬ್ಬರಿ ಚೀಲಗಳು ಹರಿದಿದ್ದು, ಚೀಲಕ್ಕೆ ೪೧ ಕೆ.ಜಿ ೩೦೦ ಗ್ರಾಂ ತೂಕವಿರಬೇಕು ಆದರೆ ರೈತನಿಗೆ ತಲುಪುವುದು ೪೦ ಕೆಜಿ ಮಾತ್ರ, ಖರೀದಿ ಬಿಟ್ಟ ರೈತನಿಗೆ ಯಾವುದೇ ರಶೀತಿಯಿಲ್ಲದೆ ಬರಿಗೈಯ ಅಂತಕದಲ್ಲಿ ಹೊಗಬೇಕು. ಖರೀದಿ ಕೇಂದ್ರದಲ್ಲಿ ರೈತನಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಅಕ್ಕಪಕ್ಕದ ಟೀ ಅಂಗಡಿಗಳನ್ನು ಆಸರೆ ಆಗಬೇಕು, ಸೂಚನಾ ಫಲಕವಿಲ್ಲದೆ ರೈತನಿಗೆ ಯಾವ ಮಾಹಿತಿಯು ಸಿಗುತ್ತಿಲ್ಲ, ಇದಕ್ಕೆ ಸಂಬAಧಪಟ್ಟ ಸಹಕಾರ ಇಲಾಖೆ, ಹಾಗೂ ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಸಂಕಷ್ಟದಲ್ಲಿರುವ ಕೊಬ್ಬರಿ ಬೆಳೆಗಾರರ ನೆರವಿಗೆ ಧಾವಿಸಬೇಕು.

*
ಪ್ರತಿ ನಿತ್ಯ ಬೆಳಗ್ಗೆ ೯.೩೦ರಿಂದ ಸಂಜೆ ೫.೩೦ ರವರೆಗೆ ಖರೀದಿ ಕೇಂದ್ರ ತೆರೆದಿದ್ದು ಈಗಾಗಲೇ ೨೦೦೦ ಸಾವಿರ ರೈತರು ನೊಂದಾಣಿ ಮಾಡಿಸಿದ್ದು ೩೪೫೦ ಚೀಲಗಳನ್ನು ಖರೀದಿ ಮಾಡಲಾಗಿದೆ.

ಇಲ್ಲಿನ ಅಮಾಲುದಾರರು ನಮಗೆ ಸಂಬ0ಧಿಸಿದವರಲ್ಲ ಅವರು ಬಾಬು ಎಂಬ ಗುತ್ತಿಗೆದಾರರ ಮೂಲಕ ಬಂದಿದ್ದು ನಮ್ಮ ಮಾಹಿತಿ-ಸಲಹೆಗಳನ್ನು ಸ್ವೀಕರಿಸದೆ ತಿರಸ್ಕಾರ ಮಾಡುತ್ತಾರೆ.

ಮಲ್ಲಿಕಾರ್ಜುನ ಖರೀದಿ ಕೇಂದ್ರದ ಅದಿಕಾರಿ

*
ಅಧಿಕಾರಿಗಳು ರವಾನೆದಾರರ ಕೊಬ್ಬರಿಯನ್ನು ವಿಂಗಡನೆ ಮಾಡದೆ ನೇರವಾಗಿ ತೂಕ ಮಾಡುತ್ತಾರೆ ನಮ್ಮ ಚೀಲಗಳನ್ನು ನೆಲಕ್ಕೆ ಹಾಕಿ ಸಣ್ಣ-ದಪ್ಪ ಎಂದು ವಿಂಗಡಿಸುತ್ತಾರೆ. ಸಣ್ಣ ಪ್ರಮಾಣದ ಕೊಬ್ಬರಿಯು ಸಹ ತಿನ್ನಲು ಹಾಗೂ ಎಣ್ಣೆಗೆ ಬಳಸಬಹುದು ಎಂಬುದನ್ನು ಅಧಿಕಾರಿಗಳು ತಿಳಿಯಬೇಕು. ಶಿವನಂಜಪ್ಪ ಕೊಬ್ಬರಿ ರೈತ