Saturday, 4th January 2025

Cooker Blast: ಶಾಲೆಯಲ್ಲಿ ಕುಕ್ಕರ್ ಸ್ಫೋಟವಾಗಿ ಇಬ್ಬರಿಗೆ ಗಾಯ

Cooker Blast

ಮಧುಗಿರಿ: ತಾಲೂಕಿನ ಪುರವರ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸುವಾಗ ಕುಕ್ಕರ್ ಸ್ಫೋಟಗೊಂಡು (Cooker Blast) ಇಬ್ಬರು ಗಾಯಗೊಂಡಿದ್ದಾರೆ. ಅಡುಗೆ ಸಹಾಯಕಿ ಉಮಾದೇವಿ (52) ಗಂಭೀರ ಗಾಯಗಳಾಗಿದ್ದು, ಜಯಮ್ಮ (55) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಧ್ಯಾಹ್ನ ಬಿಸಿಯೂಟ ತಯಾರಿಸುವಾಗ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಅಡುಗೆ ಸಹಾಯಕಿ ಉಮಾದೇವಿಗೆ ಮಧುಗಿರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈ ಮೇಲೆ ಶೇ.30 ಸುಟ್ಟ ಗಾಯಗಳಾಗಿದ್ದು, ಗುಣಮಟ್ಟದ ಕುಕ್ಕರ್ ಕೊಡದೆ ಇರುವುದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Nelamangala News: ಮದ್ಯದ ಅಮಲಿನಲ್ಲಿ ತಹಸೀಲ್ದಾರ್‌ಗೆ ಕಿರುಕುಳ; ಡಾಬಾ ರಾಜಣ್ಣ ಪುತ್ರ ಪೊಲೀಸ್ ವಶಕ್ಕೆ

ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಮಕ್ಕಳ ಸಾವು; ಹೊಸ ವರ್ಷದ ಮೊದಲ ದಿನವೇ ದಾರುಣ ಘಟನೆ

ವಿಜಯಪುರ: ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ದಾರುಣವಾಗಿ ಮೃತಪಟ್ಟಿರುವ ಘಟನೆ (Vijayapura News) ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಬಳಿ ನಡೆದಿದೆ. ಹೊಸ ವರ್ಷದ ಮೊದಲ ದಿನವೇ ಈ ದುರಂತ ನಡೆದಿದ್ದು, ಈ ಸಂಬಂಧ ದೇವರಹಿಬ್ಬರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಬಳಿಯಲ್ಲಿ ಈ ದಾರುಣ ಘಟನೆ ನಡೆದಿದೆ. ಜಮೀನಿಗೆ ತೆರಳಿದ್ದ ಗೀತಾ ಬಂಡಿ ಹಾಗೂ ಗಂಡು ಮಕ್ಕಳಾದಂತ ಶ್ರವಣ್, ಶರಣ್ ಆಕಸ್ಮಿಕವಾಗಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅಂದಹಾಗೇ ಗಂಡನ ಜೊತೆಗೆ ಜಗಳವಾಡಿ ಮನೆ ಬಿಟ್ಟು ಗೀತಾ ಬಂದಿದ್ದರು. ಇಂದು ಕೃಷಿ ಹೊಂಡದ ಬಳಿಯಲ್ಲಿ ತೆರಳಿದ್ದಾಗ ಕಾಲು ಜಾರಿ ಬಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಈ ದುರಂತ ನಡೆದಿದೆ ಎನ್ನಲಾಗುತ್ತಿದೆ.

ಮೃತ ಗೀತಾ ತಂದೆ ರಾಮಪ್ಪ ನಾಯ್ಕಡಿ ಎಂಬುವರಿಗೆ ಸೇರಿದಂತೆ ಕೃಷಿ ಹೊಂಡದಲ್ಲಿ ಈ ಧಾರುಣ ಘಟನೆ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ದೇವರಹಿಬ್ಬರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Mangalore News: ಮೂವರು ಮಕ್ಕಳನ್ನು ಕೊಂದು, ಪತ್ನಿಯ ಕೊಲೆಗೂ ಯತ್ನಿಸಿದವನಿಗೆ ಮರಣ ದಂಡನೆ