ಪಾವಗಡ: ತಾಲೂಕಿನ ಅಂಗವಿಕಲರಿಗೆ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಮತ್ತು ತಾಲ್ಲೂಕು ಆಡಳಿತ ವತಿಯಿಂದ ಕೋವಿಡ್ ವಿಚಾರವಾಗಿ ಅರಿವು ಕಾರ್ಯಕ್ರಮವನ್ನು ತಾಲೂಕಿನ ಕಣಿವೆನಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯ ಅವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಎಂ.ಎಸ್.ಹರಿಣಿ ಹಿರಿಯ ಸಿವಿಲ್ ನ್ಯಾಯಧೀಶ ಮತ್ತು ಅಧ್ಯಕ್ಷರು ತಾಲ್ಲೂಕು ಕಾನೂನು ಸೇವಾ ಸಮಿತಿ, ಕೋವಿಡ್ ಲಸಿಕೆ ಹಾಕಿಸುವುದರ ಮೂಲಕ ತಮ್ಮ ಹಾಗೂ ಕುಟುಂಬದ ಸದಸ್ಯರ ರಕ್ಷಣೆ ಪಡೆಯಲು ಮುಂದಾಗಬಹುದಾಗಿದೆ. ಯಾವುದೇ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು. ಮಾಸ್ಕ್ ಹಾಗೂ ಅಂತರ ಕಾಯ್ದುಕೊಂಡು ತಮ್ಮ ಹಾಗೂ ಇತರರ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದರು. ಲಸಿಕೆ ಹಾಕಿಸಿ ಇತರರಿಗೆ ಲಸಿಕೆ ಹಾಕಿಸಿಕೂಳ್ಳುಲು ಪ್ರೇರೇಪಿಸುವ ಕೆಲಸ ಮಾಡಬೇಕಾಗಿದೆ.
ನಂತರ ಪ್ರಧಾನ ಸಿವಿಲ್ ನ್ಯಾಯಧೀಶ ಜಗದೀಶ್ ಬಿಸೇರೌಟ್ಟಿ ಮಾತನಾಡಿ ವ್ಯಾಕ್ಸಿನೇಷನ್ ಹಾಕಿಸಿ ಕೊಂಡರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ನನಗೆ ಯಾವುದೇ ತರಹದ ಕೋವಿಡ್ ಬರುವುದಿಲ್ಲ ಎಂದು ಅಂದಿಕೂಳ್ಳ ಬೇಡಿ ಜನರ ಮಧ್ಯ ಇರುವಾಗ ಮಾಸ್ಕ್ ಹಾಕಿಕೊಂಡು ಅಂತರ ಕಾಯ್ದುಕೊಳ್ಳಲು ಮುಂದಾಗ ಬೇಕು ಎಂದರು.
ನಿರ್ಲಕ್ಷ್ಯ ತೋರಿದ್ದಾರೆ ಪ್ರಾಣಕ್ಕೆ ಅಪಾಯವಿದೆ ಹಾಗಾಗಿ ಮೊದಲು ವ್ಯಾಕ್ಸಿನೇಷನ್ ಹಾಕಿಸಿ ಕೊಂಡು ಇತರರನ್ನು ಹಾಕಿಸಿಕೂಳ್ಳಲು ಸೂಚಿಸಬೇಕು ಎಂದರು.
ನಂತರ ತಾಲ್ಲೂಕು ವೈದ್ಯಧಿಕಾರಿ ತಿರುಪತಯ್ಯ ಮಾತನಾಡಿ ಕೋವಿಡ್ ಲಸಿಕೆ ಕಂಡು ಹಿಡಿಯಲು ಕೆಲವು ವೇಳೆ ಐದಾರು ವರ್ಷಗಳು ಸಹ ಕಳೆಯುತ್ತದೆ. ಕೋವಿಡ್ ಒಂದು ಸಾಮಾನ್ಯ ರೋಗ ಎಂದು ನಿರ್ಲಕ್ಷ್ಯ ಮಾಡಬೇಡಿ ಈಗಾಗಲೇ ತಾಲೂಕಿನಲ್ಲಿ ಪ್ರಾಯದ ಯುವಕರನ್ನೆ ಬಲಿ ತೆಗೆದುಕೊಂಡಿತು. ಹಾಗಾಗಿ, ನಿರ್ಲಕ್ಷ್ಯ ತೋರದ ಮೊದಲು ವ್ಯಾಕ್ಸಿನೇಷನ್ ಪಡೆಯದ ಇದ್ದವರು ಮೂದಲು ವ್ಯಾಕ್ಸಿನೇಷನ್ ಹಾಕಿಸಿಕೂಳ್ಳಿ ಎಂದರು.
ಈ ವೇಳೆ ಶ್ರೀ ಮತಿ ಅಖೀಲಾ. ಅಧಿಕ ಸಿವಿಲ್ ನ್ಯಾಯದೀಶೆ.ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಆಂಜನೇಯ.ವಿ.ಮಂಜುನಾಥ್ ಸಹಾಯಕ ಸರ್ಕಾರಿ ಅಭಿಯೋಜಕರು, ಸಣ್ಣಿರಪ್ಪ ಸಹಾಯಕ ಸರ್ಕಾರಿ ಅಭಿಯೋಜಕರು ಹೆಚ್.ರಾಮಾಂಜನೇಯ ವಕೀಲರ ಸಂಘದ ಕಾರ್ಯದರ್ಶಿ ಇತರರು ಇದ್ದರು.