-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬದಂದು ನೀವು ಧರಿಸುವ ಲೆಹೆಂಗಾ ಡಿಸೈನ್ಗೆ ತಕ್ಕಂತೆ ಆಕರ್ಷಕವಾಗಿ ಕಾಣಿಸಲು ಈ 5 ಸಿಂಪಲ್ ಐಡಿಯಾಗಳನ್ನು (Deepavali Fashion 2024) ಫಾಲೋ ಮಾಡಿ, ಅಂದವಾಗಿ ಕಾಣಿಸಿಕೊಳ್ಳಿ ಎನ್ನುತ್ತಾರೆ ಮಯ್ರಾ ಕಾಟರ್ನ ಸೆಲೆಬ್ರೆಟಿ ಡಿಸೈನರ್ & ಫ್ಯಾಷನ್ ಇನ್ಫ್ಫ್ಲೂಯೆನ್ಸರ್ ರಜನಿ ಹಾಗೂ ಮಾಡೆಲ್ ನೇಹಾ ಗೌಡ. ಈ ಕುರಿತಂತೆ ಅವರು 5 ಸಿಂಪಲ್ ಲೆಹೆಂಗಾ ಸ್ಟೈಲಿಂಗ್ ಐಡಿಯಾಗಳನ್ನು ನೀಡಿದ್ದಾರೆ.
ಟ್ರೆಡಿಷನಲ್ ಲೆಹೆಂಗಾ ಸ್ಟೈಲಿಂಗ್
ಹಬ್ಬಕ್ಕೆ ನೀವು ಟ್ರೆಡಿಷನಲ್ ಲೆಹೆಂಗಾ ಖರೀದಿಸುವುದಾದಲ್ಲಿ ಆದಷ್ಟೂ ಸಾಂಪ್ರದಾಯಿಕವಾಗಿ ನಿಮ್ಮನ್ನು ಬಿಂಬಿಸುವಂತಹ ಡಿಸೈನ್ಗೆ ಪ್ರಾಮುಖ್ಯತೆ ನೀಡಿ. ಅದರಲ್ಲೂ ಸೌತ್ ಇಂಡಿಯನ್ ಲುಕ್ ಬೇಕಿದ್ದಲ್ಲಿ ದಾವಣಿ-ಲಂಗ ಶೈಲಿಯ ಟಿಪಿಕಲ್ ಡಿಸೈನ್ಗೆ ಮಾನ್ಯತೆ ನೀಡಿ. ಈ ಡಿಸೈನರ್ವೇರ್ಗೆ ಕಂಪ್ಲೀಟ್ ಟ್ರೆಡಿಷನಲ್ ಆಂಟಿಕ್ ಜ್ಯುವೆಲ್ ಧರಿಸಿ. ಹೇರ್ಸ್ಟೈಲ್ ಕೂಡ ಈ ಲುಕ್ಗೆ ಸಾಥ್ ನೀಡಬೇಕು.
ಇಂಡೋ-ವೆಸ್ಟರ್ನ್ ಶೈಲಿಯ ಲೆಹೆಂಗಾ
ಇಂಡೋ-ವೆಸ್ಟರ್ನ್ ಶೈಲಿಯ ಲೆಹೆಂಗಾ ಮಾಡರ್ನ್ ಲುಕ್ ಕಲ್ಪಿಸುತ್ತದೆ. ನೀವು ಕಂಪ್ಲೀಟ್ ಮಾಡರ್ನ್ ಸ್ಟೈಲಿಂಗ್ ಬಯಸುವಿರಾದಲ್ಲಿ ಆದಷ್ಟೂ ಕೋಲ್ಡ್ ಶೋಲ್ಡರ್ ಹಾಗೂ ಸಿಂಗಲ್ ಸ್ಟ್ರಾಪ್ ಲೆಹೆಂಗಾ ಆಯ್ಕೆ ಮಾಡಿ. ಫ್ರೀ ಹೇರ್ಸ್ಟೈಲ್ ಮಾಡಿ. ಮೇಕಪ್ ತಿಳಿಯಾಗಿರಲಿ.
ಕ್ರಾಪ್ ಲೆಹೆಂಗಾ
ತೀರಾ ಕ್ರಾಪ್ ಆಗಿರುವಂತಹ ಕ್ರಾಪ್ ಬ್ಲೌಸ್ ಲೆಹೆಂಗಾಗಳು ಗ್ಲಾಮರಸ್ ಲುಕ್ ನೀಡುತ್ತವೆ. ಇವು ಟ್ರೆಡಿಷನಲ್ವೇರ್ ಹಾಗೂ ವೆಸ್ಟರ್ನ್ ಶೈಲಿಯಲ್ಲಿ ಇರುತ್ತವೆ. ಇವಕ್ಕೆ ತಕ್ಕಂತೆ ಸ್ಟೈಲಿಂಗ್ ಮಾಡಿ. ಆದಷ್ಟೂ ಹೆವ್ವಿ ಆಭರಣಗಳನ್ನು ಆವಾಯ್ಡ್ ಮಾಡಿ. ಫ್ಯಾಷನ್ ಜ್ಯುವೆಲರಿ ಧರಿಸಿ. ಲೈಟ್ ಮೇಕಪ್ ಮಾಡಿ.
ವೈವಿಧ್ಯಮಯ ರೇಷ್ಮೆ ಲೆಹೆಂಗಾ
ರೇಷ್ಮೆಯ ಲೆಹೆಂಗಾಗಳು ಟ್ರೆಡಿಷನಲ್ ಲುಕ್ ನೀಡುವುದರಿಂದ ಆದಷ್ಟೂ ಗೋಲ್ಡ್ ಅಥವಾ ಇಮಿಟೇಷನ್ ಜ್ಯುವೆಲರಿ ಧರಿಸಿ. ನಾನಾ ಬಗೆಯ ಮೆಸ್ಸಿ ಜಡೆ ಸಿಂಗಾರ ಮಾಡಿ. ಮೇಕಪ್ನಲ್ಲಿ ಕಾಡಿಗೆ, ಐ ಲೈನರ್ ಹಣೆಗೊಂದು ಬಿಂದಿ ಹಚ್ಚಿ.
ಈ ಸುದ್ದಿಯನ್ನೂ ಓದಿ | Halloween Style Ideas: ಹಾಲೋವೀನ್ ಪಾರ್ಟಿಗೆ ಭಯಾನಕವಾಗಿ ಮೇಕಪ್ ಮಾಡಿಕೊಳ್ಳುವುದು ಹೇಗೆ?
ನೆಟ್ಟೆಡ್ ಲೆಹೆಂಗಾ
ನೆಟ್ಟೆಡ್ ಫ್ಯಾಬ್ರಿಕ್ನ ಈ ಲೆಹೆಂಗಾಗಳು ಪಾಸ್ಟೆಲ್ ಶೇಡ್ನಲ್ಲಿ ಇರುವುದರಿಂದ ಇವಕ್ಕೂ ಕೂಡ ಹೆಚ್ಚು ಜ್ಯುವೆಲರಿ ಧರಿಸುವ ಅಗತ್ಯವಿಲ್ಲ. ಅಲ್ಲದೇ, ಸಿಂಪಲ್ ಲೈಟ್ ಮೇಕಪ್, ತಿಳಿಯಾದ ಲಿಪ್ಸ್ಟಿಕ್ ಇರಲಿ. ಫ್ರೀ ಹೇರ್ ಸ್ಟೈಲ್ ಆಕರ್ಷಕವಾಗಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)