Thursday, 12th December 2024

ಹಾವು ಕಡಿದು ವ್ಯಕ್ತಿ ಸಾವು

ಪಾವಗಡ: ತಾಲೂಕಿನ ದೂಮ್ಮತಮರಿ ಗ್ರಾಮದ ವಾಸಿ ಹೆಚ್.ವಸಂತ ಕೋಂ ಹನಮಂತರೆಡ್ಡಿ(30) ಅವರು ದೂಮ್ಮತಮರಿ ಗ್ರಾಮದ ತಮ್ಮ ಜಮೀನಿನಲ್ಲಿ ನೀರು ಕಟ್ಟುವಂತಹ ಸಮಯದಲ್ಲಿ  ಹಾವು ಕಡಿದು ಮೃತಪಟ್ಟಿರುತ್ತಾರೆ.

ಅವರು ಹೆಂಡತಿ ಮತ್ತು ಗಂಡು ಮಗುವಿಗೆ ಹಾಗು ಅಪಾರವಾದ ಬಂದು ಬಳಗವನ್ನು ಅಗಲಿದ್ದಾರೆ. ಪಾವಗಡ ಸರ್ಕಾರಿ ಆಸ್ಪತ್ರೆಗೆ ತಂದು ಶವ ಪರೀಕ್ಷೆ ಮಾಡಿ ನಂತರ ಕುಟುಂಬ ಸದಸ್ಯರಿಗೆ ವಸಂತನ ದೇಹ ಹಸ್ತಾಂತರಿಸಲಾಗಿದೆ.

ಸ್ಥಳಕ್ಕೆ ಪೋಲಿಸ್ ಸಿಬಂಧಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.