ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಜೋಡಿ ಕೊಲೆ (Double murder case) ಸಂಭವಿಸಿದೆ. ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಯಲಹಂಕ ನ್ಯೂ ಟೌನ್ ಬಸವೇಶ್ವರ ದೇವಸ್ಥಾನದ ಬಳಿ ಘಟನೆ (Bengaluru Crime News) ನಡೆದಿದೆ.
ವಿಕ್ರಂ (21) ಮತ್ತು ತೂರಿ (33) ಕೊಲೆಯಾದ ಗಾರ್ಡ್‌ಗಳು ಎಂದು ಗುರುತಿಸಲಾಗಿದೆ. ಯಲಹಂಕ ಬಳಿಯ ಬಯಲು ಬಸವೇಶ್ವರ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ನೇಪಾಳ ಮತ್ತು ಬಿಹಾರ ಮೂಲದ ಇವರಿಬ್ಬರೂ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳದಲ್ಲಿ ಮದ್ಯಪಾನದ ಪಾರ್ಟಿ ಮಾಡಿದ ಕುರುಹುಗಳಿವೆ.
ತಡರಾತ್ರಿ ಪಾರ್ಟಿ ಮಾಡುವ ವೇಳೆ ಗಲಾಟೆಯಾಗಿ ಇಬ್ಬರೂ ಕೊಲೆ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಘಟನೆಯ ಸ್ಥಳಕ್ಕೆ ಯಲಹಂಕ ನ್ಯೂ ಟೌನ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಇವರೊಂದಿಗೆ ಪಾರ್ಟಿ ಮಾಡಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಪರಿಚಿತರು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಕಸ್ಟಮರ್ ಕೇರ್‌ನಲ್ಲಿ ಪರಿಚಯಿಸಿಕೊಂಡು ಯುವತಿ ಮೇಲೆ ಅತ್ಯಾಚಾರ
ಬೆಂಗಳೂರು: ಕಸ್ಟಮರ್ ಕೇರ್‌ನಲ್ಲಿ (Customer Care) ಪರಿಚಯವಾದ ಯುವತಿಯನ್ನು ಯುವಕನೊಬ್ಬ ಖಾಸಗಿ ಹೋಟೆಲ್‌ಗೆ ಕರೆದೊಯ್ದು ಅಮಲು ಪದಾರ್ಥ (Drugs) ನೀಡಿ ಲೈಂಗಿಕ ದೌರ್ಜನ್ಯ (Physical Abuse) ಎಸಗಿದ್ದಾನೆ. ಯುವತಿ ದೂರು (Bengaluru crime news) ನೀಡಿದ್ದು, ಯುವಕ ಪರಾರಿಯಾಗಿದ್ದಾನೆ.
ಆಂಧ್ರ ಪ್ರದೇಶ ಮೂಲದ ಲಕ್ಷ್ಮಿರೆಡ್ಡಿ ಎಂಬ ಯುವಕ, ಬೆಂಗಳೂರಿನಲ್ಲಿ ಈ ಕೃತ್ಯ ಎಸಗಿದ್ದಾನೆ. ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಯುವಕ ಫೋನ್ ಸ್ವಿಚ್‌ಆಫ್ ಮಾಡಿಕೊಂಡು ಪರಾರಿಯಾಗಿದ್ದು, ಪೊಲೀಸರು ತಲಾಶೆಯಲ್ಲಿದ್ದಾರೆ.
ಸಂತ್ರಸ್ತೆ ಎಂದು ಹೇಳಿಕೊಂಡಿರುವ ಯುವತಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾಳೆ. 2019ರಲ್ಲಿ ಯುವತಿ ಕಸ್ಟಮರ್ ಕೇರ್‌ನಲ್ಲಿ ಕೆಲಸ ಮಾಡ್ತಿದ್ದರು. ಆರೋಪಿ ಲಕ್ಷ್ಮಿರೆಡ್ಡಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ನೆಪದಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ಕೆಲವು ದಿನಗಳ ನಂತರ ಅಕ್ಕನ ಬರ್ತ್‌ಡೇ ಇದೆ ಎಂದು ಖಾಸಗಿ ಹೋಟೆಲ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕೃತ್ಯದ ವಿಡಿಯೋ ಮಾಡಿ ಯುವತಿಗೆ ಬೆದರಿಕೆ ಹಾಕಿದ್ದಾನೆ. ವಿಡಿಯೋ ತೋರಿಸಿ ಹಲವು ಬಾರಿ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ವಿಡಿಯೋ ಮಾಡಿರುವ ಯುವತಿ, ಲಕ್ಷ್ಮಿರೆಡ್ಡಿ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಜಾತಿನಿಂದನೆ ಮಾಡಿ ಹೀಯಾಳಿಸಿದ ಆರೋಪ ಮಾಡಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ಧವೂ ಆತ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಯುವತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಕೆ ದೂರು ನೀಡುತ್ತಿದ್ದಂತೆ ಆರೋಪಿ ಲಕ್ಷ್ಮಿರೆಡ್ಡಿ ಪೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ. ಆತನ ವಿರುದ್ಧ ಲೈಂಗಿಕ ಶೋಷಣೆ, ಬೆದರಿಕೆ, ಜಾತಿ ನಿಂದನೆ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Double Murder: ಬೆಂಗಳೂರಿನ ಶೆಡ್‌ನಲ್ಲಿ ಡಬಲ್ ಮರ್ಡರ್: ಬಸ್ ಕ್ಲೀನರ್‌ಗಳ ಕೊಲೆ