Thursday, 12th December 2024

ಕುಡಿಯುವ ನೀರಿನ ಕೊರತೆಯಾಗದಂತೆ ತುರ್ತು ಕ್ರಮ ವಹಿಸಿ: ಶಾಸಕ ಯಶವಂತರಾಯಗೌಡ ಪಾಟೀಲರು

ಇ೦ಡಿ: ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬರುವ ದಿನಗಳಲ್ಲಿ ಮತ್ತು ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗಬಹುದು. ಹೀಗಾಗಿ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದ೦ತೆ ಮುಂಜಾ ಗೃತೆ ವಹಿಸಲು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧ ಸಭಾಭವನದಲ್ಲಿ ಕುಡಿಯುವ ನೀರಿನ ಕುರಿತು ಟಾಸ್ಕ ಫೋರ್ಸ ಸಮಿತಿಯಿಂದ ನಡೆದ ಗ್ರಾ.ಪಂ ಅಧ್ಯಕ್ಷ ಮತ್ತು ಪಿಡಿಒ ಇವರ ಸಭೆಯಲ್ಲಿ ಮಾತನಾಡುತ್ತಿದ್ದರು.

೩೮ ಗ್ರಾ.ಪಂ ಗಳಲ್ಲಿ ಜಲಮೂಲ ಇಲ್ಲದ ಕಡೆ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಇರುವ ಮತ್ತು ಕಡಿಮೆ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ವಿಂಗಡಿಸಿ ಅದಕ್ಕೆ ತಕ್ಕಂತೆ ಕ್ರಮವಹಿಸಬೇಕಾಗಿದೆ. ಅಡವಿ ವಸ್ತಿಯವರಿಗೆ ಮತ್ತು ತಾಂಡಾಗಳಿಗೆ ತೊಂದರೆಯಾಗದ೦ತೆ ಮುನ್ನಚರಿಕೆ ವಹಿಸಲು ಕೇಳಿಕೊಂಡರು.

ಬೋರವೆಲ್ ಕೃಷಿ ಮಾಡುವ ಜೊತೆಗೆ ಗ್ರಾ.ಪಂ ದವರು ಕುಡಿಯುವ ನೀರಿನ ಸಮಸ್ಯೆ ಕುರಿತು ಮನವಿ ಸಲ್ಲಿಸಲು ತಿಳಿಸಿ ಮತ್ತು ಅದಕ್ಕೆ ಪರಿಹಾರ ನೀಡಲು ಇಲಾಖೆಯವರಿಗೆ ಕೇಳಿಕೊಂಡರು. ಲಚ್ಯಾಣ ಕಸ್ತೂರಭಾ ಬಾಲಕಿಯರ ವಸತಿ ನಿಲಯಕ್ಕೆ ಬಿಸಿ ನೀರಿನ ವ್ಯವಸ್ಥೆ ಮತ್ತು ಝಳಕಿಯ ಪ್ರಥಮ ದರ್ಜೆ, ಪಾಲಿಟೆಕ್ನಿಕ್ ಮತ್ತು ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ತೊಂದರೆ ಇದ್ದು ಶಾಸಕರು ತಮ್ಮ ಅನುದಾನದಲ್ಲಿ ತಲಾ ಐದು ಲಕ್ಷ ಅನುದಾನ ನೀಡಿಕೆಲಸ ಬೇಗ ಮುಗಿಸಲು ಕೇಳಿಕೊಂಡರು.

ಕೆಲವು ಗ್ರಾ.ಪಂ ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಮತ್ತು ಕೆಲವು ಗ್ರಾಮಗಳಲ್ಲಿ ನೀರು ಪೂರೈಸುತ್ತಿದ್ದು ಗ್ರಾಮಸ್ಥರು ನೀರಿನ ಬಣ್ಣ ಬೇರೆ ಯಾಗಿರುವದರಿಂದ ಕುಡಿಯುವದಿಲ್ಲ ಈ ವಿಷಯ ರಾಜ್ಯ ಮಟ್ಟದ ಅಧಿಕಾರ ಜೊತೆಗೆ ಚರ್ಚಿಸಿ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುವದಾಗಿ ತಿಳಿಸಿದರು.

ವಿವಿಧ ಗ್ರಾ.ಪಂ ಅಧ್ಯಕ್ಷರು ಮತ್ತು ಪಿಡಿಓಗಳು ತಮ್ಮಲ್ಲಿ ಸಂಭವಿಸಬಹುದಾದ ಕುಡಿಯುವ ನೀರನ ಕುರಿತು ವಿವರಣೆ ನೀಡಿದರು.

ವೇದಿಕೆಯ ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಟಾಸ್ಕ್ ಫೋರ್ಸ ನೋಡಲ್ ಅಧಿಕಾರಿ ವಿಜಯಕುಮಾರ ಮೆಕ್ಕಳಕಿ, ಇಒ ಬಾಬು ರಾಠೋಡ, ಡಿಎಸ್‌ಪಿ ಜಗದೀಶ ಇದ್ದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಎಇಇ ಎಸ್.ಆರ್.ರುದ್ರವಾಡಿ, ಹೆಸ್ಕಾ ಎಇಇ ಎಸ್.ಆರ್.ಮೆಂಡೆಗಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಏವೂರ, ದಯಾನಂದ ಮಠ, ಕೆರೂರ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು, ಪಿಡಿಒಗಳು ಮತ್ತಿತರಿದ್ದರು.