Friday, 22nd November 2024

ಸೋಲಾರ್ ಘಟಕದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಯುವಕ ಸಾವು: ಹೆಣ ಇಟ್ಟು ಕಾದು ಕುಳಿತ ಕುಟುಂಬಸ್ಥರು

ಪಾವಗಡ: ತಾಲೂಕಿನ ಕ್ಯಾತಗಾನಚೆರ್ಲು ಗ್ರಾಮದ ಬಳಿಯ ಸೋಲಾರ್ ಪಾರ್ಕ್ ನ ಅವಾದ್ ಪ್ಲಾಂಟ್ ನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಯುವಕನೋರ್ವ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ತಾಲೂಕಿನ ಚಿಕ್ಕಹಳ್ಳಿ ಗ್ರಾಮದ ಗೋಪಾಲ್ (26)ಬಿನ್ ತಿಪ್ಪಣ್ಣ ಮೃತರು. ಯುವಕ ಘಟಕದಲ್ಲಿ ತಂತ್ರಜ್ಞನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲಸ ಮಾಡುವಾಗ ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿದ್ದು,

ಮಧ್ಯಾಹ್ನ ಸುಮಾರು 3:00 ರ ಸಮಯದಲ್ಲಿ ಈ ಘಟನೆ ನಡೆದಿದ್ದು ಯುವಕನನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿಸಿದ್ದಾರೆ. ಅಷ್ಟರ ಒಳಗೆ ಯುವಕ ಮೃತಪಟ್ಟಿರೋದು ಕಂಡು ಬಂದಿದೆ.

ಕುಟುಂಬಸ್ಥರು ಹೇಳುವ ಪ್ರಕಾರ ನನ್ನ ಮಗ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅದರ ಕಂಪನಿಯ ಅಧಿಕಾರಿಗಳು ಮಾನವೀಯತೆ ಇಲ್ಲದೇ ದ್ವಿಚಕ್ರ ವಾಹನದಲ್ಲಿ ತಂದು ಆಸ್ಪತ್ರೆಗೆ ಸೇರಿಸಿದ್ದಾರೆ ಮನುಷನಿಗೆ ಗೌರವ ಇಲ್ಲದೆ ನೀಡಿ ಕೊಂಡಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಮಗನ ಹೆಣದ ಬಳಿ ಯಾರೊಬ್ಬರೂ ಸಹ ಕಂಪನಿಯ ಅಧಿಕಾರಿಗಳು ಬಂದಿಲ್ಲ ನಮ್ಮಗೆ ವಿಚಾರಿಸುವ ಸೌಜನ್ಯ ಸಹ ಯಾರಿಗೂ ಇಲ್ಲವೇ ಎಂಬುದಾಗಿ ಬೇಸರ ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದೆ ಇದೇ ಸೋಲಾರ್‌ ಪ್ಲಾಂಟು ಮುಳುಗಡೆಯಾಗಿತ್ತು.

ಶವ ಬಳಿ ಪೋಲಿಸ್ ಪೇದೆಯೊಬ್ಬರಿಗೆ ಕಳುಹಿಸಿ ಅವರ ಕೆಲಸ ಮುಗಿದಿದೆ ಎಂಬಂತೆ ತಿರುಮಣಿ ಪೊಲೀಸ್ ಅಧಿಕಾರಿಗಳು ಸಹ ನಿರ್ಲಕ್ಷ್ಯ ಧೋರಣೆ ತೋರಿದ್ದಾರೆ.