ಕೆನರಾ ಬ್ಯಾಂಕ್ ನೋಟಿಸ್
ಪಾವಗಡ: ಸತತ ಮಳೆಯ ಅಭಾವದಿಂದ ಬೆಳೆ ನಷ್ಟಕ್ಕೀಡಾಗಿದ್ದೇವೆ. ಜೀವನ ಸಾಗಿಸಲು ಸಾಧ್ಯವಾಗಿದೆ ಮಕ್ಕಳೆಲ್ಲಾ ನಗರ ಪ್ರದೇಶಗಳಿಗೆ ಕೂಲಿ ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಡುವಿನ ಒಳಗೆ ಸಾಲಕಟ್ಟಿ ಇಲ್ಲವಾದರೆ ತಮ್ಮ ಜಮೀನು ಮುಟ್ಟು ಗೋಲು ಹಾಕಿಕೊಳ್ಳುತ್ತೇವೆ ಎಂದು ತಾಲೂಕಿನ ವೈ.ಎನ್. ಹೊಸಕೋಟೆ ಕೆನರಾ ಬ್ಯಾಂಕಿನಿಂದ ನೋಟಿಸ್ ಕಳುಹಿಸಿ ದ್ದಾರೆ. ದಿಕ್ಕು ತೋಚದಂತಾಗಿ ತೀವ್ರ ಆಘಾತ ತಂದಿದೆ ಎಂದು ಮೇಗಳಪಾಳ್ಯ ಬಡ ವೃದ್ಧ ರೈತ ಎಚ್.ಅಂಜಿನಪ್ಪ ಅಳಲು ತೋಡಿ ಕೊಂಡಿದ್ದಾರೆ.
ಸುದ್ದಿಗಾರರ ಜೊತೆ ರೈತ ಎಚ್. ಅಂಜಿನಪ್ಪ ಮಾತನಾಡಿ ತಾಲೂಕಿನ ವೈ.ಎನ್. ಹೊಸ ಕೋಟೆ ಹೋಬಳಿ ವ್ಯಾಪ್ತಿಯ ಮೇಗಳಪಾಳ್ಯ ಗ್ರಾಮ ವಾಸಿಯಾಗಿದ್ದು ವ್ಯವಸಾಯದಿಂದ ಜೀವನ ಸಾಗಿಸುತ್ತಿದ್ದೇನೆ.
ಪಕ್ಕದ ಗ್ರಾಮ ಅಚ್ಚಮ್ಮನಹಳ್ಳಿ 291/2ರಲ್ಲಿ 3ಎಕರೆ 37ಗುಂಟೆ ಹಾಗೂ ಸರ್ವೆ ನಂಬರ್ 270/2ರಲ್ಲಿ 6ಎಕರೆ 12 ಗುಂಟೆ ಸೇರಿ ಒಟ್ಟು 10.09 ಗುಂಟೆ ಜಮೀನಿದ್ದು ತೋಟಗಾರಿಕೆ ಬೆಳೆ ಹನಿ ನೀರಾವರಿ ಬೆಳೆ ಸಲುವಾಗಿ ಜಮೀನಿನ ದಾಖಲೆಗಳ ಆಧಾರದ ಮೇಲೆ 2014 ರಲ್ಲಿ ವೈ.ಎನ್. ಹೊಸಕೋಟೆ ಕೆನರಾ ಬ್ಯಾಂಕಿನಲ್ಲಿ 2.66200 ಲಕ್ಷ ರೂಗಳು ಸಾಲ ಪಡೆ ದಿರುತ್ತೇನೆ. ಜಮೀನಿನ ದಾಖಲೆಗಳ ಆಧಾರದ ಮೇಲೆ ಒಟ್ಟು 7 ಲಕ್ಷ ಸಾಲ ಇರುತ್ತದೆ.
2014ರಲ್ಲಿ ಪಡೆದ ಸಾಲದ ಬಾಪ್ತಿಗೆ ಸಂಬಂಧಪಟ್ಟಂತೆ ಬಡ್ಡಿ ಹಣ ಕಟ್ಟಿದ್ದರು 2019 ಕ್ಕೆ2.55506 ಲಕ್ಷ ಕೆನರಾ ಬ್ಯಾಂಕ್ ನಲ್ಲಿ ಸಾಲ ಇರುವುದಾಗಿ ನೋಟಿಸಿನಲ್ಲಿ ತಿಳಿಸಿದ್ದಾರೆ. ಈ ಸಾಲದ ಮೊತ್ತ ಬಡ್ಡಿ ಸಮೇತ ಈ ಕೂಡಲೇ ಬ್ಯಾಂಕಿಗೆ ಕಟ್ಟುವಂತೆ ವಕೀಲ ರೊಬ್ಬರ ಮೂಲಕ ಕೆನರಾ ಬ್ಯಾಂಕ್ ವ್ಯವಸ್ಥಾಪಕರು ನೋಟಿಸ್ ಜಾರಿ ಮಾಡಿದ್ದು, ಜಾರಿಯಾದ 15 ದಿನದೊಳಗೆ ಸಾಲ ಕಟ್ಟ ದಿದ್ದರೆ ಸಾಲದ ಬಾಕಿ ಸೇರಿದಂತೆ ಬಡ್ಡಿ ನೋಟಿಸ್ ವೆಚ್ಚ ಹಾಗೂ ನ್ಯಾಯಾಲಯಗಳ ಖರ್ಚುವೆಚ್ಚಗಳನ್ನು ನೀವೇ ಬರಿಸಬೇಕು ಇಲ್ಲವಾದರೆ ನಿಯಮಾನುಸಾರ ಸಾಲಕ್ಕೆ ಸಂಬಂಧಪಟ್ಟಂತೆ ಆಧಾರವಿಟ್ಟು ಜಮೀನನ್ನು ವಶಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.
ಇದರಿಂದ ತೀವ್ರ ಕಂಗಾಲಾಗಿ ದಿಕ್ಕು ತೋಚದಂತಾಗಿದೆ. ಕಳೆದ ಹಲವಾರು ವರ್ಷಗಳಿಂದ ಮಳೆಯ ಅಭಾವದಿಂದ ಪರಿಣಾಮ ಜಮೀನಿನಲ್ಲಿ ಇಟ್ಟ ಬೆಳೆ ಕೈಗೆ ಸಿಗುತ್ತಿಲ್ಲ ಸಾಲಸೂಲ ಮಾಡಿಕೊಂಡು ಉಳಿಮೆ ಹಾಗೂ ಬಿತ್ತನೆ ಮಾಡಿದರೂ ನಿರೀಕ್ಷಿತ ಬೆಳೆ ಸಿಗುತ್ತಿಲ್ಲ.ಜೀವನ ಸಾಗಿಸಲು ಸಾದ್ಯವಾಗದೆ ಜೀವನೋಪಾಯಕ್ಕಾಗಿ ಕಳೆದ ಹಲವು ವರ್ಷಗಳ ಹಿಂದೆಯೇ ಬೆಂಗಳೂರು ಇತರೆ ನಗರಪ್ರದೇಶಗಳಿಗೆ ವಲಸೆ ಹೋಗಿದ್ದಾರೆ.ನಾನು ನನ್ನ ಪತ್ನಿ ಮಾತ್ರ ಸ್ವಗ್ರಾಮ ಮೇಗಳಪಾಳ್ಯ ಗ್ರಾಮದಲ್ಲಿ ವಾಸವಿದ್ದೇವೆ.ನನಗೆ ವಯಸ್ಸಾಗಿದ್ದು ಮಕ್ಕಳು ಕಳುಹಿಸುವ ಅಲ್ಪ ಸ್ವಲ್ಪ ಹಣದಲ್ಲಿ ಜೀವನ ಸಾಗಿಸುತ್ತಿದ್ದೇವೆ.
ಇಂತಹ ಪರಿಸ್ಥಿತಿಯಲ್ಲಿ ಕೆನರಾ ಬ್ಯಾಂಕ್ ನಿಂದ ನೋಟಿಸ್ ಜಾರಿ ಪಡಿಸಿರುತ್ತಾರೆ.ಇನ್ನೂ15ದಿನಗಳ ಒಳಗೆ ಸಾಲದ ಬಾಬ್ತು ಕಟ್ಟದಿದ್ದರೆ ನಿಮ್ಮ ಜಮೀನು ವಶಕ್ಕೆ ಪಡೆಯುವುದಾಗಿ ತಿಳಿಸಿದ್ದು ಇದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ ಜಮೀನು ಕಳೆದು ಕೊಂಡ ಮೇಲೆ ಬದುಕಿದ್ದು ಸತ್ತಂತೆ ಈ ಅವಮಾನ ಭರಿಸಲು ಸಾಧ್ಯವಾಗುತ್ತಿಲ್ಲ.ಮೇಲಾಧಿಕಾರಿಗಳು ಸಮಸ್ಯೆ ಗಂಭೀರವಾಗಿ ಪರಿಗಣಿಸಿ ನನ್ನ ಸಾಲದ ಬಾಬ್ತು ಮನ್ನಾ ಮಾಡುವ ಮೂಲಕ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್, ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್. ಡಿ. ಕುಮಾರಸ್ವಾಮಿ ಇತರೆ ರಾಜ್ಯ ಸಚಿವರುಗಳಿಗೆ ಪತ್ರ ಬರೆದಿದ್ದೇನೆ.
ಇವರ ಬಗ್ಗೆ ವಿಶ್ವಾಸವಿದೆ.ನನಗೆ ನ್ಯಾಯ ಕಲ್ಪಿಸಿ ಬಡ ರೈತನ ಜಮೀನು ಉಳಿಸುವಂತೆ ಅವರು ಮಾಧ್ಯಮಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿರುವುದಾಗಿ ಸಂತ್ರಸ್ತ ಎಚ್.ಅಂಜಿನಪ್ಪ ತಿಳಿಸಿದ್ದಾರೆ.