Thursday, 12th December 2024

ಹಿಂದೂ ಮುಸ್ಲಿಂ ಭಾಯಿ ಭಾಯಿ ಭಾರತ ಮಾತೆ ನಮ್ಮೆಲ್ಲರ ತಾಯಿ: ಗಾಲಿ ಜನಾರ್ಧನ ರೆಡ್ಡಿ

ಇಂಡಿ: ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಮುಖ್ಯ ಮಂತ್ರಿ ಯಡಿಯೂರಪ್ಪನವರು ಸರಕಾರ ರಚನೆಗೆ ಮುಂಚುಣಿಯಲ್ಲಿ ಇದ್ದವನೆ ಗಾಲಿ ಜನಾರ್ಧನರೆಡ್ಡಿ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ . ನನಗೆ ಬಿಜೆಪಿ ಪಕ್ಷದಲ್ಲಿ ಬಳಕೆ ಮಾಡಿಕೊಂಡು ನಮ್ಮವರ ಕುತಂತ್ರದಿ0ದ ಬಲಿಪಶು ಮಾಡಿ ದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಪಟ್ಟಣದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿ ನಲ್ಲಿ ಜ್ವಲಂತ ಸಮಸ್ಯಗಳು ಸಾಕಷ್ಟು ಇದ್ದು ಒಬ್ಬ ಸಕ್ರೀಯ ಕಾರ್ಯಕರ್ತನಿಗೆ ೩೦ ವರ್ಷಗಳ ಪರ್ಯಂತರ ಬಳಕೆ ಮಾಡಿಕೊಂಡು ಸುಳ್ಳಿನ ಸರಮಾಲೆ ಕಟ್ಟಿಕೊಂಡು ಸದಾ ಜಾತಿ ,ಧರ್ಮದ ಹೆಸರಿನಲ್ಲಿ ಗೆದ್ದು ಬಿಗುತ್ತಿದ್ದ ಶಾಸಕರಿಗೆ ತಕ್ಕಪಾಠ ಕಲಿಸಬೇಕು. ಕರ್ನಾಟಕ ರಾಜ್ಯದ ಕಡೆ ಸಮಾವೇಶದಲ್ಲಿ ಭಾಗವಹಿಸಿರುವೆ ಆದರೆ ಇಷ್ಠೋಂದು ಅಭೂತಪೂರ್ವ ಬೆಂಬಲ ಸಿಕ್ಕಿರುರುವುದೆ ಇಂಡಿ ಪಟ್ಟಣದಲ್ಲಿ.

ಹಿಂದೂ -ಮುಸ್ಲಿಂ ಭಾಯಿ ಭಾಯಿ ಭಾರತ ಮಾತೆ ನಮೇಲ್ಲರ ತಾಯಿ ಎನ್ನುವಂತೆ ಇಂತಹ ಭಾವೈಕ್ಯ ಕಣ್ಣಾರೆ ಕಂಡು ಸಂತಸವಾಗಿದೆ. ನನ್ನ ಬಳ್ಳಾರಿ ಜಿಲ್ಲೆಯ ನನ್ನ ಮನೆಯಲ್ಲಿ ಎಲ್ಲಾ ಧರ್ಮ ಎಲ್ಲಾ ಜಾತಿಯವರ ಜೊತೆ ಸಾಮರಸ್ಯ ಬಾಂಧವ್ಯ ಇದೆ ಕಷ್ಟ ಸುಖದಲ್ಲಿ ಪರಸ್ಪರರು ಭಾಗಿಯಾಗುತ್ತೇವೆ. ನಾನು ೧೨ ನೇ ಶತಮಾನದ ಅಣ್ಣ ಬಸವಣ್ಣನ ತತ್ವ ಸಂದೇಶದಲ್ಲಿ ನಡೇದುಕೊಂಡಿರುವೆ ಇವನ್ಯಾರವ ಇವನ್ಯಾರ ಎನ್ನಿಸದಿರಯ್ಯಾ ಇವ ನಮ್ಮವ ಇವ ನಮ್ಮವ ಮನೆಯ ಮಗನೆಂದೇನಿಸಯ್ಯಾ ಎನ್ನುವಂತೆ ಎಲ್ಲವರೂ ನನ್ನವರು ಎಂಬ ಭಾವ ನನ್ನಲ್ಲಿದೆ.

ಇಂದು ರಾಷ್ಟಿçÃಯ ಪಕ್ಷಗಳು ಜಾತಿ ಜಾತಿಗಳ ಮಧ್ಯ ವಿಷಬೀಜ ಬಿತ್ತುತ್ತಿದ್ದಾರೆ ಜಾತಿಗಳ ನಡುವೆ ವೈಷ್ಯಮ್ಯ ಬಿತ್ತಿದ್ದಾರೆ ಎಲ್ಲರೂ ಒಗ್ಗಟ್ಟಿದರೆ ಮಾತ್ರ ಒಳ್ಳೇಯ ಸಮಾಜ ನಿರ್ಮಾಣ ಮಾಡಲು ಸಾಧ್ಯೆ. ಕಲ್ಯಾಣ ರಾಜ್ಯ ಪ್ರತಿಪಕ್ಷ ಅಧಿಕಾರಕ್ಕೆ ಬರುವುದು ಖಚಿತ ನಿಮ್ಮೇಲ್ಲರ ಆರ್ಶೀವಾದ ಮಹಿಬೂಬಸಾಬ ಅರಬ ಇವರ ಮೇಲಿರಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಮಹಿಬೂಬ ಅರಬ ಇವರನ್ನೆ ಘೋಷಣೆ ಮಾಡುತ್ತೇನೆ.

ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಬಸವೇಶ್ವರರ ಹೆಸರಿನಿಂದ ಪ್ರತಿ ರೈತರ ಖಾತೆಗೆ ೧೫ ಸಾವಿರ ರೂ ಜಮಾಮಾಡಲಾಗುವುದು. ೯ ಗಂಟೆ ನಿರಂತರ ವಿದ್ಯುತ, ಬಸವೇಶ್ವರ ರೈತ ಭರವಸೆ ಕೇಂದ್ರ ಪ್ರತಿರೈತರಿಗೆ ಮನೆ ಬಾಗಿಲಿಗೆ ಗೋಬ್ಬರ ,ಬೀಜ ವಿತರಣೆ ಮಾಡಲಾಗುವುದು. ಬಡತನ ರೇಖೆಗಿಂತ ಕೆಳಗಿನವರಿಗೆ ಎಲ್.ಕೆ.ಜಿ ಯಿಂದ ಉನ್ನತ ಶಿಕ್ಷಣದವರೆಗೆ ಕಲಿಯುವ ವಿಧ್ಯಾರ್ಥಿಯ ತಾಯಿ ಖಾತೆ ವಿಧ್ಯಾಭ್ಯಾಸದ ಹಣ ಖಾತೆಗೆ ಜಮಾ ಮಾಡಲಾಗು ವುದು. ಮಹಿಳೆಯರಿಗೆ ಉದ್ಯೋಗ ನೀಡುವ ಹಿತ ಚಿಂತೆಯಿAದ ಉಚಿತ ಟೇಲರಿಂಗ್ ಕಲಿಸಿ ೩ ತಿಂಗಳ ನಂತರ ನೂತನ ತಂತ್ರಜ್ಞಾನ ಮಶೀನ್ ಒದಗಿಸಿ ಸ್ವಾವಲಂಬನೆ ಜೀವನ ಸಾಗಿಸುವಂತೆ ಪ್ರೇರಣೆ. ಮಾರಣಾಂತಿಕ ಕಾಯಿಲೆಗಳಿಂದ ಕುಟುಂಬದಲ್ಲಿ ಯಾರೂದರೂ ಬಳಲಿದರೆ ಅವರಿಗೆ ಉಚಿತ ವೈದ್ಯಕೀಯ ಖರ್ಚು. ಇಂತಹ ಇನ್ನು ಅನೇಕ ಬಡವರ ದೀನದುರ್ಬಲರ, ಅಲ್ಪಸಂಖ್ಯಾತರ,ಹಿAದುಳಿದವರ ಪರ ಜನಮೆಚ್ಚುವಂತಹ ಪ್ರಣಾಳಿಕೆಗಳು ಕೊಡುತ್ತೇವೆ ಕಲ್ಯಾಣ ಪ್ರಗತಿ ಪಕ್ಷಕ್ಕೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧಿಕೃತ ಅಭ್ಯರ್ಥಿ ಮಹಿಬೂಬ ಅರಬ ಮಾತನಾಡಿ ೩೦ ವರ್ಷ ಕಾಂಗ್ರೆಸ್ ಪಕ್ಷದಲ್ಲಿ ನನಗೆ ಬಳಕೆ ಮಾಡಿಕೊಂಡು ಇಂದು ನನಗೆ ಹೊರ ಹಾಕಿರುವ ಇವರಿಗೆ ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ . ನೊಂದ ನನಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿಯವರು ನನಗೆ ಕೈ ಹಿಡಿದಿರುವುದರಿಂದ ಹೃದಯ ತುಂಬಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ನಾಗಠಾಣ ಅಭ್ಯರ್ಥಿ ಶ್ರೀಕಾಂತ ಬಂಡೆ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರೈತ ಮೋರ್ಚಾ ರಾಜ್ಯಾಧ್ಯಕ್ಷ ಅರ್ಗೇನಿಕ್ ಹಣಮಂತರಾಯಗೌಡ ಉಪಸ್ಥಿತರಿದ್ದರು.

*

ಅಟೋ ಡ್ಯಾವರ್ ಗಳ ಬಹುದಿನಗಳ ಬೇಡಿಕೆ ೨ ಎಕರೆ ಜಮೀನಉ ಕೇಳಿದರೂ ಇಲ್ಲಿಯವರಿಗೂ ಯಾವ ಜನಪ್ರತಿನಿಧಿ ನೀಡಿಲ್ಲ ಎಂಬುದು ತಿಳಿದುಕೊಂಡಿದ್ದೇನೆ ,ಕೂಡಲೆ ೨ ಎಕರೆ ಜಮೀನು ಖರೀದಿ ಮಾಡಿ ನಾನೇ ಅದರ ಹಣ ನೀಡುತ್ತೇನೆ ಎಂದು ಭರವಸೆ ನೀಡಿದರು,ಬರುವ ದಿನಗಳಲ್ಲಿ ಅಟೋ ಚಾಲಕರಿಗೆ ೨೦ ಸಾವಿರ ಹಣ ಖಾತೆಗೆ ಜಮಾ ಮಾಡಿ ಅವರ ಕುಟುಂಬಕ್ಕೆ ಭದ್ರತೆ ನೀಡುತ್ತೇನೆ.
ಗಾಲಿ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ.