Tuesday, 22nd October 2024

Gadag Rain: ಗದಗದಲ್ಲಿ ಭಾರೀ ಮಳೆ; ಲಕ್ಷಾಂತರ ರೂ. ಮೌಲ್ಯದ ಈರುಳ್ಳಿ ಬೆಳೆ ನೀರುಪಾಲು

Gadag rain

ಗದಗ: ನಿರಂತರ ಮಳೆಯಿಂದಾಗಿ ಗದಗ(Gadag Rain) ಜಿಲ್ಲೆಯಲ್ಲಿ ಈರುಳ್ಳಿ ಬೆಳೆ(Onion Crop) ಸಂಪೂರ್ಣವಾಗಿ ಸರ್ವನಾಶವಾಗಿದೆ. ಲಕ್ಷ್ಮೇಶ್ವರ ತಾಲೂಕಿನ ಆಡರಗಟ್ಟಿ ಗ್ರಾಮದಲ್ಲಿ ಕೆಳೆದೆರಡು ದಿನಗಳಿಂದ ನಿರಂರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.

ಜಿಲ್ಲೆಯಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಆಡರಗಟ್ಟಿ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ಈರುಳ್ಳಿ ಬೆಳೆ ನಾಶವಾಗುತ್ತಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ. ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಗದ್ದೆಗಳಿಗೆ ನೀರು ನುಗ್ಗಿ ಈರುಳ್ಳಿ ಬೆಲೆಗಳು ಕೊಳೆತು ಹೋಗಿವೆ. ನೀರಲ್ಲಿ ನಿಂತು ಜಮೀನಿನಲ್ಲೇ ಕೊಳೆತ ನೂರಾರು ಎಕರೆ ಈರುಳ್ಳಿ ರೈತರು ಗೋಳಾಟ ನಡೆಸುತ್ತಿದ್ದಾರೆ. ಸಾಲ ಮಾಡಿ ಈರುಳ್ಳಿ ಬೆಳೆದಿದ್ದು ಮಳೆಯಿಂದ ಬೆಳೆ ನೀರುಪಾಲಾಗಿದೆ. ಸೂಕ್ತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಆರಂಭದಲ್ಲಿ ಚೆನ್ನಾಗಿ ಮಳೆಯಾಗಿದ್ರಿಂದ ಭರ್ಜರಿಯಾಗಿ ಈರುಳ್ಳಿ ಬೆಳೆ ಬಂದಿತ್ತು. ಒಂದು ಎಕರೆಗೆ 100 ಚೀಲ್ ಈರುಳ್ಳಿ ನಿರೀಕ್ಷೆಯಲ್ಲಿದ್ದ ರೈತರಿಗೆ ಭಾರೀ ನಿರಾಸೆಯಾಗಿದೆ. ಈ ಬಾರಿ ಕ್ವಿಂಟಾಲ್ ಈರುಳ್ಳಿಗೆ 4-5 ಸಾವಿರ ರೇಟ್ ಇದ್ದು, ರೈತರು ಭಾರೀ ಸಂತಸದಲ್ಲಿದ್ದರು. ರೈತರ ಸಂತಸಕ್ಕೆ ವರುಣ ಬರೆ ಎಳೆದಿದ್ದಾನೆ. ಇನ್ನು ಈ ಬಗ್ಗೆ ರೈತ ಪ್ರಶಾಂತ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈರುಳ್ಳಿ ಮಾರಾಟ ಮಾಡಿದ್ರೆ ಲಕ್ಷಾಂತರ ಹಣ ಬರುತ್ತೆ. ಮನೆ ಕಟ್ಟುವ ಕನಸು ಕಂಡಿದ್ದ ಕನಸು ನುಚ್ಚುನೂರಾಗಿದೆ. ಈ ಬಾರಿ ಉತ್ತಮ ಬೆಳೆ ಬಂದಿದ್ದು ಸಾಲ ಮುಕ್ತರಾಗಬೇಕು ಎಂಬ ಆಸೆಯಲ್ಲಿದ್ದ ರೈತರ ಪಾಡು ಅಧೋಗತಿಯಾಗಿದ್ದು ಮತ್ತೆ ಅವರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.

ಬೀಜ, ಗೊಬ್ಬರ ತಂದ ಸಾಲ ತೀರಿಸೋದು ತುಂಬ ಕಷ್ಟ ಅಂತಿರೋ ರೈತರು, ರೈತರ ಸಂಕಷ್ಟಕ್ಕೆ ಸರ್ಕಾರ ನೆರವಾಗಬೇಕು ಅಂತ ಒತ್ತಾಯಿಸಿದ್ದಾರೆ. ಇದಾದ ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ ನೀಡದ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಗರಂ ಆಗಿದ್ದಾರೆ.

ಈ ಸುದ್ದಿಯನ್ನೂ ಓದಿ:Schools closed: ಮಳೆ ಹಿನ್ನೆಲೆಯಲ್ಲಿ ಶಾಲೆಗಳಿಗೆ ಇಂದು ರಜೆ