ಗ್ರಾಪಂಗಳಲ್ಲಿ ಬಡತನ, ತೆರಿಗೆ ಸಂಗ್ರಹವೂ ಪಾತಾಳಕ್ಕೆ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ತೆರಿಗೆ ಸಂಗ್ರಹ ಕುಸಿತ ಪರಿಣಾಮ ರಾಜ್ಯದ ಗ್ರಾಪಂಗಳ ಬೊಕ್ಕಸ ಭಣಗುಡುತ್ತಿದ್ದು, ಚುನಾವಣೆ ನಂತರ ಪಂಚಾಯಿತಿ ಪ್ರವೇಶಿಸುತ್ತಿರುವ ನೂತನ ಸದಸ್ಯರಿಗೆ ದಿಗಿಲು ಶುರುವಾಗಿದೆ.
ಗ್ರಾಪಂ ಚುನಾವಣೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜಯ ಸಾಧಿಸಿರುವ ಸದಸ್ಯರಿಗೆ ಪಂಚಾಯಿ
ತಿಗಳಲ್ಲಿ ಶಾಕಿಂಗ್ ಸುದ್ದಿ ಎದುರಾಗುತ್ತಿದೆ. ಅದರಲ್ಲೂ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ಸೆಣಸುತ್ತಿರುವವರಿಗೆ ಗೆದ್ದ ನಂತರ ನಮ್ಮ ಗತಿ ಏನು ಎಂದು ಗಾಬರಿಯಾಗುತ್ತಿದ್ದಾರೆ.
ಏಕೆಂದರೆ, ರಾಜ್ಯದ ಬಹುತೇಕ ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ಹಿಂದುಳಿದಿದ್ದು, ಬೊಕ್ಕಸ ಬರಿದಾಗಿವೆ. ಈ ಮಧ್ಯೆ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೂಡ ಆದಾಯ ಕ್ರೂಢಿಕರಣ ಕೂಡ ಹಿಂದುಳಿದಿದ್ದು, ಈ ಬಾರಿ ಪಂಚಾಯಿತಿಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆಯೂ ಕಡಿಮೆ ಇದೆ. ಇದರಿಂದ ಪಂಚಾಯಿತಿಗಳ ಅಧಿಕಾರ ಚುಕ್ಕಾಣಿ ಹಿಡಿಯಲು ಯತ್ನಿಸು ವವರಲ್ಲಿ ದಿನದಿನಕ್ಕೂ ಆತಂಕ ಹೆಚ್ಚಾಗುತ್ತಿದೆ.
ಕಷ್ಟದಲ್ಲಿ ಪಂಚಾಯಿತಿಗಳು: ರಾಜ್ಯದ 226 ತಾಲೂಕುಗಳ 5778 ಗ್ರಾಪಂಳ 82576 ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ
ನಡೆದಿದೆ. ಶೇ. 60ರಷ್ಟು ಸದಸ್ಯರು ಪ್ರಥಮ ಬಾರಿಗೆ ಪಂಚಾಯಿತಿ ಪ್ರವೇಶ ಮಾಡುತ್ತಿದ್ದಾರೆ. ಇವರಲ್ಲಿ ಶೇ.80ರಷ್ಟು ಸದಸ್ಯರು
ಯುವಕ-ಯುವತಿಯರೇ ಆಗಿದ್ದಾರೆ. ಇವರಲ್ಲಿ ವಿದ್ಯಾವಂತರ ಸಂಖ್ಯೆ ಸಾಕಷ್ಟಿದೆ.
ಅಚ್ಚರಿಯೆಂದರೆ ಎಂಜಿನಿಯರ್, ಡಾಕ್ಟರ್ಸ್ ಮತ್ತು ಎಂಬಿಎ ಪದವೀಧರರೂ ಇದ್ದಾರೆ. ಬಹುತೇಕ ಪಂಚಾಯಿತಿಗಳಲ್ಲಿ ಅಧ್ಯಕ್ಷ,
ಉಪಾಧ್ಯಕ್ಷ ಚುನಾವಣೆ ಸಿದ್ಧತೆ ನಡೆಯುತ್ತಿದ್ದು, ಆಕಾಂಕ್ಷಿಗಳು ತಮ್ಮ ಮತದಾರ ಸದಸ್ಯರ ಮನ ಒಲಿಸಲು ಪ್ರವಾಸಕ್ಕೆ ಕರೆದೊ
ಯ್ಯುವ ಪ್ರಯತ್ನ ನಡೆಯುತ್ತಿದೆ. ಆದರೆ ಪಂಚಾಯಿತಿ ಬೊಕ್ಕ ಖಾಲಿಯಾಗಿವೆ. ಕಳೆದ ಎರಡು ತಿಂಗಳಿಂದ ತೆರಿಗೆ ಸಂಗ್ರಹ
ನೆಲಕಚ್ಚಿದ್ದು, ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿ ಸಚಿವರು ಕಾಲಕಾಲಕ್ಕೆ ಪಂಚಾಯಿತಿಗಳ ವ್ಯಾಪ್ತಿಯ ತೆರಿಗೆ ಸಂಗ್ರಹದ ಬಗ್ಗೆ ಪ್ರಗತಿ
ಪರೀಶೀಲನೆ ನಡೆಸಬೇಕಿತ್ತು. ಆದರೆ ಅದು ನಿರೀಕ್ಷಿತ ರೀತಿಯಲ್ಲಿ ಆಗಿಲ್ಲ.
ಸದಸ್ಯರೇ ಅಡ್ಡಿ !
ತೆರಿಗೆ ಸಂಗ್ರಹ ತಗ್ಗಲು ಗ್ರಾಪಂ ಸದಸ್ಯರೂ ಕಾರಣರಾಗಿದ್ದಾರೆ ಎಂದು ಅಧಿಕಾರಿಗಳೇ ಹೇಳುತ್ತಿದ್ದಾರೆ. ಅಂದರೆ ತೆರಿಗೆ ತೆರಿಗೆ
ಸಂಗ್ರಹಕ್ಕೆ ಸಿಬ್ಬಂದಿ ಯತ್ನಿಸಿದರೆ ಪಂಚಾಯಿತಿ ಸದಸ್ಯರೇ ಅಡ್ಡಿಯಾಗಿ ವಸೂಲಿ ಮುಂದೂಡಿಸುತ್ತಾರೆ. ಹಾಗೆಯೇ ಚುನಾವಣೆ ವರ್ಷ ಎಂದು ತಡೆದಿದ್ದರು ಕೂಡ. ಇದೀಗ ಕೋವಿಡ್ ಕಾರಣ ನೀಡಿ ತೆರಿಗೆ ಸಂಗ್ರಹಕ್ಕೆ ಅಡ್ಡಿಯಾಗಿದ್ದಾರೆ. ಹೀಗಾಗಿ ಅನೇಕ ಕಡೆ ಪಂಚಾಯಿತಿ ಖಜಾನೆ ಖಾಲಿ ಯಾಗಿವೆ.
ಕೋಟ್
ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಪಂಚಾಯಿತಿಗಳಿಗೆ ಮಾರ್ಗದರ್ಶನ, ಸಹಕಾರ ನೀಡಬಹುದು. ಆದರೆ ತೆರಿಗೆ ಸಂಗ್ರಹ ಕುಂಠಿತವಾದಾಗ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಪಂಚಾಯಿತಿಗಳಿಗೇ ಇದೆ. ಈ ಬಗ್ಗೆ ಅವುಗಳೇ ಗಮನ ಹರಿಸಬೇಕು.
– ಅಶ್ರಫ್ ವುಲ್ಲಾ ಶರೀಫ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ