Thursday, 31st October 2024

ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ದಿನಾಂಕ ಪ್ರಕಟಿಸಿದ ಚು.ಆಯೋಗ

ಮತಪತ್ರಗಳ ಮೂಲಕವೇ ಚುನಾವಣೆ

ಬೀದರ್‌ನಲ್ಲಿ ಪಾತ್ರ ಇವಿಎಂ ಬಳಕೆ

ಡಿ.7ರಂದು ಮೊದಲ ಹಂತ

ಡಿ.11ರಂದು ಎರಡನೇ ಹಂತದ ಅಧಿಸೂಚನೆ ಪ್ರಕಟ

ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಸೋಮವಾರ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕ ಪ್ರಕಟಿಸಿದ್ದು, ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದ ಡಿ.31ರವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯುಕ್ತ ಡಾ.ಬಸವರಾಜು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೊದಲ ಹಂತದ ಚುನಾವಣೆ ಡಿ.22ರಂದು ಹಾಗೂ ಎರಡನೇ ಹಂತದ ಚುನಾವಣೆ ಡಿ.27ಕ್ಕೆ ನಿಗದಿಯಾಗಿದೆ. ಡಿ.30ರಂದು ಮತ ಎಣಿಕೆ ಹಾಗೂ ಫಲಿತಾಂಶ ಹೊರಬೀಳಲಿದೆ.  ಈ ಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಎಲ್ಲ ಹೊಸ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಉದ್ಘಾಟನೆಗೆ ಬ್ರೇಕ್ ಬೀಳಲಿದೆ.

ಸುಮಾರು 5800 ಗ್ರಾಮ ಪಂಚಾಯಿತಿಗಳ 85000 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಬೇರು ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಈ ಚುನಾವಣೆ ಪ್ರಮುಖ‌ ಪಾತ್ರ ವಹಿಸಲಿದೆ.