-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಡಿಸೈನವೇರ್ಗಳನ್ನು ಹಾಗೂ ಗ್ರ್ಯಾಂಡ್ ಲುಕ್ ನೀಡುವ ಭಾರಿ ವಿನ್ಯಾಸದ ಡಿಸೈನವೇರ್ಗಳನ್ನು (Grand Designerwears Selection Tips) ಸೆಲೆಕ್ಟ್ ಮಾಡುವಾಗ ಸಾಕಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅವುಗಳಲ್ಲಿ ಪ್ರಮುಖವಾಗಿ ಒಂದೈದು ವಿಷಯಗಳನ್ನು ಪರಿಗಣಿಸಬೇಕು ಎನ್ನುತ್ತಾರೆ ಫ್ಯಾಷನ್ ಎಕ್ಸ್ಪರ್ಟ್ ವೀಕ್ಷಿತ್ ಗೌಡ.
“ಯಾವುದೇ ಡಿಸೈನವೇರ್ಗಳನ್ನು ಸೆಲೆಕ್ಟ್ ಮಾಡುವಾಗ ಯಾವ ಬಗೆಯ ಸಮಾರಂಭಗಳಿಗೆ ಖರೀದಿಸುತ್ತಿದ್ದೇವೆ. ಯಾವ ಕಾರ್ಯಕ್ರಮಗಳಿಗೆ ಧರಿಸುತ್ತಿದ್ದೇವೆ ಎಂಬುದನ್ನು ಮೊದಲು ಮನಗಂಡು ನಂತರ ಸೆಲೆಕ್ಟ್ ಮಾಡುವುದು ಉತ್ತಮ. ಇದರಿಂದ ಹೆಚ್ಚು ಗೊಂದಲಗಳಾಗುವುದಿಲ್ಲ. ಖರೀದಿ ಸುಲಭವಾಗುತ್ತದೆ” ಎನ್ನುತ್ತಾರೆ ಅವರು.
ಡಿಸೈನವೇರ್ ಡಿಟೇಲ್ಸ್
ಯಾವ ಬಗೆಯ ಡಿಸೈನವೇರ್ ಸೆಲೆಕ್ಟ್ ಮಾಡಬೇಕು? ಎಥ್ನಿಕ್ ವೇರಾ ಅಥವಾ ಇಂಡೋ-ವೆಸ್ಟರ್ನ್ ಡಿಸೈನರ್ವೇರಾ? ಎಂಬುದನ್ನು ಮೊದಲು ಡಿಸೈಡ್ ಮಾಡಿಕೊಳ್ಳಬೇಕು. ಯಾಕೆಂದರೇ, ಎಥ್ನಿಕ್ ಡಿಸೈನ್ಗಳು ಕಂಪ್ಲೀಟ್ ವಿಭಿನ್ನವಾಗಿರುತ್ತವೆ. ಇಂಡೋ-ವೆಸ್ಟರ್ನ್ ಡಿಸೈನ್ಗಳು ಮಿಕ್ಸ್ ಮ್ಯಾಚ್ ವಿನ್ಯಾಸವನ್ನು ಒಳಗೊಂಡಿರುತ್ತವೆ.
ಸಂದರ್ಭಕ್ಕೆ ತಕ್ಕ ಡಿಸೈನವೇರ್
ಕಾರ್ಯಕ್ರಮಗಳಿಗೆ ತಕ್ಕಂತೆ ಡಿಸೈನವೇರ್ ಆಯ್ಕೆ ಮಾಡಬಹುದು. ಮದುವೆ ಸಮಾರಂಭಗಳಿಗಾದಲ್ಲಿ ಗ್ರ್ಯಾಂಡ್ ಡಿಸೈನವೇರ್, ಸಾಮಾನ್ಯ ಸಮಾರಂಭಗಳಾದಲ್ಲಿ ಎಲಿಗೆಂಟ್ ಲುಕ್ ನೀಡುವಂತಹ ಸಿಂಪಲ್ ಡಿಸೈನ್ಸ್ ಹೀಗೆ ಆಯಾ ಸಂದರ್ಭಕ್ಕೆ ತಕ್ಕಂತೆ ಚೂಸ್ ಮಾಡಬಹುದು.
ಸೆಲೆಬ್ರೆಟಿ ಲುಕ್ಗಾದಲ್ಲಿ
ಸೆಲೆಬ್ರೆಟಿ ಲುಕ್ಗಾದಲ್ಲಿ ಇಂದು ಸಾಕಷ್ಟು ಬಗೆಯ ಇಂಡೋ-ವೆಸ್ಟರ್ನ್ ಡಿಸೈನವೇರ್ಗಳು ಬಂದಿವೆ. ಧರಿಸಿದಾಗ ನೋಡಲು ಥೇಟ್ ಸೆಲೆಬ್ರೆಟಿಯಂತೆಯೇ ಕಾಣಬಹುದು. ಅಂತಹ ಡಿಸೈನವೇರ್ಗಳನ್ನು ಆಯ್ಕೆ ಮಾಡಬಹುದು.
ಟ್ರೆಡಿಷನಲ್ ಲುಕ್ ಡಿಸೈನವೇರ್
ಟ್ರೆಡಿಷನಲ್ ಲುಕ್ ನೀಡುವಂತಹ ಡಿಸೈನವೇರ್ ಬೇಕಿದ್ದಲ್ಲಿ ಆದಷ್ಟೂ ಲೆಹೆಂಗಾ, ಅನಾರ್ಕಲಿ ಹಾಗೂ ಸೆಲ್ವಾರ್ನಂತಹ ಗ್ರ್ಯಾಂಡ್ ಡಿಸೈನವೇರ್ಗಳನ್ನು ಖರೀದಿಸಬಹುದು. ಅದರಲ್ಲೂ ಟ್ರೆಂಡಿಯಾಗಿರುವಂತಹ ವಿನ್ಯಾಸದವನ್ನು, ಶಾಪ್ನವರ ಬಳಿ ಕೇಳಿ ಪಡೆದು ಆಯ್ಕೆ ಮಾಡಬಹುದು.
ಈ ಸುದ್ದಿಯನ್ನೂ ಓದಿ | Star Saree Fashion: ಭುಜದಿಂದ ಕೆಳಗಿಳಿದ ಆಫ್ ಶೋಲ್ಡರ್ ಬ್ಲೌಸ್ ಸೀರೆ; ಗ್ಲಾಮರಸ್ ಆಗಿ ಕಾಣಿಸಿಕೊಂಡ ತಾಪ್ಸಿ ಪನ್ನು
ಡಿಸೈನವೇರ್ ಬಣ್ಣ ಹಾಗೂ ವಿನ್ಯಾಸ
ಸಾಕಷ್ಟು ಗ್ರ್ಯಾಂಡ್ ಡಿಸೈನವೇರ್ಗಳು ಬಣ್ಣ ಹಾಗೂ ವಿನ್ಯಾಸದಿಂದಲೇ ಸೆಳೆಯುತ್ತವೆ. ಹಾಗಾಗಿ ಅವರವರ ಸ್ಕಿನ್ಟೋನ್ಗೆ ಹೊಂದುವಂತಹ ಬಣ್ಣ ಹಾಗೂ ವಿನ್ಯಾಸಕ್ಕೆ ಮಹತ್ವ ನೀಡುವುದು ಉತ್ತಮ ಎನ್ನುತ್ತಾರೆ ವೀಕ್ಷಿತ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)