ಹಾವೇರಿ : ಹಾವೇರಿಯಲ್ಲಿ (Haveri news) ಮನೆ ಮುಂದೆ ಆಟವಾಡುತ್ತಿದ್ದ 12 ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಣಕ್ಕೆ (Kidnap case) ಯತ್ನಿಸಿದ್ದಾರೆ. ಅದೃಷ್ಟವಶಾತ್ ಬಾಲಕ ತನ್ನ ಸಮಯ ಪ್ರಜ್ಞೆಯಿಂದ ಅಪಹರಣಕಾರರಿಂದ (Crime news) ಬಚಾವ್ ಆಗಿದ್ದಾನೆ.
ಹಾಟನೆ ಹಾವೇರಿ ನಗರದ ಪುರದ ಓಣಿಯಲ್ಲಿ ನಡೆದಿದೆ. ಅಪಹರಣಕ್ಕೊಳಗಾದ ಬಾಲಕ ಮೊಹ್ಮದ್ ಅಯಾನ್ (12) ಎಂದು ತಿಳಿದುಬಂದಿದೆ. ಹಾವೇರಿ ನಗರದ ಪುರದ ಓಣಿ ನಿವಾಸಿ ಮೊಹಮ್ಮದ್ ಅಯಾನ್ ನಿನ್ನೆ ಸಂಜೆ ಸುಮಾರು 7 ಗಂಟೆಗೆ ಎಂದಿನಂತೆ ಹೊರಗಡೆ ಬಂದಿದ್ದ. ಈ ವೇಳೆ ಮಾರುತಿ ಇಕೋ ವ್ಯಾನ್ನಲ್ಲಿ ಮಾಸ್ಕ್ ಧರಿಸಿ ಬಂದ ನಾಲ್ವರು ಆಗುಂತಕರು, ಬಾಲಕನ್ನು ಹಿಡಿದು ವ್ಯಾನ್ಗೆ ತಳ್ಳಿದ್ದಾರೆ. ಓಣಿಯಿಂದ ಕಿಡ್ನಾಪ್ ಮಾಡಿದ ಬಳಿಕ ಅಲ್ಲಿಂದ ಅಕ್ಕಿಪೇಟೆಗೆ ಕರೆತಂದಿದ್ದಾರೆ. ಈ ವೇಳೆ ಅಲ್ಲಿಂದ ಬಿಡಿಸಿಕೊಳ್ಳಲು ಯತ್ನಿಸಿದ ಬಾಲಕನ ಮುಖದ ಭಾಗ, ಗಲ್ಲ ಹಾಗೂ ಬೆನ್ನಿಗೆ ಹಲ್ಲೆ ಮಾಡಿದ್ದಾರೆ.
ಅಷ್ಟರಲ್ಲಿ ಅಪಹರಣಕಾರರಿಗೆ ತುರ್ತು ವಿಸರ್ಜನೆ ಹಿನ್ನೆಲೆ ಮಧ್ಯೆ ವ್ಯಾನ್ ನಿಲ್ಲಿಸಿ ಕೆಳಗಿಳಿದಿದ್ದಾರೆ. ಗಾಡಿ ನಿಲ್ಲಿಸಿ ಡೋರ್ ತೆಗೆದಿದ್ದೇ ತಡ ಅಲ್ಲಿಂದ ತಕ್ಷಣ ಹೊರಕ್ಕೆ ಜಿಗಿದು ಬಾಲಕ ತಪ್ಪಿಸಿಕೊಂಡು ಬಂದಿದ್ದಾನೆ. ಬಾಲಕ ಮನೆಗೆ ಓಡೋಡಿ ಬಂದು ಈ ಘಟನೆ ಕುರಿತು ಪೋಷಕರಿಗೆ ತಿಳಿಸಿದ್ದಾನೆ. ಹಾವೇರಿ ನಗರದ ಚಿಕ್ಕ ಮಕ್ಕಳ ಪೋಷಕರು ಘಟನೆಯಿಂದ ಭಯಭೀತರಾಗಿದ್ದಾರೆ.
ಈಜಲು ಹೋದ ಬಾಲಕರು ಶವವಾಗಿ ಪತ್ತೆ
ಉಡುಪಿ: ಡ್ಯಾಮ್ನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಸಾವನ್ನಪ್ಪಿರುವ (drowned to death) ಘಟನೆ ಉಡುಪಿ (udupi news) ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆ ಗ್ರಾಮದಲ್ಲಿ ನಡೆದಿದೆ.
ಶ್ರೀಶ(13), ಜಯಂತ್(19) ಮೃತ ದುರ್ದೈವಿಗಳು. ರಜೆ ಹಿನ್ನೆಲೆ ಗೆಳೆಯರ ಜೊತೆ ಈಜಲು ಹೋಗಿದ್ದಾಗ ಅವಘಡ ಸಂಭವಿಸಿದೆ. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Road accident: ಸೇತುವೆಯಿಂದ ಕೃಷ್ಣಾ ನದಿಗೆ ಬಿದ್ದ ಕಾರು, ಮೂವರು ಸಾವು