| ವಿಶ್ಲೇಷಣೆ: ಬೆಂಕಿ ಬಸಣ್ಣ
ಇಂದಿನ ಸಮಾಜದ ರಿಯಾಲಿಟಿ ಎಂದರೆ ಬಹಳಷ್ಟು ದಂಪತಿಗಳು ಕೇವಲ “ಒಂದು ಮಗು” ವನ್ನು ಮಾತ್ರ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣಗಳು ಏನೆಂದರೆ ತುಂಬಾ ತಡವಾಗಿ (ಸುಮಾರು 30 ವರ್ಷಕ್ಕೆ) ಮದುವೆಯಾಗುವುದು, ಹೈ ಕಾಸ್ಟ್ ಆಫ್ ಲಿವಿಂಗ್, ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿರುವುದು ಮತ್ತು ಅವಿಭಕ್ತ ಕುಟುಂಬ ಪದ್ಧತಿ ಹೋಗಿ ನ್ಯೂಕ್ಲಿಯರ್ ಫ್ಯಾಮಿಲಿ ಆಗಿರಬಹುದು, ಮಗುವನ್ನು ಡೇ ಕೇರ್ ಅಲ್ಲಿ ಬಿಟ್ಟು ಬೆಳೆಸುತ್ತಿರುವುದು, ಕೆಲಸದ ಒತ್ತಡ, ಸಿಟಿ ಜೀವನದ ಒತ್ತಡ ಮುಂತಾದವುಗಳು.
ಎಲ್ಲರೂ ಕೇವಲ ಒಂದು ಮಗುವನ್ನು ಮಾಡಿಕೊಂಡರೆ ನಮ್ಮ ಹಿಂದುಗಳ ಸಂಖ್ಯೆ ಇನ್ನು ಕೆಲವು ದಶಕಗಳಲ್ಲಿ ಅರ್ಧದಷ್ಟು ಕಡಿಮೆಯಾಗುತ್ತದೆ. ಏಕೆಂದರೆ ಇಂದಿನ ತಲೆಮಾರಿನ ಇಬ್ಬರು ವ್ಯಕ್ತಿಗಳಿಂದ (ಅಂದರೆ ತಂದೆ ಮತ್ತು ತಾಯಿಯಿಂದ) ಮುಂದಿನ ತಲೆಮಾರಿಗೆ ಕೇವಲ ಒಬ್ಬ ವ್ಯಕ್ತಿ (ಒಂದು ಮಗು) ಹೋಗುತ್ತಾನೆ. ಅಂದ್ರೆ ಜನಸಂಖ್ಯೆ ಇಂದಿನ ತಲೆಮಾರಿನಿಂದ ಮುಂದಿನ ತಲೆಮಾರಿಗೆ 50% ಕಡಿಮೆಯಾಗುತ್ತದೆ.
ಒಂದು ಮಗುವಿನ ಪಾಲಿಸಿ ಹೀಗೆ ಮುಂದುವರೆದರೆ ಇನ್ನು ಕೆಲವೇ ದಶಕಗಳಲ್ಲಿ ಭಾರತದಲ್ಲಿ ಹಿಂದೂಗಳ ಸಂಖ್ಯೆ ಸದ್ಯದ ನೂರು ಕೋಟಿಯಿಂದ ಕೇವಲ ಐವತ್ತು ಕೋಟಿಗೆ ಕಡಿಮೆಯಾಗುತ್ತದೆ. ಆದರೆ ಈಗಲೂ ಐದು, ಆರು ಮಕ್ಕಳನ್ನು ಹಡೆಯುತ್ತಿರುವ ಮುಸ್ಲಿಮರ ಜನಸಂಖ್ಯೆ ಸದ್ಯದ 20 ಕೋಟಿ ಯಿಂದ 50 ಕೋಟಿಗೆ ಹೆಚ್ಚುತ್ತದೆ. ಹೀಗಾದರೆ ಇನ್ನು ಕೆಲವೇ ದಶಕಗಳಲ್ಲಿ (ಉದಾಹರಣೆಗೆ 2047) ಭಾರತ ಮುಸ್ಲಿಂ ದೇಶವಾಗಿ ಬದಲಾಗುತ್ತದೆ.
“ಒನ್ ಚೈಲ್ಡ್ ಪಾಲಿಸಿ” ಪ್ರಾರಂಭಿಸಿದ್ದ ಚೀನಾ ದೇಶವು ಮತ್ತು ಅತಿ ಕಡಿಮೆ ಮಕ್ಕಳನ್ನು ಹಡೆಯುತ್ತಿದ್ದ ಜಪಾನ್ ದೇಶಗಳು ಬರಿ ಮುದುಕರಿಂದ ತುಂಬಿ ಮುಂದಿನ ತಲೆಮಾರಿಗೆ ಯುವಕರಿಲ್ಲದೆ ಸಮಸ್ಯೆಯನ್ನು ಎದುರಿಸುತ್ತಿವೆ!
ಹಾಗಾಗಿ ಹವ್ಯಕ ಸ್ವಾಮಿಗಳು (Havyakara Sammelana) ಮೂರು ಮಕ್ಕಳನ್ನು ಮಾಡಿಕೊಳ್ಳಿ ಎಂದು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ಮೂರು ಮಕ್ಕಳು ಬೇಡವೆಂದರೆ ಕನಿಷ್ಠ ಎರಡು ಮಕ್ಕಳನ್ನಾದರೂ ಈಗಿನ ತಲೆಮಾರಿನ ದಂಪತಿಗಳು ಪಡೆಯಲೇಬೇಕು.
ಈ ಸುದ್ದಿಯನ್ನೂ ಓದಿ | IPPB Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿದೆ ವಿವಿಧ ಹುದ್ದೆ; ಇಂದೇ ಅರ್ಜಿ ಸಲ್ಲಿಸಿ