Wednesday, 30th October 2024

ಅಕ್ಟೋಬರ್‌ ಬಂತು, ರಜಾದಿನಗಳ ಸರಮಾಲೆ ಶುರು

ಬೆಂಗಳೂರು: ಪ್ರತಿ ವರ್ಷ ಅಕ್ಟೋಬರ್ ತಿಂಗಳು ಪ್ರವೇಶವಾಯಿತೆಂದರೆ, ಹಬ್ಬಹರಿದಿನಗಳ, ರಜಾದಿನಗಳ ಸರೆಮಾಲೆ.

ಈ ಬಾರಿ ಅಧಿಕ ಮಾಸ ಬಂದಿರುವುದರಿಂದ, ಅಶ್ವಯುಜ ಮತ್ತು ಕಾರ್ತಿಕ ಮಾಸಗಳಲ್ಲಿ ಬರುವ ಹಬ್ಬಗಳು ಒಂದು ತಿಂಗಳು ಮುಂದಕ್ಕೆ ಹೋಗಿವೆ. ಅಕ್ಟೋಬರ್ ಹದಿನೇಳರ ನಂತರ ನವರಾತ್ರಿಯ ಪರ್ವಕಾಲ ಆರಂಭ. ಆಯುಧಪೂಜೆಯ ಪ್ರಯುಕ್ತ ನಡೆಸಲಾಗುವ ಅಂಗಡಿ, ಆಫೀಸ್ ಪೂಜೆಗಳು ಕೊರೊನಾ ಹಾವಳಿಯಿಂದ ಕಳೆಗಟ್ಟುವ ಸಾಧ್ಯತೆ ಕಮ್ಮಿ.

ಅಕ್ಟೋಬರ್ ತಿಂಗಳಲ್ಲಿ ಎರಡನೇ, ನಾಲ್ಕನೇ ಶನಿವಾರ ಸೇರಿ ಒಟ್ಟು ಹತ್ತು ದಿನ ಬ್ಯಾಂಕ್/ಸಾರ್ವತ್ರಿಕ ರಜಾದಿನಗಳಿವೆ. ಅದರಲ್ಲೂ, ಆಯುಧಪೂಜೆ ಭಾನುವಾರ ಬಂದಿರುವುದರಿಂದ ಒಂದು ರಜಾ ಮಿಸ್ಸಿಂಗ್.

ಅ.2ರಂದು ಗಾಂಧಿ ಜಯಂತಿ (ಸಾರ್ವತಿಕ ರಜೆ), ಅ.4ರಂದು ಭಾನುವಾರ, ಅ.10 ಎರಡನೇ ಶನಿವಾರ, ಅ.11 ಮತ್ತು 18ರಂದು ಭಾನುವಾರ, ಅ.24ರಂದು ನಾಲ್ಕನೇ ಶನಿವಾರ, ಅ.25ರಂದು ಭಾನುವಾರ (ಆಯುಧಪೂಜೆ), ಅ.26ರಂದು ವಿಜಯದಶಮಿ,

ಅ.೩೦ರಂದು ಈದ್ ಮಿಲಾದ್ ಮತ್ತು ಅ.೩೧ರಂದು ವಾಲ್ಮೀಕಿ ಜಯಂತಿ. ಹೀಗಾಗಿ ಅಕ್ಟೋಬರ್‌ ಅನ್ನು ಹಬ್ಬದ ತಿಂಗಳು ಎನ್ನಬಹುದಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರು, ತಮ್ಮ ಬ್ಯಾಂಕಿನ ಕೆಲಸಕ್ಕಾಗಿ ಮುಂಚಿತವಾಗಿ ಮುಗಿಸಿಕೊಳ್ಳಬೇಕು.