Monday, 28th October 2024

Hyena Movie: ʼಹೈನʼ ಸಿನಿಮಾದ ಆಡಿಯೊ ಹಕ್ಕು ಝೀ ಮ್ಯೂಸಿಕ್‌ಗೆ!

Hyena Movie

ಬೆಂಗಳೂರು: ಅಮೃತ ಫಿಲಂ ಸೆಂಟರ್ ಮತ್ತು ಕೆ.ಕೆ. ಕಂಬೈನ್ಸ್ ಆಡಿಯಲ್ಲಿ ತಯಾರಾಗಿರುವ ಚಿತ್ರ ಹೈನದ (Hyena Movie) ಆಡಿಯೋ ರೈಟ್ಸ್ ಝೀ ಮ್ಯೂಸಿಕ್ (Zee Music) ತೆಕ್ಕೆಗೆ ಸೇರಿದೆ. ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಸುದ್ದಿಯನ್ನು ಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು ಎಲ್ಲ ವಯಸ್ಸಿನ ಜನರಿಗೆ ಇಷ್ಟವಾಗುವಂಥ ಸಾಹಿತ್ಯ, ಸಂಗೀತ ಮತ್ತು ಅದ್ಭುತವಾದ ದೃಶ್ಯಗಳನ್ನು ಸಂಯೋಜಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Halloween Style Ideas: ಹಾಲೋವೀನ್‌‌‌ ಪಾರ್ಟಿಗೆ ಭಯಾನಕವಾಗಿ ಮೇಕಪ್ ಮಾಡಿಕೊಳ್ಳುವುದು ಹೇಗೆ?

ಪ್ರಮುಖವಾಗಿ ಈ ಚಿತ್ರದಲ್ಲಿ ಕನ್ನಡ ಆರ್‌ಎಪಿ (RAP) ಹೈನ ಶೀರ್ಷಿಕೆ ಸಂಗೀತ ಕಾರ್ತಿಕ್ ಗುಬ್ಬಿ ಹಾಡಿದ್ದಾರೆ ಅದೇ ಚಿತ್ರದ ಹೈಲೈಟ್. ಸುಮಾರು 52ಕ್ಕೂ ಅಧಿಕ ತಾರಾಗಣ ಬಳಗ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದೆ. ಭಾರತ – ಬಾಂಗ್ಲಾದೇಶ ಗಡಿಯಲ್ಲಿ ಮತ್ತು ತುಂಬಾ ಅತಿ ಸೂಕ್ಷ್ಮವಾದ ಪ್ರದೇಶಗಳಲ್ಲಿ ಈ ಚಿತ್ರ ತಂಡ ದೃಶ್ಯಗಳನ್ನು ಚಿತ್ರೀಕರಿಸಿದೆ. ಹೈನ ಚಿತ್ರ ನಿಜ ಘಟನೆ ಆಧಾರಿತ ಚಿತ್ರವಾಗಿದ್ದು ಹೈನ ಚಿತ್ರವೂ ಅತೀ ಶೀಘ್ರದಲ್ಲಿ ಬೆಳ್ಳಿ ತೆರೆಮೇಲೆ ಬಿಡುಗಡೆ ಆಗಲಿದೆ.

ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ, ಲವ್ ಪ್ರಾನ್ ಮೆಹ್ತಾ ಸಂಗೀತ, ನಿಶಾಂತ್ ನಾಣಿ ಚಿತ್ರಕ್ಕೆ ಛಾಯಾಗ್ರಹಣ, ಲಕ್ಷ್ಮಣ್ ಶಿವಶಂಕರ್ ಸಂಭಾಷಣೆ ಮತ್ತು ಶಮೀಕ್ ಭಾರದ್ವಾಜ್ ಅವರ ಸಂಕಲನವಿದೆ.

ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಅ.30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ತಾರಾಗಣದಲ್ಲಿ ಡಾ.ರಾಜ್ ಕಮಲ್, ಹರ್ಷ್ ಅರ್ಜುನ್ ಕಲಾಲ್, ದಿಗಂತ್, ಲಕ್ಷ್ಮಣ್ ಶಿವಶಂಕರ್, ನಿರಂಜನ್, ವೆಂಕಟ್ ಭಾರದ್ವಾಜ್, ಶಿಶಿರ್ ಕುಮಾರ್, ನಂದಕುಮಾರ್, ಮನೋಹರ್, ಅಭಿಷೇಕ್ ಐಯಂಗಾರ್, ಲಾರೆನ್ಸ್ಹಾ ಪ್ರೀತಮ್ ಹಾಗೂ ಇತರರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.