-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿಯಂತೆ ಬಿಂಬಿಸುವ ಇಮಿಟೇಷನ್ ಪರ್ಲ್‌ಗಳಿಂದ ಡಿಸೈನ್ ಮಾಡಿರುವ ಡಿಸೈನರ್‌ವೇರ್‌ಗಳು (Imitation Pearl Designerwear Fashion) ಮಾನಿನಿಯರನ್ನು ಆಕರ್ಷಿಸಿವೆ. ಮಿಲ್ಕಿ ವೈಟ್, ಹಾಫ್ ವೈಟ್, ಕ್ರೀಮ್, ಐವರಿ ಶೇಡ್‌ನಲ್ಲಿ ಚಿಕ್ಕ, ದೊಡ್ಡ, ಮೀಡಿಯಂ ಹಾಗೂ ಬಿಗ್ ಸೈಝಿನ ಮಣಿಯಂತೆ ಕಾಣಿಸುವ ಇಮಿಟೇಷನ್ ಪರ್ಲ್‌ನಿಂದ ಸಿದ್ಧಪಡಿಸಿದ ಉಡುಪುಗಳು ಎಥ್ನಿಕ್ ಹಾಗೂ ಇಂಡೋ – ವೆಸ್ಟರ್ನ್ ಶೈಲಿಯಲ್ಲಿ ಬಿಡುಗಡೆಗೊಂಡಿವೆ.
ಅಂದಹಾಗೆ, ಇಮಿಟೇಷನ್ ಪರ್ಲ್ ಡಿಸೈನರ್‌ವೇರ್‌ಗಳು ಕೇವಲ ಸೆಲೆಬ್ರಿಟಿಗಳ ಉಡುಪಾಗಿಲ್ಲ, ಬದಲಿಗೆ, ಸಾಮಾನ್ಯ ಹೆಣ್ಣುಮಕ್ಕಳು ಧರಿಸಬಹುದಾದ ಸಿಂಪಲ್ ಟಾಪ್, ಫ್ರಾಕ್, ಮ್ಯಾಕ್ಸಿ ಹಾಗೂ ಗೌನ್‌ಗಳಲ್ಲೂ ಕಾಣಿಸಿಕೊಂಡಿವೆ.
ಐವರಿ ಶೇಡ್‌ನ ಇಮಿಟೇಷನ್ ಪರ್ಲ್ ಡಿಸೈನರ್‌ವೇರ್ಸ್
ಐವರಿ ಶೇಡ್‌ನ ಬಿಗ್ ಹಾಗೂ ಸ್ಮಾಲ್ ಪರ್ಲ್ ಬೀಡ್ಸ್‌ನ ರಫಲ್ ಫ್ರಾಕ್ಸ್, ಟಾಪ್ಸ್, ಲಾಂಗ್ ಶೀರ್ ಡಿಸೈನರ್‌ವೇರ್‌ಗಳು ಇಂದು ಚಾಲ್ತಿಯಲ್ಲಿವೆ. ಇನ್ನು, ಬ್ರೈಡಲ್ ಪರ್ಲ್ ಡಿಸೈನರ್‌ವೇರ್‌ಗಳಲ್ಲಿ ಮಿಲ್ಕಿ ವೈಟ್ ಜತೆಗೆ ಐವರಿ ಬೀಡ್ಸ್ ಇರುವಂತಹ ಡಿಸೈನ್‌ನವು ಮಾನಿನಿಯರ ಮನ ಗೆದ್ದಿವೆ.
ಕಲರ್ ಪರ್ಲ್ ಡಿಸೈನರ್‌ವೇರ್ಸ್
ಪರ್ಲ್‌ನಂತೆ ಕಾಣಿಸುವ ಬಣ್ಣ ಬಣ್ಣದ ಮಣಿಗಳಿರುವ ಪರ್ಲ್ ಡಿಸೈನರ್‌ವೇರ್‌ಗಳು ಒಂದೇ ಡ್ರೆಸ್‌ನ ಮಾನೋಕ್ರೋಮ್ ವರ್ಣಗಳಲ್ಲೂ ಕಾಣಿಸಿಕೊಂಡಿವೆ. ಕೆಲವು ವರ್ಷಗಳ ಹಿಂದೆ ಕಾಂಟ್ರಾಸ್ಟ್ ವರ್ಣಗಳಲ್ಲಿ, ಇವು ಬಿಡುಗಡೆಗೊಂಡಿದ್ದವು. ಆದರೆ, ಇದೀಗ ಸೇಮ್ ಟು ಸೇಮ್ ಕಾನ್ಸೆಪ್ಟ್‌ನಲ್ಲಿ ರಾಯಲ್ ಲುಕ್ ಶೈಲಿಯಲ್ಲಿ ವಿನ್ಯಾಸಗೊಂಡಿವೆ ಎನ್ನುತ್ತಾರೆ ಡಿಸೈನರ್ ಜೀನತ್.
ಡೆನಿಮ್ ಮೇಲೂ ಪರ್ಲ್ ಡಿಸೈನ್
ಇದೀಗ ಟೀನೇಜ್ ಫ್ಯಾಷನ್‌ನಲ್ಲಿರುವುದು ವೆಸ್ಟರ್ನ್ ಶೈಲಿಯ ಇಮಿಟೇಷನ್ ಪರ್ಲ್ ವಿನ್ಯಾಸದ ಡಿಸೈನರ್‌ವೇರ್‌ಗಳು. ನಮ್ಮ ಭಾರತೀಯ ಡಿಸೈನ್‌ಗಳಂತೆ ಕಂಡರೂ ಇವು ಕಸ್ಟಮೈಸ್ಡ್ ಇಲ್ಲವೇ ಮೊದಲೇ ವಿನ್ಯಾಸಗೊಳಿಸಿದ ಬ್ರಾಂಡೆಡ್ ಡೆನಿಮ್ ಪ್ಯಾಂಟ್ ಅಥವಾ ಟಾಪ್ ಇಲ್ಲವೇ ಜಾಕೆಟ್ ಮೇಲೆ ಕಂಡು ಬರುತ್ತವೆ.
ಇನ್ನು, ಪರ್ಲ್ ವಿನ್ಯಾಸ ಫೆಮಿನೈನ್ ಲುಕ್ ನೀಡುತ್ತದೆ ಎಂಬುದು ಹಲವು ಡಿಸೈನರ್‌ವೇರ್‌ಗಳ ಅಭಿಪ್ರಾಯವಾಗಿದೆ. ಈ ಮೊದಲು ಈ ಫ್ಯಾಷನ್ ಬಂದಿತ್ತಾದರೂ ಇದೀಗ ಚಾಲ್ತಿಯಲ್ಲಿರುವಷ್ಟು ಇರಲಿಲ್ಲ. ಇನ್ನು ಕೊಂಚ ವಿನ್ಯಾಸ ಬದಲಿಸಿಕೊಂಡ ನಂತರ ಡೆನಿಮ್ ಟಾಪ್, ಜಾಕೆಟ್ ಹಾಗೂ ಪ್ಯಾಂಟ್‌ಗಳ ಮೇಲೆ ಕಾಣಿಸಿಕೊಂಡಿವೆ.
ಪ್ರಯೋಗಾತ್ಮಕ ಡಿಸೈನರ್‌ವೇರ್‌ಗಳಿವು
ಮೊದಮೊದಲಿಗೆ ನಿರ್ವಹಣೆ ಕಷ್ಟ ಸಾಧ್ಯವಾದ್ದರಿಂದ ಪರ್ಲ್ ಡಿಸೈನರ್ವೇರ್ ಧರಿಸಲು ಹುಡುಗಿಯರು ಹಿಂಜರಿಯುತ್ತಿದ್ದರು. ಆದರೆ, ಇದೀಗ ಅಲ್ಟ್ರಾ ಮಾಡರ್ನ್ ಹುಡುಗಿಯರು ಹಾಗೂ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರು ತಮ್ಮ ಪ್ರಯೋಗಾತ್ಮಕ ಉಡುಪಿನಲ್ಲಿ ಸೇರಿಸಿಕೊಂಡಿದ್ದಾರೆ. ನಿರ್ವಹಣೆ ಕಷ್ಟವಾದರೂ ಧರಿಸಲಾರಂಭಿಸಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್. ಅವರ ಪ್ರಕಾರ, ಟೊರ್ನ್, ಪ್ಯಾಚ್, ರಿಪ್ಪಡ್ ಸೇರಿದಂತೆ ನಾನಾ ಬಗೆಯ ಡೆನಿಮ್ ಟಾಪ್, ಜಾಕೆಟ್ ಹಾಗೂ ಪ್ಯಾಂಟ್‌ಗಳ ಮೇಲೆ ಎಂಬ್ರಾಯ್ಡರಿ ಜತೆಗಿರುವ ಪರ್ಲ್ ಡಿಸೈನ್ಸ್ ಇತ್ತೀಚೆಗೆ ಟ್ರೆಂಡಿಯಾಗಿದೆ.
ಈ ಸುದ್ದಿಯನ್ನೂ ಓದಿ | Tribal Jewel Fashion: ಮಿಕ್ಸ್ ಮ್ಯಾಚ್ ಆಭರಣಗಳ ಟಾಪ್ ಲಿಸ್ಟ್‌ನಲ್ಲಿ ಟ್ರೈಬಲ್ ಇಮಿಟೇಷನ್ ಜ್ಯುವೆಲರಿ
ಇಮಿಟೇಷನ್ ಪರ್ಲ್ ಡಿಸೈನರ್‌ವೇರ್ ಪ್ರಿಯರಿಗೆ ಸಲಹೆ
- ಈ ಉಡುಪುಗಳನ್ನು ವಾಶ್ ಮಾಡುವಾಗ ಆಯಾ ಬ್ರಾಂಡ್ ಲೇಬಲ್‌ನಲ್ಲಿ ಕೊಟ್ಟಿರುವ ಮಾರ್ಗದರ್ಶನವನ್ನು ಅನುಸರಿಸಿ.
- ವಾಶಿಂಗ್ ಮೆಷಿನ್‌ನಲ್ಲಿ ವಾಶ್ ಮಾಡಲು ಅಸಾಧ್ಯ.
- ವಾಶ್ ಆದ ನಂತರ ಉಲ್ಟಾ ಮಾಡಿ ಹ್ಯಾಂಗರ್‌ಗೆ ಹಾಕಿ ಒಣಗಿಸಬೇಕು.
- ನೆರಳಿನಲ್ಲಿ ಮಾತ್ರ ಒಣಗಿಸಿ. ಡ್ರೈಯರ್‌ನಲ್ಲಿ ಕಡಿಮೆ ತಾಪಮಾನದಲ್ಲಿಒಣಗಿಸಬೇಕು.
- ಒಣಗಿಸಿದ ನಂತರ ಹ್ಯಾಂಗರ್‌ಗೆ ಹಾಕಿಡಿ. ಮಡಿಸಿಟ್ಟರೆ ಸುಕ್ಕಾಗುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)