ಇಂಡಿ: ಬಂಜಾರ ಸಮುದಾಯಕ್ಕೆ ಎಸ್ಸಿ ಸೆರ್ಪಡೆ ಮಾಡುವ ಮೂಲಕ ಸಮುದಾಯವನ್ನು ಆರ್ಥಿಕ, ಶೈಕ್ಷಣಿಕ, ರಾಜಕೀಯ , ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಕ್ಷಿಪ್ರಪಗತಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಇಂತಹ ಮಾತೃ ಹೃದಯದ ಪಕ್ಷವನ್ನು ಸೂರ್ಯ, ಚಂದ್ರ ಇರುವವರೆಗೂ ಮರೆಯ ಕೂಡದು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಪ್ರಕಾಶ ರಾಠೋಡ ಹೇಳಿದರು.
ಇಂಡಿ ತಾಲೂಕಿನ ಹಿರೇಬೇವನೂರ ಎಲ್.ಟಿ ಯಲ್ಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲರ ಪ್ರಚಾರಾರ್ಥ ಮತಯಾಚನೆ ಮಾಡಿ ಮಾತನಾಡಿದ ಅವರು ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಕೋಡುಗೆ ಅನೂನ್ಯವಾಗಿದೆ. ಶ್ರೀಮತಿ ಇಂಧಿರಾಗಾ0ಧಿಯವರು ಗರಿಬೀ ಹಟಾವೂ , ಉಳ್ಳುವವನೇ ಭೂಮಿಯ ಒಡೇಯ, ಬ್ಯಾಂಕುಗಳ ರಾಷ್ಟೀಕರಣ ಮಾಡುವ ಮೂಲಕ ಬಡವರ ತಾಯಿಯಾಗಿದ್ದಾರೆ.
ಶ್ರೀಮತಿ ಇಂಧಿರಾಗಾ0ಧಿಯವರು ತಾಂಡಾಗಳ ಅಭಿವೃದ್ದಿ ಹಾಗೂ ಕರ್ನಾಟಕ ರಾಜ್ಯದ ಅಂದಿನ ಮುಖ್ಯ ಮಂತ್ರಿ ದಿ.ಡಿ ದೇವರಾಜ ಅರಸರು ನಮ್ಮ ಸಮಾಜದ ಮೇಲೆ ಅಪಾರ ಕಾಳಜಿಯಿಂದಾಗಿ ನಮ್ಮ ತಂದೆ ಕೆ.ಟಿ ರಾಠೋಡ ಹಾಗೂ ಎಲ್. ಎನ್ ನಾಯಕ ಇವರು ಅಂದಿನ ಕಾಂಗ್ರೆಸ್ ಸರಕಾರದ ಮೇಲೆ ಒತ್ತಡ ಹಾಕಿ ಬಂಜಾರ ಸಮುದಾಯವನ್ನು ಎಸ್ಸಿ ಸೇರಿಸಿ ಬದ್ದತೆಯಿಂದ ಮೆರೆದಿದ್ದಾರೆ. ಇಂದು ಎಸ್ಸಿಯಲ್ಲಿ ಇರುವದರಿಂದಲೆ ನಮ್ಮ ಮಕ್ಕಳು ಮೋಮ್ಮಕ್ಕಳು ಹಾಗೂ ಸಮುದಾಯದ ಬಹುಸಂಖ್ಯಾತ ಜನರು ಆಯ್.ಎ.ಎಸ್ ,ಕೆ.ಎ.ಎಸ್ ಆಯ್.ಪಿ.ಎಸ್ ಹಾಗೂ ಇತರೆ ಬೇರೆ ಬೇರೆ ಉನ್ನತ ಉದ್ಯೋಗ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ. ಯಾರು ನಮಗಾಗಿ ತ್ಯಾಗ ಮಾಡಿದ್ದಾರೆ ಅಥವಾ ನಮ್ಮ ಸಮುದಾಯದ ಬಗ್ಗೆ ಯಾವ ಸರಕಾರ ಕೆಲಸ ಮಾಡಿದೆ ಅಂತಹವರ ಪರವಾಗಿ ನಮ್ಮ ಸಮಾಜ ಮತ ಹಾಕಬೇಕು.
ಇಂದು ಯಶವಂತರಾಯಗೌಡ ಪಾಟೀಲ ಇಂಡಿ ಮತಕ್ಷೇತ್ರದಲ್ಲಿ ನಮ್ಮ ಸಮಾಜಕ್ಕೆ ಸಾಕಷ್ಟು ಅನುಧಾನ ನೀಡಿದ್ದಾರೆ . ರಾಜ್ಯದಲ್ಲಿಯೇ ಆಗದೆ ಇರುವ ಬಂಜಾರ ಸಮುದಾಯಭವನ ಮಾದರಿಯನ್ನಾಗಿ ಮಾಡಿದ್ದಾರೆ. ಅಷ್ಠೇ ಅಲ್ಲದೆ ನಮ್ಮ ಸಮುದಾಯಕ್ಕೆ ವಿವಿಧ ಸ್ಥಳೀಯ ಆಡಳಿತದಲ್ಲಿ ಸಾಮಾಜಿಕ ನ್ಯಾಯ ನೀಡಿ ರಾಜಕೀಯ ಬದ್ದತೆಯಿಂದ ಕೆಲಸ ಮಾಡಿದ್ದಾರೆ ಇಂತಹ ಹೃದಯವಂತ ಶಾಸಕರ ಪರ ನೀವು ಸದಾ ಇರಬೇಕು .ಮನುಷ್ಯನಿಗೆ ಉಪಕಾರ ಸ್ಮರಣೆ ಇರಬೇಕು ಉಪಕಾರ ಮಾಡಿದ್ದಾರೆ ಈ ಬಾರಿ ೨೦೨೩ ರ ಮೇ ೧೦ ರಂದು ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಬಂಜಾರ ಸಮುದಾಯ ಶಾಸಕ ಯಶವಂತ ರಾಯಗೌಡರಿಗೆ ಶೇ.೧೦೦ ಕ್ಕೆ ನೂರರಷ್ಟು ಹೆಚ್ಚಿನ ಮತಗಳ ಅಂತರದಿ0ದ ಗೆಲ್ಲಿಸಬೇಕು ಎಂದರು.
ನನಗೆ ಅನೇಕ ಬಾರಿ ಬಂಜಾರ ಸಮುದಾಯದ ಹಾಗೂ ಸಂತ್ ಶ್ರೇಷ್ಠ ಸೇವಾಲಾಲ್ ಭಕ್ತರು ಇಡೀ ನನ್ನ ಜೀವನದ ಉದ್ದಕ್ಕೂ ಅತೀ ಹೆಚ್ಚು ಮತಗಳನ್ನು ನೀಡಿ ಗೆಲುವಿಗೆ ಬಹುಪಾಲು ನಿಮ್ಮದಾಗಿದೆ ಈ ಬಾರಿಯೂ ಕೂಡಾ ನಿಮ್ಮ ಅರ್ಶೀವಾದ ನನ್ನ ಮೇಲಿರಲಿ ಎಂದು ಅಭ್ಯರ್ಥಿ ಶಾಸಕ ಯಶವಂತರಾಯಗೌಡ ಪಾಟೀಲ ಮತಯಾಚನೆ ಮಾಡಿದರು.
ಕಾಂಗ್ರೆಸ್ ಪ್ರಚಾರ ಸಮಿತಿಯ ಕಾಂತಾ ನಾಯಕ ಮಾತನಾಡಿದರು.
ಬಿ.ಎಂ ಕೋರೆ, ಬಾಬುಸಾಹುಕಾರ ಮೇತ್ರಿ, ಮಾಜಿ ತಾ.ಪಂ ಅಧ್ಯಕ್ಷ ಶೇಖರ ನಾಯಕ, ಹರೀಶ್ಚಂದ್ರ ಪವಾರ, ರುಕ್ಮದೀನ ತದ್ದೇವಾಡಿ, ಪ್ರಶಾಂತ ಅಲಗೊಂಡ,ರುದ್ರಗೌಡ ಅಲಗೊಂಡ, ಬಳ್ಳೋಳ್ಳಿ ಬ್ಲಾಕ ಕಾಂಗ್ರೆಸ್ ಶೈಲಜಾ ಜಾಧವ, ರಾಜೇಶ ಪವಾರ ಸಂಜೀವ ಚವ್ಹಾಣ, ಸುರೇಶ ಗೋಣಸಗಿ ,ಸುಭಾಷ ಚವ್ಹಾಣ ,ಕಾಂಗ್ರೆಸ್ ಯುವ ರಮೇಶ ನಾಯಕ, ರಾಜಪಾಲ ಚವ್ಹಾಣ ನಾಯಕ, ಕಾರಾಬಾರಿ, ಡಾವ್ ಸೇರಿದಂತೆ ಅನೇಕ ಬಂಜಾರ ಮುಖಂಡರು ಉಪಸ್ಥಿತರಿದ್ದರು.