Thursday, 12th December 2024

ಸೌ ಅರುಣಾಬಾಯಿ ಗಾಂಧಿ ಪ್ರೌಢಶಾಲೆ ಶೇ ೮೦ ಫಲಿತಾಂಶ

ಇಂಡಿ: ೨೦೨೩-೨೪ ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸೌ|| ಅರುಣಾ ಬಾಯಿ ಗಾಂಧಿ ಬಾಲಿಕೆಯರ ಪ್ರೌಢಶಾಲೆಯ ಫಲಿತಾಂಶ ಕಳೆದ ಐದು ವರ್ಷಗಳಂತೆ ಈ ವರ್ಷವೂ ಶೇ ೮೦ ರಷ್ಟು ಫಲಿತಾಂಶ ವನ್ನು ಪಡೆದಿದೆ.

ಕುಮಾರಿ ಸವಿತಾ ಬಿರಾಜದಾರ ಶೇ ೯೪ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಕುಮಾರಿ ಸುಜಾತಾ ಪೂಜಾರಿಶೇ ೯೦ ಅಂಕ,ಸವಿತಾ ತಳವಾರಶೇ ೮೫ ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ|| ದೀಪಕ ದೋಶಿ,ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ,ಗೌರವ ಕಾರ್ಯ ದರ್ಶಿ ಪ್ರಭಾಕರ ಬಗಲಿ,ಸಿದ್ದಣ್ಣ ತಾಂಬೆ, ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಗುರುಗಳಾದ ರಾಘವೇಂದ್ರ ಕುಲಕರ್ಣಿ ಅಭಿನಂದಿಸಿದ್ದಾರೆ.